ರಮೊಲಾಗೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ ರಕ್ಷಕ ಬುಲೆಟ್ !! ಮದುವೆ ಫಿಕ್ಸ್ ? ಹೇಳಿದ್ದೇನು

ರಮೊಲಾಗೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ ರಕ್ಷಕ ಬುಲೆಟ್ !! ಮದುವೆ ಫಿಕ್ಸ್ ? ಹೇಳಿದ್ದೇನು

ಭರ್ಜರಿ ಬ್ಯಾಚಲರ್ಸ್ ನ ಸೀಸನ್ ಟ ನ ಈ ವಾರದಲ್ಲಿ ಪ್ರಪೋಸಲ್ ರೌಂಡ್ ಅನ್ನ ಇಟ್ಟಿದ್ದಾರೆ. ಇಂದು ಬೆಳಗ್ಗೆ ಸುನೀಲ್ ಹಾಗೂ ಅಂಬ್ರಿಟ ಅವರ ಪ್ರಪೋಸ್ ಮಾಡಿದಂತಹ ಪ್ರೋಮೋವನ್ನ ಬಿಟ್ಟಿದ್ದರು. ಈಗ ರಕ್ಷಕ ಬುಲೆಟ್ ಹಾಗೂ ರಮೋಲ ಅವರ ಪ್ರಪೋಸಲ್ ರೌಂಡ್ನಲ್ಲಿ ಈ ಇಬ್ಬರ ಸುಂದರ ಕ್ಷಣಗಳು ಮತ್ತು ಅಲ್ಲಿನ ಮಾತುಕಥೆಯ ಪ್ರೋಮೋವನ್ನ ಬಿಟ್ಟಿದ್ದಾರೆ. ಆಕಾಶದಲ್ಲಿ ಪ್ರಪೋಸ್ ಮಾಡೋ ರೀತಿ ಸುಂದರವಾಗಿ ರೊಮ್ಯಾಂಟಿಕ್ ಆಗಿ ಸುಂದರ ಜಾಗವನ್ನ ಭರ್ಜರಿ ಬ್ಯಾಚುಲರ್ಸ್ ನ ಸ್ಟೇಜ್ ಮೇಲೆ ನಿರ್ಮಾಣ ಮಾಡಿದ್ದಾರೆ ರಕ್ಷಕ್ ಬುಲೆಟ್.


ನಂತರ ರಮೋಲಾಗೆ ಪ್ರೊಪೋಸ್ ಮಾಡುತ್ತಾ ರಕ್ಷಕ್ ಬುಲೆಟ್ ಆಕಾಶದಲ್ಲಿ ನಿನ್ನ ಕರ್ಕೊಂಡು ಬಂದು ನನ್ನ ಮನಸ್ಸಿನ ಮಾತು ಹೇಳ್ತಾ ಇದ್ದೀನಿ. ನಾನು ಎಷ್ಟೇ ದೌಲತ್ತಲ್ಲಿ ಇದ್ದರೂ ಕೂಡ ಇನ್ಮುಂದೆ ಯಾವಾಗಲೂ ನಾನು ತಲೆ ಬಗ್ಗಿಸಿಕೊಂಡೆ ಇರ್ತೀನಿ ಅಂತ ರಮೋಲಾಗೆ ಉಂಗ್ರ ತೊಡಿಸುತ್ತ ರಕ್ಷಕ್ ಬುಲೆಟ್ ಈ ಮಾತನ್ನ ಹೇಳಿದ್ದಾರೆ. ನಂತರ ಇಬ್ಬರ ಮಧ್ಯೆ ಎಂಟ್ರಿ ಕೊಟ್ಟಂತ ನಿರಂಜನ್ ದೇಶ್ಪಾಂಡೆ ಆಕಾಶದ ಎತ್ತರದಲ್ಲಿ ನೀನು ಪ್ರಪೋಸ್ ಮಾಡಿದೆಯ ರಕ್ಷಕ್ ಆಕಾಶದಲ್ಲಿ ನಿಂತುಕೊಂಡು ನೀನು ಏನು ಹೇಳಬೇಕು ಅಂಕೊಂಡಿದ್ದೀಯಾ ರಮೋಲ ಅಂತ ನಿರಂಜನ್ ಅವರು ರಮೋಲಗೆ ಕೇಳಿದಾಗ ಇಡೀ ಜೀವನ ನಿನ್ನ ಜೊತೆ ಇರೋಕ್ಕೆ ಇಷ್ಟ ಪಡ್ತೀನಿ ಅಂತ ರಮೋಲ ರಕ್ಷಕ್ ಬುಲೆಟ್ ಗೆ ಹೇಳಿದ್ದಾರೆ ಇಡೀ ಜೀವನ ನಾನು ನಿನ್ನ ಜೊತೆ ಇರೋದಕ್ಕೆ ಇಷ್ಟ ಪಡ್ತೀನಿ ನಂತರ ನಾವಿಬ್ಬರು ಹೀಗೆ ಇರೋಣ ಅಂತ ರಕ್ಷಕ್ ಬುಲೆಟ್ ಹೇಳಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ ( video credit ; Ramesh Filmy Duniya )