ಕೇವಲ ಎರಡು ಚಮಚ ಎಣ್ಣೆಯಲ್ಲಿ ರುಚಿ ರುಚಿಯಾದ ಸ್ನಾಕ್ಸ್! ಇದನ್ನ ಮಾಡುವ ವಿಧಾನ ಎಷ್ಟು ಸುಲಭ ಗೊತ್ತಾ? ಒಮ್ಮೆ ಟ್ರೈ ಮಾಡಿ ನೋಡಿ
Updated:Thursday, August 13, 2020, 19:08[IST]

ಸೂಪರ್ ಸ್ನಾಕ್ಸ್ ಮನೆಯಲ್ಲಿ ಮಾಡಿ ನೋಡಿ..
ಬೇಕಾಗುವ ಸಾಮಾಗ್ರಿಗಳು:
1.ಕ್ಯಾರೇಟ್
2.ಆಲೂಗೆಡ್ಡೆ
3.ಎಣ್ಣೆ
4.ಬೆಳ್ಳುಳ್ಳಿ
5.ಈರುಳ್ಳಿ
6.ಅರಶಿನ
7.ಗರಂ ಮಸಾಲ
8.ರೆಡ್ಚಿಲ್ಲಿ ಪೌಡರ್
9.ಉಪ್ಪು
10.ಕೊತ್ತಂಬರಿಸೊಪ್ಪು
11.ಚಿರೋಟಿ ರವ
12.ಟೊಮೇಟೋ ಸಾಸ್
13.ತುಪ್ಪ
ಮಾಡುವ ವಿಧಾನ:
ಒಂದು ಪ್ಯಾನ್ ಗೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ ತುರಿದ 1 ಕ್ಯಾರೇಟ್,ತುರಿದ ಆಲೂಗೆಡ್ಡೆ ನೀರು ಹಿಂಡಿ ಹಾಕಿ,ಸ್ವಲ್ಪ ಜಜ್ಜಿದ ಬೆಳ್ಳುಳ್ಳಿ ,ಈರುಳ್ಳಿ ಸಣ್ಣದಾಗಿ ಕಟ್ ಮಾಡಿ ಹಾಕಿ. 2 ನಿಮಿಷ ಫ್ರೈ ಮಾಡಿ.
ನಂತರ ಸ್ವಲ್ಪ ಗರಂ ಮಸಾಲ ಪುಡಿ,ಚಿಲ್ಲಿ ಪೌಡರ್,ಅರಶಿನ ಹುಡಿ,ಉಪ್ಪು ಹಾಕಿ 1 ನಿಮಿಷ ಫ್ರೈ ಮಾಡಿ ಕೊತ್ತಂಬರಿಸೊಪ್ಪು ಹಾಕಿ ತಣ್ಣಗಾಗಲು ತೆಗೆದು ಇರಿಸಿ.
ಒಂದು ಬೌಲ್ ಗೆ 1 ಕಾಲು ಕಪ್ ಚಿರೋಟಿ ರವ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಸ್ವಲ್ಪನೇ ನೀರು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಅದುಮಿ ಗಟ್ಟಿಯಾಗಿ ಇರಲಿ ನಂತರ 1 ನಿಮಿಷ ಮುಚ್ಚಿ ಇಡಿ.
ಒಂದು ಬೌಲ್ ಗೆ ಅರ್ಧ ಕಪ್ ಟೊಮೇಟೋ ಸಾಸ್,1 ಟೇಬಲ್ ಸ್ಪೂನ್ ತುಪ್ಪ ,ಕಾಲು ಸ್ಪೂನ್ ರೆಡ್ ಚಿಲ್ಲಿ ಪೌಡರ್ ಹಾಕಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಇಡಿ.
ನಂತರ ಚಪಾತಿ ಮಾಡುವ ಗಾತ್ರದಲ್ಲಿ ಹಿಟ್ಟನ್ನು ಉಂಡೆ ಮಾಡಿ ದಪ್ಪವಾಗಿ ಲಟ್ಟಿಸಿ ನಂತರ ಒಂದು ಚಪಾತಿ ಮಲೆ ಮಾಡಿದ ಪೇಸ್ಟ್ ಅನ್ನು ಬ್ರೆಶ್ ಮೂಲಕ ಲೇಪಿಸಿ ಅದರ ಮೇಲೆ ಮಾಡಿ ಇಟ್ಟ ಮಸಾಲ ಹಾಕಿ ಸುತ್ತಲೂ ಹಾಕಿ ಇನ್ನೊಂದು ಚಪಾತಿ ಹಾಕಿ ಅದರ ಮೇಲೂ ಕೂಡ ಪೇಸ್ಟ್ ಹಾಕಿ ಮಸಾಲ ಹಾಕಿ ಇನ್ನೊಂದು ಚಪಾತಿ ಹಾಕಿ ಮುಚ್ಚಿ ಇದೇ ರೀತಿ 5 ಚಪಾತಿ ಹಾಕಿ ಕೊನೆಗೆ ಚಪಾತಿ ಹಾಕಿ ಮುಚ್ಚಿ.
ನಂತರ ಒಂದು ಅಗಲವಾದ ಬಟ್ಟಲಿಗೆ ಎಣ್ಣೆ ಹಾಕಿ ,ಮಾಡಿದ ಲೇಯರ್ ಚಪಾತಿಯನ್ನು ಬಟ್ಟಲಿನಲ್ಲಿ ಇಡಿ. ನಂತರ ಇಡ್ಲಿ ಮಾಡುವ ಸಾಧನದಲ್ಲಿ ಮುಚ್ಚಿ 5 ನಿಮಿಷ ಬೇಯಿಸಿ.
ನಂತರ ಮುಚ್ಚಳ ತೆಗೆಯಿರಿ. ನಂತರ ಚಾಕೂ ಅಥವಾ ಫಿಸ್ಸಾ ಕಟ್ಟರ್ ನಲ್ಲಿ ಬೇಕಾದ ಶೇಪ್ ಗೆ ಕಟ್ ಮಾಡಿ ಒಂದು ಕಾವಲಿಯಲ್ಲಿ ಎಣ್ಣೆ ಸ್ವಲ್ಪ ಹಾಕಿ 1 ನಿಮಿಷ ಫ್ರೈ ಮಾಡಿ ತಿರುವಿ ಹಾಕಿ.ಇದನ್ನು ಸಾಸ್ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ.
ಶೇರ್ ಮಾಡಲು ಮರೆಯಬೇಡಿ.
ವಿಡಿಯೋ: