KGF : ಕೆಜಿಎಫ್-3 ಚಿತ್ರದ ಬಗ್ಗೆ ಮಹತ್ವದ ಸುಳಿವು : ಯಾವಾಗ ಶುರುವಾಗತ್ತೆ ಗೊತ್ತೇ..?

KGF : ಕೆಜಿಎಫ್-3 ಚಿತ್ರದ ಬಗ್ಗೆ ಮಹತ್ವದ ಸುಳಿವು : ಯಾವಾಗ ಶುರುವಾಗತ್ತೆ ಗೊತ್ತೇ..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಇಡೀ ವಿಶ್ವದಲ್ಲೇ ಹೆಸರು ಮಾಡಿದೆ. ಈಗಾಗಲೇ ಚಿತ್ರದ ಚಾಪ್ಟರ್ – 1 ಹಾಗೂ ಚಾಪ್ಟರ್ – 2 ರಿಲೀಸ್ ಆಗಿದ್ದು, ಎರಡನ್ನೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಿಸಿದೆ. ಇನ್ನು ಇದೀಗ ಕೆಜಿಎಫ್ ಚಾಪ್ಟರ್ – 2 ಸಿನಿಮಾ ನೋಡಲು ಯಶ್ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. 

ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶ-ವಿದೇಶಗಳಲ್ಲೂ ಮತ್ತು ಬೇರೆ ಬೇರೆ ಭಾಷೆಗಳಲ್ಲೂ ಕೆಜಿಎಫ್ ಚಿತ್ರಕ್ಕೆ ವ್ಯಾಪಕ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗಿದೆ. ಇನ್ನು ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್, ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದರು. ಪ್ರಕಾಶ್ ರೈ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇನ್ನು ಮೂರನೇ ಚಾಪ್ಟರ್ ಚಿತ್ರೀಕರಣ ಇನ್ನೂ ಶುರುವಾಗಿಲ್ಲ.    

ಈ ಬಗ್ಗೆ ಇತ್ತೀಚೆಗಷ್ಟೇ ರವೀನಾ ಟಂಡನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕೆಜಿಎಫ್ ಚಾಪ್ಟರ್ -3 ಚಿತ್ರದ ಚಿತ್ರೀಕರಣಕ್ಕೆ ತಯಾರಾಗಿ ಎಂದು ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಕೂಡ ಫೋನ್ ಮಾಡಿದ್ದರು. ಕೆಜಿಎಫ್ ಚಿತ್ರದ ಶೂಟಿಂಗ್ ಬಗ್ಗೆ ಮಾತನಾಡಿ, ತಯಾರಾಗಿ ಎಂದು ಹೇಳಿದರು ಅಂತ ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಚಾರವನ್ನು ಕೇಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಿತ್ರೀಕರಣ ಆರಂಭವಾದರೆ, 2024 ರಲ್ಲಿ ಚಿತ್ರವನ್ನು ನೋಡಬಹುದು ಎಂದು ನಂಬಿದ್ದಾರೆ.