ಅಣ್ಣ ಸೋಸಿದ ನೀರಿನಲ್ಲಿ ಅಧ್ಬುತವಾದ ಬೆಳಗ್ಗಿನ ತಿಂಡಿ! ಎಷ್ಟು ಸೂಪರ್ ಗೊತ್ತಾ? ಒಮ್ಮೆ ಟ್ರೈ ಮಾಡಿ ನೋಡಿ

By Kannada Desk

Updated:Monday, August 17, 2020, 10:34[IST]

ಅಣ್ಣ ಸೋಸಿದ ನೀರಿನಲ್ಲಿ ಅಧ್ಬುತವಾದ ಬೆಳಗ್ಗಿನ ತಿಂಡಿ! ಎಷ್ಟು ಸೂಪರ್ ಗೊತ್ತಾ? ಒಮ್ಮೆ ಟ್ರೈ ಮಾಡಿ ನೋಡಿ

ಅನ್ನ ಸೋಸಿದ ನೀರಿನಲ್ಲಿ ಮಾಡುವ ತಿಂಡಿ ಹೇಗೆ ಮಾಡುವುದು ನೋಡಿ.

ಬೇಕಾಗುವ ಸಾಮಾಗ್ರಿಗಳು:
1.ಅನ್ನ ಸೋಸಿದ ನೀರು
2.ಅಕ್ಕಿ ಹಿಟ್ಟು1 ಕಪ್
3.ಅರಶಿನ
4.ಉಪ್ಪು
5.ತುಪ್ಪ 3 ಸ್ಪೂನ್
6.ಏಲಕ್ಕಿ ಪುಡಿ
7.ಸಕ್ಕರೆ

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಅಕ್ಕಿ ಸೋಸಿದ ನೀರನ್ನು ಅರ್ಧ ಗಂಟೆ ಇಡಿ. ಎಲ್ಲಿಯವರೆಗೆ ಅಂದರೇ ನೀರೆಲ್ಲ ಮೇಲೆ ನಿಲ್ಲಬೇಕು ದಪ್ಪ ನೀರು ಅಡಿಯಲ್ಲಿ ಇರಬೇಕು. ನಂತರ ಮೇಲಿನ ನೀರನ್ನು  ತೆಗೆದು ಉಳಿದ ದಪ್ಪ ನೀರನ್ನು ಒಂದು ಕಡಾಯಿಗೆ ಹಾಕಿ ಅದನ್ನು ಸ್ಟೌ ಮೇಲೆ ಇಡಿ.

ನಂತರ ಹೈ ಫ್ಲೇಮ್ ನಲ್ಲಿ ಇಟ್ಟು ಕೈ ಆಡಿಸುತ್ತಿರಿ.ನಂತರ 1 ಕಪ್ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ಅರಶಿನ,ಏಲಕ್ಕಿ ಪುಡಿ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ದಪ್ಪ ಆದ ನಂತರ 3 ಸ್ಪೂನ್ ತುಪ್ಪ ,1 ಕಪ್ ಸಕ್ಕರೆ ಹಾಕಿ ಮಿಕ್ಸ್ ಮಾಡಿರಿ.

ಅಂದಾಜಿಗೆ ದಪ್ಪ ಆದ ನಂತರ ಸ್ಟೌ ಆಫ್ ಮಾಡಿ ಒಂದು ಬೌಲ್ ಅಥವಾ ಪ್ಲೇಟ್ ಗೆ ಹಾಕಬೇಕು ನಂತರ ಅರ್ಧ ಗಂಟೆ ಬಿಟ್ಟು ನೋಡಿ ಆಗ ಗಟ್ಟಿಯಾಗಿರುತ್ತದೆ. ಅದನ್ನು ನೀವು ಯಾವ ಶೇಪ್ ನಲ್ಲೂ ಕೂಡ ಕಟ್ ಮಾಡಬಹುದು.

ಶೇರ್ ಮಾಡಲು ಮರೆಯದಿರಿ