ಯಾರಿಗೂ ಹೇಳದ ಲೈಂ*ಗಿಕ ಹಗರಣ ಖಾಸಗಿ ವಿಷಯ ಹೊರಹಾಕಿದ ನಟಿ ಸೋನು ಗೌಡ

ಯಾರಿಗೂ ಹೇಳದ ಲೈಂ*ಗಿಕ ಹಗರಣ ಖಾಸಗಿ ವಿಷಯ ಹೊರಹಾಕಿದ ನಟಿ ಸೋನು ಗೌಡ

ಇಂತಿ ನಿನ್ನ ಪ್ರೀತಿಯ ಸಿನಿಮಾ ಮೂಲಕ ಪ್ರಸಿದ್ಧರಾದ ಚಿತ್ರ ನಟಿ ಸೋನು ಗೌಡ, ಲೈಂಗಿಕ ಹಗರಣಕ್ಕೆ ಸಂಭಂದಪಟ್ಟಂತೆ ಸುವರ್ಣ ನ್ಯೂಸ್’ನೊಂದಿಗೆ ಮಾತನಾಡಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಪ್ರಕರಣದ ಕುರಿತಾಗಿ ಮಾತನಾಡಿರುವ ನಟಿ ಸೋನು ಗೌಡ ‘ಯಾರೋ ಒಬ್ಬರು ಯಶಸ್ಸು ಗಳಿಸಿದಾಗ ಅವರ ಹೆಸರನ್ನು ಹಾಳು ಮಾಡುವವರು ಬಹಳಷ್ಟು ಮಂದಿ ಇರುತ್ತಾರೆ. ಕಿಡಿಗೇಡಿಯೊಬ್ಬ ನನ್ನ ಭವಿಷ್ಯವನ್ನು ಹಾಳು ಮಾಡುವುದಕ್ಕಾಗಿ ಇ-ಮೇಲ್ ಅಕೌಂಟ್  ಹ್ಯಾಕ್ ಮಾಡಿ ಇಂತಹ ಕೃತ್ಯ ಎಸಗಿದ್ದಾನೆ. ಈ ಕುರಿತಾಗಿ ನಾನು 4 ದಿನಗಳ ಹಿಂದೆಯೇ ಫೋಟೋ ವೈರಲ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದಿದ್ದಾರೆ.

ಅನೇಕ ಸೆಲೆಬ್ರಿಟಿಗಳು ಕೆಲವೊಂದು ಸನ್ನಿವೇಶ, ಸಂದರ್ಭಗಳಲ್ಲಿ ತಮ್ಮ ಜೀವನದ ಕಹಿ ಘಟನೆಗಳ ಕುರಿತು ಹೇಳುತ್ತಾರೆ. ಅದೇ ರೀತಿ ಸ್ಯಾಂಡಲ್ ವುಡ್  ನಟಿ ಸೋನು ಗೌಡ ಕೂಡ ತಮ್ಮ ಜೀವನದ ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ರೀತಿ ಮಾಧ್ಯಮಗಳ ಮುಂದೆ ಹೇಳಲು ಕಾರಣವಾಗಿದ್ದು ಅವರು ನಾಯಕಿಯಾಗಿ ನಟಿಸಿರುವ “ವೆಡ್ಡಿಂಗ್ ಗಿಫ್ಟ್” ಸಿನಿಮಾ. ಹೌದು, ಅವರು ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನಾಯಕಿಯಾಗಿಸಿನಿಮಾ‌ದದ್ದಾರೆ.

ಈ ಸಿನಿಮಾದ ಟ್ರೇಲರ್ ಹಾಗು ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಈ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಸೋನು ಗೌಡ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನೂ ನೆನಪಿಸಿಕೊಂಡಿದ್ದಾರೆ. 2010 ನವೆಂಬರ್ 1 ರಂದು ಸೋನು ಗೌಡ ಅವರು ಮನೋಜ್ ಕುಮಾರ್ ಅನ್ನುವವರ ಜೊತೆ‌ ಮದುವೆ ಆಗಿದ್ದರು.‌ ಆದರೆ ಹೆಚ್ಚು ದಿನ ಮದುವೆ ಉಳಿಯದೆ ಮುರಿದು ಬಿದ್ದಿತ್ತು.‌

ಕೆಲವು ‌ಕಾರಣಗಳಿಂದ ನೊಂದು ಗಂಡನಿಂದ ದೂರ ಆಗಿ ವಿಚ್ಛೇ-ದನ ಕೊಟ್ಟಿದ್ದರು. ‌ಇದರಿಂದಾಗಿ ಅವರು ಜೀವನದಲ್ಲಿ ಬಹಳ‌‌ ನೊಂದಿದ್ದರು.‌ ಅನೇಕ ಕಷ್ಟಗಳನ್ನು ಎದುರಿಸಿದ್ದರು. ‌ಆದರೆ ಎಲ್ಲವನ್ನೂ‌ ಧೈರ್ಯವಾಗಿ ಎದುರಿಸಿದ್ದರು. ‌ಸೋನು ಗೌಡ ಅವರು 2008 ರಲ್ಲಿ ಬಿಡುಗಡೆಯಾದ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪೋಷಕ ಪಾತ್ರ ಮಾಡಿದ್ದರು. ಆ ನಂತರ ಪರಮೇಶಿ ಪಾನ್ ವಾಲ, ಗುಲಾಮ, ಕಿರಗೂರಿನ ಗಯ್ಯಾಳಿಗಳು, i love you ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಅಷ್ಟೇ ಅಲ್ಲದೆ, ತೆಲುಗು, ತಮಿಳು,ಮಲಯಾಳಂ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿ ಸೈ ಅನಿಸಿಕೊಂಡ ಅವರು ಇತ್ತೀಚಿಗೆ ‌ಕನ್ನಡದ ಜನಪ್ರಿಯ ‌ಧಾರವಾಹಿ‌‌ ಜೊತೆ‌ಜೊತೆಯಲಿ ಯಲ್ಲಿ ನಟಿಸಿ‌ ಜನಮನ್ನಣೆ ಗಳಿಸಿದ್ದರು. ಇದೀಗ ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲಿ ನಟಿಸಿರುವ ಸೋನು ಗೌಡ ಅವರ ಪಾತ್ರ, ಅವರ ವೈಯುಕ್ತಿಕ‌ ಜೀವನಕ್ಕೆ ಸ್ವಲ್ಪ ಕನೆಕ್ಟ್ ಆಗುವ ರೀತಿ ಇದೆ ಎಂದಿದ್ದಾರೆ.

ಹಾಗಾಗಿ‌ ಈ ಸಿನಿಮಾ‌ದಲ್ಲಿ‌ ನಟಿಸುವಾಗ ವೈಯುಕ್ತಿಕ ‌ಜೀವನ‌ ಮತ್ತೆ ನೆನಪಾಗಿದೆ ಅಂದಿದ್ದಾರೆ. ಕಾರ್ಪೋರೆಟ್‌ ಲೈಫ್ ಸ್ಟೈಲ್‌ ನಡೆಸುವ ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ, ಎಲ್ಲವನ್ನೂ ಕಾರ್ಪೋರೆಟ್‌ ದೃಷ್ಟಿಯಲ್ಲೇ ನೋಡುವ ಹುಡುಗಿಯೊಬ್ಬಳ ಲೈಫ್ನಲ್ಲಿ ಮದುವೆಯ ನಂತರ ಏನೆಲ್ಲ ಬದಲಾವಣೆ ಆಗುತ್ತದೆ ಅನ್ನೋದರ ಸುತ್ತ ಸಿನಿಮಾ ನಡೆಯುತ್ತದೆ. ಕಾರ್ಪೋರೆಟ್‌ ಲೈಫ್ ಬಯಸುವ, ಇಂಡಿಪೆಂಡೆಂಟ್‌ ಆಗಿರುವಂಥ, ನಾನೇ ಎಲ್ಲವೂ ಎನ್ನುವಂಥ ಇಗೋ ಇರುವಂಥ ಕ್ಯಾರೆಕ್ಟರ್‌ ಸೋನು ಅವರದ್ದು.

ಪ್ರಾರಂಭದಲ್ಲಿ ಒಳ್ಳೆಯವಳಾಗಿರುವ ಆಕೆ ನಂತರ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.‌ ಹಾಗಾಗಿ ಇದೊಂದು ಸೋನು ಗೌಡ ಅವರಿಗೆ ವಿಶೇಷ ಸಿನಿಮಾ‌ ಆಗಲಿದೆ.‌ ಈ ಸಿನಿಮಾದಲ್ಲಿ ನನಗೆ ನನ್ನ‌ ಪಾತ್ರ ಇಷ್ಟವಾಗಿದೆ.‌ ಜನರಿಗೆ ಈ‌ ಹೊಸ ಪಾತ್ರದ ಸೋನು ಗೌಡ ಅವರನ್ನು ‌ಒಪ್ಪಿಕೊಳ್ಳುತ್ತಾರೆ ಎಂದು ತನ್ನ ಪಾತ್ರದ ‌ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ಈ‌ ಸಿನಿಮಾದಲ್ಲಿ ಹಿರಿಯ ನಟಿ‌‌ ಪ್ರೇಮಾ ಕೂಡ ಮುಖ್ಯ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ‌ ಮಾಹಿತಿ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.