ದೇವಸ್ಥಾನಕ್ಕೆ ಹೋದಾಗ ತೆಂಗಿನ ಕಾಯಿ ಕೆಟ್ಟಿದ್ದರೆ ಏನು ಮಾಡಬೇಕು ಗೊತ್ತೇ?

Updated: Wednesday, October 14, 2020, 09:56 [IST]

ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ಆಚಾರ ವಿಚಾರಗಳು, ಸಂಪ್ರದಾಯ ,ದೇವರು ಇದರ ಬಗ್ಗೆ ನಮ್ಮ ಹಿರಿಯರು ಪದ್ದತಿಯನ್ನು ಆಚರಿಸುತ್ತಾ ಬಂದಿದ್ದಾರೆ. ದೇವರು ಇರುವ ಪವಿತ್ರ ಸ್ಥಳವಾದ ದೇವಸ್ಥಾನಗಳಿಗೆ ಜನರು ಹೋಗುವುದು ವಾಡಿಕೆ. ಒಂದೊಂದು ದಿನಕ್ಕೆ ಒಂದೊಂದು ದೇವರ ದೇವಸ್ಥಾನಕ್ಕೆ ಹೋಗುತ್ತಾರೆ. ಸೋಮವಾರ ಈಶ್ವರನ ದೇವಸ್ಥಾನಕ್ಕೆ ಹೋದರೆ ,ಮಂಗಳವಾರ ಅಮ್ಮನವರ ದೇವಸ್ಥಾನ, ಗುರುವಾರ ಮಠಕ್ಕೆ ಹೋದರೆ ಶುಕ್ರವಾರ ಚಾಮುಂಡೇಶ್ವರಿ, ಮೂಕಾಂಬಿಕಾ, ಹೀಗೆ ಹೆಣ್ಣು ದೇವರ ಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ. ಇದರಿಂದ ನೆಮ್ಮದಿ ಸಿಗುವುದರ ಜೊತೆಗೆ ಫಲ ಕೂಡ ದೊರೆಯುತ್ತದೆ.

   

Advertisement

ದೇವಸ್ಥಾನಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಹೊಂದಿರುತ್ತವೆ. ಏಕೆಂದರೆ ಅಲ್ಲಿ ಹೋದವರು ಹೆಚ್ಚು ಒಳ್ಳೆಯ ಮನಸ್ಥಿತಿಯಲ್ಲೇ ಇರುವುದರಿಂದ ಪಾಸಿಟಿವ್ ಎನರ್ಜಿ ಬಿಡುಗಡೆ ಆಗುವುದು. ಇದರಿಂದ ನಿಮಗೆ ಯಾವುದಾಎ ತಲೆ ಬಿಸಿ ಇದ್ದರೆ, ಟೆನ್ಷನ್, ಅಶಾಂತಿ, ಮನಸ್ಸಿನಲ್ಲಿ ಕಿರಿಕಿರಿ ಇದ್ದರೆ ದೇವಸ್ಥಾನಕ್ಕೆ ಭೇಟಿ ಇತ್ತರೆ ಒಂದು ರೀತಿಯ ನೆಮ್ಮದಿ ದೊರೆಯುತ್ತದೆ. ಇದು ಎಲ್ಲರ ಅನುಭವಕ್ಕೂ ಬಂದಿರುವಂತಹದ್ದು.

ದೇವಸ್ಥಾನಗಳಿಗೆ ಪೂಜೆ ಮಾಡಿಸುವುದು ಸಹಜ. ದೇವರ ಅನುಗ್ರಹ ಪಡೆಯಲು ಊದಿನ ಕಡ್ಡಿ,ಕರ್ಪೂರ ಹಚ್ಚುವುದು ಇದರಿಂದ ದೇವರಿಗೆ ಭಕ್ತಿ ಸಲ್ಲಿಸುವುದು ವಾಡಿಕೆ. ಇದರ ಜೊತೆ ತೆಂಗಿನ ಕಾಯಿ ಕೂಡ ಒಡೆಯುತ್ತಾರೆ. ದೇವರಿಗೆ ತೆಂಗಿನಕಾಯಿ ಒಡೆಯುವಾಗ ಅದು ಕೆಟ್ಟು ಹೋಗಿದ್ದರೆ ಏನು ಮಾಡಬೇಕು ಎಂಬ ಸಂದೇಹ ಎಲ್ಲರದ್ದು. ಕೆಲವರಿಗಂತೂ ಭಯವಾಗುತ್ತದೆ. ಏನಾದರೂ ಕೆಡುಕು ಉಂಟಾಗುತ್ತದೆಂದು ,ಅಪಶಕುನದ ಸಂಕೇತವಾ ನೋಡೋಣ ಬನ್ನಿ.

   

Advertisement

ಮನೆಯಲ್ಲಿ ಕಾಯಿ ಒಡೆಯುವಾಗ ಅದು ಕೆಟ್ಟಿದ್ದರೆ ಏನು ಮಾಡಬೇಕೆಂದರೆ ಕೂಡಲೇ ಕೈಕಾಲು ಅಥವಾ ಮೊಣಕಾಲು ತೊಳೆದು ದೀಪ ಹಚ್ಚಿ ಇನ್ನೊಂದು ಕಾಯಿಯನ್ನು ಒಡೆಯಬೇಕು. ತೆಂಗಿನಕಾಯಿ ಕೆಟ್ಟಿದ್ದರೆ ಹೆದರಬೇಡಿ. ಹಾಗೇ ಕೆಟ್ಟರೆ ನಮ್ಮ ದೃಷ್ಟಿ ದೋಷಗಳು ಹೋಗುತ್ತವೆ ಎಂದರ್ಥ.

ಪ್ರತಿಯೊಬ್ಬ ಸಮಸ್ಯೆಗೂ ಪರಿಷ್ಕಾರ ಇರುತ್ತೆ. ಸಮಸ್ಯೆ ಇದೆ ಎಂದು ತಲೆಕಡಿಸಿಕೊಳ್ಳಬಾರದು. ತೆಂಗಿನಕಾಯಿ ಕೆಟ್ಟರೆ ಒಳ್ಳೆಯದೇ. ಅದು ನಮಗೆ ದೃಷ್ಟಿ ತಗುಲಿದ್ದರೆ ನಿವಾರಣೆ ಆಗುತ್ತೆ ಅಂತ ಅರ್ಥ. 

ಮನೆಯಲ್ಲಿ ಪ್ರತಿ ದಿನ ಪೂಜೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಮಗೆ ಸಕಾರಾತ್ಮಕ ಶಕ್ತಿಯು ಬೆಳೆಯುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಸಂಪತ್ತು ವೃದ್ದಿಯಾಗುತ್ತೆ. ಮನಸ್ಸಿನಲ್ಲಿ ಶಾಂತಿ ದೊರೆಯುತ್ತದೆ.

ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 3 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 8548998564 Call / WhatsApp