ಸ್ಪಂದನ ಮತ್ತು ವಿಜಯ್ ಅವರದ್ದು ಲವ್ ಹೇಗೆ ಸ್ಟಾರ್ಟ್ ಆಗಿತ್ತು..? ಸ್ಪಂದನ ಅವರೇ ಹೇಳಿದ್ದ ಪ್ರೇಮದ ವಿಚಾರ

ಸ್ಪಂದನ ಮತ್ತು ವಿಜಯ್ ಅವರದ್ದು ಲವ್ ಹೇಗೆ ಸ್ಟಾರ್ಟ್ ಆಗಿತ್ತು..? ಸ್ಪಂದನ ಅವರೇ ಹೇಳಿದ್ದ ಪ್ರೇಮದ ವಿಚಾರ

ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನಾ ಅವರು ಇಂದು ಸಾಯಂಕಾಲ ಎಲ್ಲಾ ವಿಧಿ ವಿಧಾನಗಳ ಮೂಲಕ ಪಂಚಭೂತಗಳಲ್ಲಿ ಸೇರಿದರು. ನಿಜಕ್ಕೂ ಇವರ ಸಾವು ತುಂಬಾ ಕಾಡುತ್ತಿದೆ. ಯಾರಿಗೂ ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈಗಲೂ ಇವರ ಬಗ್ಗೆ ಮಾತನಾಡಬೇಕು ಎಂದಾದರೆ ಅವರ ಕುಟುಂಬಕ್ಕೆ ಆಗುತ್ತಿಲ್ಲ. ನಮಗೂ ಕೂಡ ಲೇಖನ ಬರೆಯುವಾಗ ಗಂಟಲು ಬಿಗಿದ ಹಾಗೆ ಆಗುತ್ತಿದೆ. ಅಷ್ಟರಮಟ್ಟಿಗೆ ಸ್ಪಂದನ ಅವರ ಅಗಲಿಕೆ ಎಲ್ಲರಿಗೂ ನೋವಾಗಿದೆ. ಹೌದು ಸ್ಪಂದನ ಅವರು ಅತಿ ದೊಡ್ಡ ಶ್ರೀಮಂತರ ಮನೆಯಲ್ಲಿ ಹುಟ್ಟಿದವರು, ನಂತರ ದೊಡ್ಡ ಶ್ರೀಮಂತರ ಮನೆಗೆ ಸೊಸೆಯಾಗಿ ಹೋದರೂ ಸಹ ಎಂದಿಗೂ ಕೂಡ ಆಡಂಬರದ ಜೀವನ ಮಾಡಲೆಬೇಕು ಎಂದು  ಅಂದುಕೊಳ್ಳಲೇ ಇಲ್ಲ.

ತುಂಬಾನೇ ಸರಳ ವ್ಯಕ್ತಿತ್ವ. ಯಾವುದೇ ಫಂಕ್ಷನ್ ನಲ್ಲಿ ಕಂಡರೂ ಸರಳವಾಗಿ ಇರುತ್ತಿದ್ದರು. ಹೇಳಬೇಕು ಅಂದ್ರೆ ಹೆಚ್ಚು ಎಲ್ಲೂ ಸಹ ಕಾಣಿಸಿಕೊಳ್ಳದ ಸ್ಪಂದನ ಅವರು ತುಂಬಾನೇ ಸೈಲೆಂಟ್ ಸ್ವಭಾವದವರು.. ಅದನ್ನು ಅವರ ಪತಿ ವಿಜಯ್ ರಾಘವೇಂದ್ರ ಅವರೇ ಹೆಚ್ಚು ಬಾರಿ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಇವರಿಬ್ಬರ ಜೋಡಿ ಮೇಲೆ ದೇವರಿಗೂ ಅಸುಹೇ ಆಯ್ತೋ ಏನೋ, ಬಹು ಬೇಗನೆ ಬೇರೆ ಬೇರೆ ಮಾಡಿಬಿಟ್ಟ. ಇವರಿಬ್ಬರ ಪ್ರೀತಿಯ ಆ ಒಡನಾಟ ಹೇಗಿತ್ತು ಎಂದರೆ, ಇವರಿಬ್ಬರದು ಹೆಚ್ಚು ಅವಿನಾಭಾವ ಸಂಬಂಧ ಹೊಂದಿದ್ದರು. ಇವರಿಬ್ಬರ ನಡುವೆ ಪ್ರೀತಿಯ ಸಂಬಂಧ ಗಟ್ಟಿಯಾಗಿಯೇ ಇತ್ತು. ಇವರಿಬ್ಬರದು ಲವ್ ಕಮ್ ಅರೆಂಜ್ಡ್ ಮ್ಯಾರೇಜ್. ಪ್ರೀತಿಸಿ ಮದುವೆಯಾದ ವಿಜಯ್ ರಾಘವೇಂದ್ರ ಅವರು ಪ್ರತಿಕ್ಷಣ ಅವರ ಪ್ರೀತಿಯ ಮಡದಿಯನ್ನು ನೆನೆಸಿಕೊಳ್ಳುತ್ತಾ ಜೀವನ ನಡೆಸಿದವರು ಎಂದರೂ ತಪ್ಪಾಗಲಾರದು. ಅಷ್ಟು ಹಚ್ಚಿಕೊಡಿದ್ದರು.  

ಹೌದು ಹೆಚ್ಚು ಭಾರಿ ವೇದಿಕೆ ಮೇಲೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಇದೀಗ ಏನೇ ಮಾಡಿದರು ಅತ್ತು ಕರೆದರೂ ಸ್ಪಂದನ ಅವರು ಮರಳಿ ಬಾರದ ಜಾಗಕ್ಕೆ ಹೋಗಿದ್ದಾರೆ. ಅವರ ಪ್ರೀತಿಯ ಮಗ ' ಶೌರ್ಯ ' ಇದರಿಂದ ಹೇಗೆ ಹೊರ ಬರುತ್ತಾನೋ, ಅತ್ತ ವಿಜಯ್ ರಾಘವೇಂದ್ರ ಅವರು ಹೇಗೆ ಹೊರ ಬರುತ್ತಾರೋ ಮತ್ತು ಅವರ ಕುಟುಂಬ ಇದರಿಂದ ಹೇಗೆ ಹೊರ ಬರುತ್ತದೆಯೋ ಆ ದೇವರೇ ಬಲ್ಲ...ಆ ಕುಟುಂಬಕ್ಕೆ ಸ್ಪಂದನ ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿ ಹೆಚ್ಚು ಕೊಡಲಿ ದೇವರು ಎಂದು ಪ್ರಾರ್ಥಿಸೋಣ.. ಸ್ಪಂದನ ಅವರ ಅಂತಿಮ ಕ್ರಿಯೆ ಹರಿಚ್ಚಂದ್ರ ಘಾಟ್ ನಲ್ಲಿ ಇಂದು ಮುಗಿದಿದೆ.

ಇದರ ನಡುವೆ ಅವರ ಮತ್ತು ವಿಜಯ್ ರಾಘವೇಂದ್ರ ಅವರ ಪ್ರೀತಿ ಹೇಗಿತ್ತು, ಒಮ್ಮೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ವಿಜಯ್ ಅವರು ಹೋಗಿದ್ದಾಗ ಅವರ ಪ್ರೀತಿ ಹೇಗೆ ಹುಟ್ಟಿತು ಎಂಬುದಾಗಿ ಸ್ವತಃ ಸ್ಪಂದನಾ ಅವರೇ ಕೆಲ ವಿಚಾರ ಹಂಚಿಕೊಂಡಿದ್ದರು. ಆ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಹೌದು ಈ ವಿಡಿಯೋ ನೋಡುತ್ತಿದ್ದಂತೆ, ಅವರ ನಗುಮುಖದ ಮಾತುಗಳ ಕೇಳುತ್ತಿದ್ದಂತೆ, ಕಣ್ಣಲ್ಲಿ ನೀರು ಹಾಗೆ ಜಾರುತ್ತದೆ. ಮತ್ತೆ ಇವರಿಬ್ಬರ ಪ್ರೀತಿ ಪ್ರೇಮ ನೋಡಿದರೆ ಈಗ ನೆನಪೊಂದೇ ಶಾಶ್ವತ ಎಂದೆನಿಸುತ್ತದೆ. ಒಮ್ಮೆ ಈ ವಿಡಿಯೋ ನೋಡಿ, ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.