ವಿನೋದ್ ರಾಜ್ ಮದುವೆ ಬಗ್ಗೆ ನಟಿ ಲೀಲಾವತಿ ಹೇಳಿದ್ದೇನು..? ಸ್ಪೋಟಕ ಮಾಹಿತಿ

ವಿನೋದ್ ರಾಜ್ ಮದುವೆ ಬಗ್ಗೆ ನಟಿ ಲೀಲಾವತಿ ಹೇಳಿದ್ದೇನು..? ಸ್ಪೋಟಕ ಮಾಹಿತಿ

ನಟಿ ಲೀಲಾವತಿ ಅವರು ತಮ್ಮ ಮಗ ವಿನೋದ್ ರಾಜ್ ಅವರಿಗೆ ಮದುವೆ ಮಾಡಿದ್ದು, ವಿನೋದ್ ರಾಜ್ ಅವರ ಪುತ್ರ ಚೆನ್ನೈನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಈ ಸುದ್ದಿ ಬಗ್ಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕಳೆದ ಶನಿವಾರ ಸುದ್ದಿ ಮಾಧ್ಯಮದಲ್ಲಿ ವಿನೋದ್ ರಾಜ್ ಅವರು ಮದುವೆಯಾಗಿದ್ದಾರೆ ಎಂಬ ಫೋಟೋವೊಂದು ಹರಿದಾಡಿತ್ತು. ಈ ಸುದ್ದಿಯನ್ನು ಕೇಳಿದ ಹಲವರು ಶಾಕ್ ಆಗಿದ್ದರು. ಇದೀಗ ಈ ಬಗ್ಗೆ ನಟಿ ಲೀಲಾವತಿ ಅವರೇ ಸ್ಪಷ್ಟನೆಯನ್ನೂ ನೀಡಿದ್ದಾರೆ. 

ಹೌದು ನನ್ನ ಮಗನಿಗೆ ಮದುವೆ ಮಾಡಿದ್ದೇನೆ. ಅವನು ಹೆಣ್ಣಲ್ಲ, ಕದ್ದು ಬಸುರಾಗಿದ್ದಕ್ಕೆ ಮದುವೆಯಾಗಿದೆ ಎಂದು ಹೇಳಲು. ಅವನ ಬದುಕು ಚೆನ್ನಾಗಿರಲಿ ಎಂದು ಮದುವೆ ಮಾಡಿದ್ದೇನೆ. ಸೊಸೆಯೂ ಚಿನ್ನದಂತವಳು. ಇಬ್ಬರೂ ಚೆನ್ನಾಗಿದ್ದರೆ, ನನಗೆ ಅಷ್ಟೇ ಸಾಕು. ನಾನು ಬಡವಿ. ಬೇರೆಯವರಂತೆ ಪ್ಯಾಲೆಸ್ ಗಳಲ್ಲಿ ಅದ್ಧೂರಿಯಾಗಿ ಮದುವೆ ಮಾಡಿ ಸುದ್ದಿ ಮಾಡಲು ಆಗಲಿಲ್ಲ. ಮಗನ ಮದುವೆಯನ್ನು ತಿರುಮಪತಿಯಲ್ಲಿ ಮಾಡಿದ್ದೇನೆ.  

ಅವನ ಮದುವೆಗೆ ಏಳು ಜನ ಕನ್ನಡಿಗರು ಬಂದಿದ್ದರು. ಅಲ್ಲಿದ್ದವರು ಏನ್ ಲೀಲಾವತಿ ನಿಮ್ಮ ಮಗನ ಮದುವೆಗೆ ಏಳು ಜನರಷ್ಟೇನಾ ಎಂದು ಹೀಯಾಳಿಸಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಸರಳವಾಗಿ ಮಗನ ಮದುವೆಯನ್ನು ಮಾಡಿದೆ. ಲೀಲಾವತಿ ಕಡಿಮೆ ಹಣಕ್ಕೆ ಜಮೀನು ಖರೀದಿಸಿದರು ಎಂದೆಲ್ಲಾ ಮಾತನಾಡುತ್ತಾರೆ. ಆಗಾಗ ನನ್ನ ಹಾಗೂ ನನ್ನ ಮಗನ ಬಗ್ಗೆ ಏನೇನೋ ಹೇಳುತ್ತಿರುತ್ತಾರೆ. ಅವರಿಗ್ಯಾರಿಗೂ ಒಳ್ಳೆಯದಾಗೊಲ್ಲ. 

ನಾನು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೂ ಕೂಡ ನನ್ನ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಲಿಲ್ಲ ಎಂದು ಹೇಳಿದ್ದಾರೆ. ಇನ್ನು ವಿನೋದ್ ರಾಜ್ ಅವರು ಮಾತನಾಡಿ ಅಮ್ಮ ನೆಮ್ಮದಿಯಾಗಿದ್ದಾರೆ. ಅವರ ನೆಮ್ಮದಿಯಷ್ಟೇ ಮುಖ್ಯ. ನೆಮ್ಮದಿಯಾಗಿರಲು ಬಿಡಿ. ಅಮ್ಮ ಕರ್ನಾಟಕದ ಆಸ್ತಿ ಎಂದು ಹೇಳಿದ್ದಾರೆ.