ದರ್ಶನ ವಿರುದ್ಧ ಫಿಲ್ಮ್ ಚೇಂಬರ್‌ ಗೆ ದೂರು ನೀಡಲು ಮುಂದಾದ ಪುನೀತ್ ರಾಜಕುಮಾರ್ ಅಭಿಮಾನಿಗಳು : ಏನಿದು ಹೊಸ ಸುದ್ದಿ ?

ದರ್ಶನ ವಿರುದ್ಧ ಫಿಲ್ಮ್ ಚೇಂಬರ್‌ ಗೆ  ದೂರು ನೀಡಲು ಮುಂದಾದ ಪುನೀತ್ ರಾಜಕುಮಾರ್  ಅಭಿಮಾನಿಗಳು : ಏನಿದು ಹೊಸ ಸುದ್ದಿ ?

ಹೌದು ಗೆಳೆಯರೇ ದರ್ಶನ ಫ್ಯಾನ್ಸ್ ಮತ್ತು  ಪುನೀತ್ ರಾಜಕುಮಾರ್  ಮದ್ಯೆ ಜಗಳ ನಿಲ್ಲುವ ಹಾಗೆ ಕಾಣುತ್ತಿಲ್ಲ . ಒಬ್ಬರ ಮೇಲೆ ಒಬ್ಬರು ಕೆಂಡ ಕಾರುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಮಧ್ಯೆ ಇನ್ನು ಯುದ್ಧ ನಡೆಯುತ್ತಲೇ ಇದೆ. ಇತ್ತೀಚೆಗೆ ಹುಬ್ಬಳ್ಳಿಗೆ ಹೋಗಿದ್ದ ದರ್ಶನ್ ಪರೋಕ್ಷವಾಗಿ ಚಪ್ಪಲಿ ಎಸೆದ ಪ್ರಕರಣಕ್ಕೆ ತಿರುಗೇಟು ನೀಡಿದ್ದರು.


 ಯಾರೋ ಕಿಡಿಗೇಡಿಗಳು ಮಾಡಿದ ಕೆಲಸಕ್ಕೆ ನಮ್ಮ ಮೇಲೆ ಗೂಬೆ ಕೂರಿಸಬೇಡಿ ಅನ್ನೋದು ಪುನೀತ್ ಫ್ಯಾನ್ಸ್ ವಾದ. ಹೀಗಿದ್ದರೂ, ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ರಾಜ್‌ಕುಮಾರ್ ಕುಟುಂಬದ ವಿರುದ್ಧ ಬಾಯಿಗೆ ಬಂದಂತೆ ಕಮೆಂಟ್ ಮಾಡುತ್ತಿದ್ದಾರೆ. ರಾಜವಂಶದ ಇತಿಹಾಸವನ್ನು ಅರಿತು ಮಾತಾಡಬೇಕು. " ಎಂದು ರಾಜವಂಶದ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳು ನಾಳೆ(ಡಿಸೆಂಬರ್ 28) ಫಿಲ್ಮ್ ಚೇಂಬರ್‌ಗೆ ದೂರು ನೀಡುತ್ತಿವೆ.
"ದರ್ಶನ್ ಕೂಡ ಕಾರ್ಯಕ್ರಮಗಳಲ್ಲಿ ತಮ್ಮ ಅಭಿಮಾನಿಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಫಿಲ್ಮ್ ಚೇಂಬರ್‌ಗೆ ಕರೆದು ಎಚ್ಚರಿಕೆ ನೀಡಬೇಕು" ಎಂದು ಇದೇ ಸಂದರ್ಭದಲ್ಲಿ ಫಿಲ್ಮ್ ಚೇಂಬರ್‌ ತಿಳಿಸಲು ತೀರ್ಮಾನಿಸಿದ್ದಾರೆ. 

ದರ್ಶನ ಮತ್ತು ಪುನೀತ್ ರಾಜಕುಮಾರ್ ಒಳ್ಳೆಯ ಸ್ನೇಹಿತರಾಗಿದ್ದರು ಅಲ್ಲದೆ ದರ್ಶನ ಸಹ ರಾಜಕುಮಾರ್ ಕುಟುಂಬಕ್ಕೆ ಯಾವಾಗಲು ಮರ್ಯಾದೆ ಕೊಡುತ್ತಿದ್ದರು . ಯಾರು ಒಬ್ಬ ಕಿಡಿಗೇಡಿ ಮಾಡಿದ ಕೆಲಸಕ್ಕೆ ಸುಮ್ಮನೆ ಇವರಿಬ್ಬರ ಫ್ಯಾನ್ಸ್ ಕಿತ್ತಾಡಿ ಕೊಳ್ಳುವ ಹಾಗಿದೆ 
ಇದನ್ನು ಕನ್ನಡ ಚಿತ್ರ ರಂಗದ ಗಣ್ಯರು ಹಾಗು ಹಿರಿಯ ನಟರು ಇದ್ದಕ್ಕೆ ಇತಿಶ್ರೀ ಆಡಲೇಬೇಕು . ಇಲ್ಲದ್ದಿದ್ದರೆ ಇದು ನಿಲ್ಲುವ ಸಾಧ್ಯತೆ ಕಾಣುತಿಲ್ಲ . ಫಿಲ್ಮ್ ಚೇಂಬರ್‌ ಸಹ ಸಭೆ ಕರೆದು ಒಂದು ತೀರ್ಮಾನ ತೆಗೆದು ಕೊಳ್ಳ ಬೇಕಾಗುತ್ತೆ ಇದ್ದಕ್ಕೆ ನಿಮ್ಮ ಪ್ರತಿಕ್ರಿಯೆ ತಿಳಿಸಿ