ಬಿಗ್ ಶಾಕಿಂಗ್ ನ್ಯೂಸ್: ಪ್ರೀತಿ ಹೆಸರಿನಲಿ ಈ ಮೂವರು ಮಾಡಿದ್ದ ಕೆಲಸಕ್ಕೆ ಮನ ನೊಂದ ಕಿರುತೆರೆ ನಟಿ ಆತ್ಮಹತ್ಯೆ..!

Updated: Thursday, September 17, 2020, 09:20 [IST]

ಹೌದು ಮೂಲತಹ ಆಂಧ್ರಪ್ರದೇಶದ ಗೋದಾವರಿ ಅವರು ಈ ಶ್ರಾವಣಿ ಕೊಂಡಪಲ್ಲಿ. ಇವರಿಗಿದ್ದ ಸಿನಿಮಾ ಹುಚ್ಚು ಎಂಟು ವರ್ಷಗಳ ಹಿಂದೆ ಹೈದರಾಬಾದಿಗೆ ಬರುವಂತೆ ಮಾಡಿತ್ತು. ತದನಂತರ ಕಿರುತೆರೆಗಳಲ್ಲಿ ನಾಯಕಿ ಆಗಬೇಕೆಂಬ ಆಸೆ ಹೊತ್ತಿದ್ದ ಶ್ರಾವಣಿ ಅವರು ಸಣ್ಣಪುಟ್ಟ ಆಡಿಷನ್ ಕೊಡುತ್ತಾ, ಸಿನಿಮಾ ಜೀವನ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದರು.ಅದೇ ವೇಳೆ ಪರಿಚಯವಾದವರು ಸಾಯಿಕೃಷ್ಣ ರೆಡ್ಡಿ ಎಂಬ ವ್ಯಕ್ತಿ. ತದನಂತರ ಇವರಿಬ್ಬರಲ್ಲಿ ಸ್ನೇಹ ಹುಟ್ಟಿತು ,ಸ್ನೇಹ ಪ್ರೀತಿಗೆ ತಿರುಗಿ ಇವರಿಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಎಂದು ಕೇಳಿಬಂದಿದೆ.. 

Advertisement

ಆದರೆ ಮೂರು ವರ್ಷಗಳ ಇವರ ಪ್ರೀತಿ ಯಾವುದೋ ಒಂದು ಕಾರಣಕ್ಕೆ 2018 ರಲ್ಲಿ ಮುರಿದುಬಿದ್ದಿತ್ತು. ತದನಂತರ ಕಲಾಕ್ಷೇತ್ರದ ಜಗತ್ತಿನಲ್ಲಿ ದಾರವಾಹಿಯ ನಿರ್ಮಾಣಮಾಡುವ ಇನ್ನೊಬ್ಬ ವ್ಯಕ್ತಿಯ ಪರಿಚಯ ಶ್ರಾವಣಿ ಅವರಿಗೆ ಆಗುತ್ತದೆ ,ಆತನ ಹೆಸರು ಅಶೋಕ ರೆಡ್ಡಿ .ಈತನ ನಿರ್ಮಾಣದ ಧಾರಾವಾಹಿಯಲ್ಲಿ ನಟಿ ಶ್ರಾವಣಿಗೆ ನಟಿಸಲು ಅವಕಾಶವನ್ನು ಕೊಡುತ್ತಾನೆ, ಆದರೆ ಈ ಸಂಬಂಧವು ಜಾಸ್ತಿ ದಿನ ಉಳಿಯುವುದಿಲ್ಲ. ಹೀಗೆ ಜೀವನ ಸಾಗಿಸುತ್ತಿರುವ ನಟಿ ಶ್ರಾವಣಿಗೆ ಟಿಕ್ ಟಾಕ್ ಮೂಲಕ ದೇವರಾಜ್ ಎನ್ನುವ ವ್ಯಕ್ತಿ ಪರಿಚಯವಾಗುತ್ತಾನೆ.ನಟಿ ಶ್ರಾವಣಿ ಮತ್ತು ದೇವರಾಜ್ ನಡುವಿನ ಸಲುಗೆ ನೋಡಿ ಅಶೋಕ ರೆಡ್ಡಿ ಮತ್ತು ಸಾಯಿ ಕೃಷ್ಣರೆಡ್ಡಿ ತುಂಬಾ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ ಎಂದು ತಿಳಿದುಬಂದಿದೆ.. 

ಇದೇ ಸಮಯದಲ್ಲಿ ಸಾಯಿಕೃಷ್ಣರೆಡ್ಡಿ ಅವರು ನಟಿ ಶ್ರಾವಣಿ ಅವರ ಮನೆಗೆ ಹೋಗಿ, ದೇವರಾಜನಿಂದ ದೂರ ಇರುವಂತೆ ಚಾಡಿ ಹೇಳುತ್ತಾರೆ.ಇದೇ ಹಿನ್ನೆಲೆಯಲ್ಲಿ ನಟಿ ಶ್ರಾವಣಿ ಅವರ ಮನೆಯವರು ಕೂಡ ಸಾಯಿಕೃಷ್ಣ ರೆಡ್ಡಿ ಆರ್ಥಿಕ ಸಹಾಯ ಮಾಡುತ್ತಿದ್ದ ವಿಚಾರ ತಲೆಯಲ್ಲಿಟ್ಟುಕೊಂಡು ದೇವರಾಜನಿಂದ ದೂರ ಇರುವಂತೆ ಶ್ರಾವಣಿ ಮೇಲೆ  ಒತ್ತಡ ಹೇರಿದ್ದಾರೆ ಮತ್ತು ಅತ್ತ ದೇವರಾಜ್ ಕೂಡ, ಶ್ರಾವಣಿ ಸಾಯಿಕೃಷ್ಣ ಮತ್ತು ಅಶೋಕ ರೆಡ್ಡಿ ಅವರ ವಿಚಾರ ತಿಳಿದು ಈಕೆಯಿಂದ ದೂರ ಆಗಿದ್ದ ಎಂದು ಹೇಳಲಾಗಿದೆ. ನಟಿ ಶ್ರಾವಣಿ ಅವರು "ಮನಸು ಮಮತಾ" ಮತ್ತು "ಮೌನರಾಗಂ" ಎಂಬ ಕಿರುತೆರೆಯ ಹಿಟ್ ಧಾರಾವಾಹಿಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡರೂ ನಟಿ ಜೀವನದಲ್ಲಿ ತುಂಬಾ ನೊಂದಿದ್ದರು ಎಂದು ಕೇಳಿ ಬಂದಿದೆ..   

ಸಾಯಿಕೃಷ್ಣ ಕೂಡ, ತಾನೆ ಪ್ರೀತಿಸಿ ನನ್ನನ್ನು ದೂರ ಮಾಡಿದ ,ತದನಂತರ ಅಶೋಕ ರೆಡ್ಡಿ ಕೂಡಾ ನನ್ನನ್ನು ಪ್ರೀತಿಸಿ ದೂರ ಮಾಡಿದರು, ಆದರೆ ನಾನು ಇಷ್ಟಪಟ್ಟು ಪ್ರೀತಿ ಮಾಡಿದ ದೇವರಾಜ್ ಕೂಡ ನನ್ನಿಂದ ದೂರವಾದರು ಎಂದು ನಟಿ ತುಂಬಾ ನೊಂದಿದ್ದರಂತೆ, ಇದೇ ವಿಚಾರವಾಗಿ ದೇವರಾಜ್ ಬಳಿ ಎಲ್ಲ ವಿಚಾರ ತಿಳಿಸಿ ಮನೆಯವರ ತೀರಾ ಒತ್ತಡಕ್ಕೆ ಮನನೊಂದು, ಪ್ರೀತಿಯಲ್ಲಿ ತುಂಬಾ ನೊಂದು, ಸೆಪ್ಟೆಂಬರ್ ಎಂಟಕ್ಕೆ ನಟಿ ಶ್ರಾವಣಿ ಅವರು ಆತ್ಮಹತ್ಯೆಗೆ ಶರಣಾದರು ಎಂದು ಕೇಳಿ ಬಂದಿದೆ.. 

ಮೊದಲಿಗೆ ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜ್ ಒಬ್ಬನನ್ನೇ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ತದನಂತರ ಈಕೆಯ ಸಾವಿಗೆ ಒಬ್ಬನೇ ಕಾರಣನಲ್ಲ ಎಂದು ವಿಚಾರಣೆ ಮಾಡಿದ ಪೊಲೀಸರು, ಸಾಯಿಕೃಷ್ಣ ಅವರನ್ನು ಕೂಡ ಬಂಧಿಸಿದ್ದಾರೆ ಎನ್ನಲಾಗಿದೆ. ಮತ್ತು ಅಶೋಕ್ ರೆಡ್ಡಿಯನ್ನು ಬಂಧಿಸಲು,ಈತನ ಹುಡುಕಾಟದಲ್ಲಿದ್ದಾರೆ ಎಂದು ಕೇಳಿ ಬಂದಿದೆ. ಏನೇ ಇರಲಿ ಪ್ರೀತಿ ಹೆಸರಿನಲ್ಲಿ ಈ ರೀತಿಯ ಮೋಸಹೋಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಬೇಡಿ .ನಟಿ ಶ್ರಾವಣಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿ ಕಮೆಂಟ್ ಮಾಡಿ...ಆ  ನಟಿಯ ಫೋಟೋ ಕೆಳಗಡೆ ಇದೆ ನೋಡಿ