ಜಿಲೇಬಿ ಮಾಡಲು ಈ ಜನ್ಮದಲ್ಲೂ ನನ್ನಿಂದಾಗಲ್ಲ ಅನ್ನುವವರು, ಕೇವಲ 10 ನಿಮಿಷದಲ್ಲಿ ಮಾಡಲು ಇಲ್ಲಿದೆ ಟಿಪ್ಸ್

By Kannada Desk

Updated:Thursday, August 13, 2020, 19:09[IST]

ಜಿಲೇಬಿ ಮಾಡಲು ಈ ಜನ್ಮದಲ್ಲೂ ನನ್ನಿಂದಾಗಲ್ಲ ಅನ್ನುವವರು, ಕೇವಲ 10 ನಿಮಿಷದಲ್ಲಿ ಮಾಡಲು ಇಲ್ಲಿದೆ ಟಿಪ್ಸ್

ಜಿಲೇಬಿ ಮಾಡಲು ಬಾರದವರೂ ಕೂಡ ಕೇವಲ 10 ನಿಮಿಷದಲ್ಲಿ ಮಾಡಬಹುದು..ರುಚಿಯಾದ ಜಿಲೇಬಿ ಈಗ ಮನೆಯಲ್ಲಿಯೇ ಮಾಡಿ ನೋಡಿ..

ಬೇಕಾಗುವ ಸಾಮಾಗ್ರಿಗಳು:
1.ಮೈದಾ ಹಿಟ್ಟು 1 ವರೆ ಕಪ್
2.ಸಕ್ಕರೆ 1 ಕಪ್
3.ಕೇಸರಿ 
4.ಲಿಂಬೆ 
5.ಬೇಕಿಂಗ್ ಸೋಡ ಅರ್ಧ ಟೇಬಲ್ ಸ್ಪೂನ್.
6.ಅರ್ಧ ಕಪ್ ಹುಳಿ ಮೊಸರು.
7.ಎಣ್ಣೆ

 

ಮಾಡುವ ವಿಧಾನ:
ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ 1 ಕಪ್ ಸಕ್ಕರೆ ಹಾಗೂ ಅದೇ ಕಪ್ ನಲ್ಲಿ ಅರ್ಧ ಕಪ್ ನೀರು ಹಾಕಿ ನಂತರ ಸ್ವಲ್ಪ ಲಿಂಬೆ ರಸ ಹಾಕಿ ಸ್ವಲ್ಪ ಕೇಸರಿ ಹಾಕಿ ಮಿಕ್ಸ್ ಮಾಡಿ ಮೀಡಿಯಂ ಫ್ಲೇಮ್ ನಲ್ಲಿ ಪಾಕ ಮಾಡಿ ನಂತರ ತೆಗೆದು ಇರಿಸಿ.

ನಂತರ ಒಂದು ಕಪ್ ಗೆ 1 ವರೆ ಕಪ್ ಮೈದಾ ಹಾಗೂ ಅರ್ಧ ಕಪ್ ಮೊಸರು ಹಾಕಿ ಸ್ವಲ್ಪ ನೀರು ಹಾಕಿ ಕಲಸಿ. ನಂತರ ಅರ್ಧ ಸ್ಪೂನ್ ಬೇಕಿಂಗ್ ಸೋಡ, ಸ್ವಲ್ಪ ಪಿಂಚ್ ಅಷ್ಟು ಕೇಸರಿ  ಕಲರ್ ಬರಲು ಹಾಕಿ ಮಿಕ್ಸ್ ಮಾಡಿ.

 

ಹಿಟ್ಟು ನೋಡಲು ದೋಸೆ ಹಿಟ್ಟಿನ ರೀತಿ ದಪ್ಪ ಇರಬೇಕು. ನಂತರ ಸಾಸ್ ನ ಬಾಕ್ಸ್ ಅಥವಾ ಯಾವುದಾದರೂ ಚಿಕ್ಕ ಹೋಲ್ ಇರುವ ಬಾಕ್ಸ್ ಗೆ ಹಿಟ್ಟು ಹಾಕಿ  ಕಾದ ಎಣ್ಣೆಗೆ ಹಾಕಿ ತಿರುಗಿಸಿ. ಜಿಲೇಬಿ ತರ ಮಾಡಿ. ನಂತರ ಚೆನ್ನಾಗಿ ಫ್ರೈ ಮಾಡಿ ತೆಗೆದು ಪಾಕಕ್ಕೆ ಹಾಕಿ ತಿರುವಿ ಹಾಕಿ ಸ್ವಲ್ಪ ಹೊತ್ತು ಇಡಿ. ನಂತರ ಜಿಲೇಬಿ ತಯಾರಾಗುತ್ತದೆ.

ಶೇರ್ ಮಾಡಲು ಮರೆಯದಿರಿ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ: