ಮನೆಯಲ್ಲೇ ರುಚಿ ರುಚಿಯಾದ ಆಲೂಗಡ್ಡೆ ಚಿಪ್ಸ್ ಮಾಡುವುದು ಹೇಗೆ ಗೊತ್ತಾ? ಎಷ್ಟು ಸೂಪರ್ ಟೇಸ್ಟ್ ಗೊತ್ತಾ..

By Kannada Desk

Updated:Monday, August 17, 2020, 10:38[IST]

ಮನೆಯಲ್ಲೇ ರುಚಿ ರುಚಿಯಾದ ಆಲೂಗಡ್ಡೆ ಚಿಪ್ಸ್ ಮಾಡುವುದು ಹೇಗೆ ಗೊತ್ತಾ? ಎಷ್ಟು ಸೂಪರ್ ಟೇಸ್ಟ್ ಗೊತ್ತಾ..

ಮನೆಯಲ್ಲಿಯೇ ಗರಿಗರಿ ಆಲೂಗೆಡ್ಡೆ ಚಿಪ್ಸ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.
ಬೇಕಾಗುವ ಸಾಮಾಗ್ರಿಗಳು:

1.2 ಆಲೂಗೆಡ್ಡೆ
2.ಎಣ್ಣೆ
3.ಕೆಂಪುಮೆಣಸಿನ ಹುಡಿ
4.ಉಪ್ಪು

ಮಾಡುವ ವಿಧಾನ:
ಎರಡು ಆಲೂಗೆಡ್ಡೆ ತೆಗೆದು ಸಿಪ್ಪೆ ತೆಗೆದು ಇಡಿ. ನಂತರ ಸ್ಲೈಸ್ ತೆಗೆಯುವ ಸಾಧನದಲ್ಲಿ ಸ್ಲೈಸ್ ತೆಗೆಯಿರಿ.

ಒಂದು ಬೌಲ್ ಗೆ ನೀರು ಹಾಕಿ ಅದಕ್ಕೆ ಆಲೂಗೆಡ್ಡೆ ಹಾಕಿ ತೊಳೆಯಿರಿ. ಹೆಚ್ಚೆಂದರೇ 3 ಬಾರಿಯಾದರೂ ತೊಳೆಯಿರಿ. ನಂತರ ಒಂದು ಬೌಲ್ ಗೆ ನೀರು ಹಾಕಿ ಅದರಲ್ಲಿ 15 ನಿಮಿಷ ನೆನೆಯಲು ಬಿಡಿ.

ನಂತರ ಒಂದು ಟವೆಲ್ ಗೆ ಹಾಕಿ ಬಿಡಿಸಿ ಹಾಕಬೇಕು ಟವೆಲ್ ನಿಂದ ನೀರು ಕಂಪ್ಲೀಟ್ ಹೋಗುವ ತನಕ ಅದುಮಿ.

ನಂತರ ಒಂದು ಬಾನಲೆಗೆ ಎಣ್ಣೆ ಹಾಕಿ ಕಾದ ನಂತರ  ಆಲೂಗಡ್ಡೆ ಸ್ಲೈಸ್ ಹಾಕಿ ಫ್ರೈ ಮಾಡಿ. ನಂತರ ಸ್ವಲ್ಪ ಬ್ರೌನ್ ಕಲರ್ ಬರುವಾಗ ತೆಗೆದು ಇರಿಸಿ. ಎಲ್ಲವನ್ನೂ ಹಾಗೆ ಫ್ರೈ ಮಾಡಿರಿ.

ನಂತರ ಒಂದು ಬೌಲ್ ಗೆ ಎಲ್ಲವನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು,ಕೆಂಪು ಮೆಣಸಿನ ಹುಡಿ ಹಾಕಿ ಮಿಕ್ಸ್ ಮಾಡಿ. ಇದನ್ನು ಸಾಯಂಕಾಲದ ಟೀ ಗೆ ತಿನ್ನಬಹುದು.

ಶೇರ್ ಮಾಡಲು ಮರೆಯದಿರಿ