ಹೌದು ಗೆಳೆಯರೇ ಈಗಾಗಲೆ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ . ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ಅವರು ಬಿಗ್ ಬಾಸ್ ನಲ್ಲಿ ಎಷ್ಟು ಕ್ಲೋಸ್ ಆಗಿ ವರ್ತಿಸುತ್ತಿದ್ದರು ಎಂದು ಎಲ್ಲರಿಗೂ ತಿಳಿದ ವಿಷಯವೇ . ಈ ಸಂದರ್ಭದಲ್ಲಿ ಸಾನ್ಯ ಅಯ್ಯರ್ ಅವರು ಸಂದರ್ಶನವೊಂದರಲ್ಲಿ ರೂಪೇಶ್ ಶೆಟ್ಟಿ ಜೊತೆ ಮದುವೆ ಆಗುವ ಬಗ್ಗೆ ಏನೆಂದು ತಿಳಿಸಿದ್ದಾರೆ ನೋಡನ ಬನ್ನಿ .
ಸಾನ್ಯಾ ಅಯ್ಯರ್ ಮುಖ್ಯ ಬಿಗ್ ಬಾಸ್ ಗೆ ಪ್ರವೇಶ ಆದ ಕೆಲವೇ ಸಮಯಗಳ ನಂತರ ಕೂಡಲೇ ಎಲಿಮಿನೇಷನ್ಆಗುತ್ತಾರೆ . ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ನಡೆಯುತ್ತಿದ್ದ ಲವ್ವಿ ಡಬ್ಬಿ ಪ್ರಸಂಗಗಳು ನಿಮಗೆಲ್ಲರಿಗೂ ತಿಳಿದಿರುವುದೇ. ಇನ್ನು ವೈಲ್ಡ್ ಕಾರ್ಡ್ ಮೂಲಕ ಮತ್ತೆ ಬಿಗ್ ಬಾಸ್ ಮನೆಗೆ ಇವರು ಎಂಟ್ರಿ ನೀಡುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದು ಮಾತ್ರ ದೀಪಿಕಾ ದಾಸ್.
ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಾನು ಸಿನಿಮಾಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಕಾಣುವ ಸಾಧ್ಯತೆ ಇದೆ ಎಂಬುದಾಗಿ ಕೂಡ ಅಭಿಮಾನಿಗಳಿಗೆ ಸಾನ್ಯಾ ಹಿಂಟ್ ನೀಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮದುವೆ ಪ್ರಪೋಸಲ್ ಕುರಿತಂತೆ ಕೂಡ ಮಾತನಾಡಿದ್ದಾರೆ
ಸಂದರ್ಶನ ಒಂದರಲ್ಲಿ ಸಾನ್ಯಾ ಅವರಿಗೆ ರೂಪೇಶ್ ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದರೆ ನೀವು ಎಂದು ಮಾಡುತ್ತೀರಿ ಎಂದು ಕೇಳುತ್ತಾರೆ. ಅದಕ್ಕೆ ಸಾನ್ಯಾ ನನಗೆ ನನ್ನ ಕೆರಿಯರ್ ತುಂಬಾ ಮುಖ್ಯ, ಅದಕ್ಕಾಗಿ ನಾನು ನನ್ನ ಕೆರಿಯರ್ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳುತ್ತಾರೆ.
ಸದ್ಯದಲ್ಲಿ ಮದುವೆ ಆಲೋಚನೆ ಅಂತು ಬಂದಿಲ್ಲ. ನನಗು ಮತ್ತು ರೂಪೇಶ್ ಆವರಿಗೆ ತಮ್ಮ ಕೆರಿಯರ್ ಮುಖ್ಯ, ನಾವಿಬ್ಬರು ಯಾವಾಗಲೂ ಬೆಸ್ಟ್ ಫ್ರೆಂಡ್ಸ್, ಮದುವೆ ಬಗ್ಗೆ ರೂಪೇಶ್ ಗೆ ಆಗಲಿ ನನಗಾಗಲಿ ಯಾವುದೇ ರೀತಿಯ ಆಲೋಚನೆ ಇಲ್ಲ ಎಂದಿದ್ದಾರೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ( video credit : news first kannada )