ಟೊಮೇಟೊ ಮಸಾಲಾ ಪೂರಿ ಮಾಡುವುದು ಹೇಗೆ ಗೊತ್ತಾ? ತುಂಬಾ ಸುಲಭ! ಒಮ್ಮೆ ಟ್ರೈ ಮಾಡಿ ನೋಡಿ, ಎಷ್ಟು ಸೂಪರ್ ಗೊತ್ತಾ

By Kannada Desk

Updated:Thursday, August 13, 2020, 19:08[IST]

ಟೊಮೇಟೊ ಮಸಾಲಾ ಪೂರಿ ಮಾಡುವುದು ಹೇಗೆ ಗೊತ್ತಾ? ತುಂಬಾ ಸುಲಭ! ಒಮ್ಮೆ ಟ್ರೈ ಮಾಡಿ ನೋಡಿ, ಎಷ್ಟು ಸೂಪರ್ ಗೊತ್ತಾ

ಸ್ಪೆಷಲ್ ಮತ್ತು ತುಂಬಾ ಸಿಂಪಲ್ ಟೊಮೇಟೋ ಮಸಾಲಾ ಪೂರಿ ಮಾಡುವ ವಿಧಾನ ತಿಳಿಯಿರಿ.
ಬೇಕಾಗುವ  ಸಾಮಾಗ್ರಿಗಳು :
1.ಎರಡು ಕಪ್ ಗೋಧಿ ಹಿಟ್ಟು
2.ಒಂದು ಟೊಮೇಟೋ
3.5 ರಿಂದ 6 ಬೆಳ್ಳುಳ್ಳಿ 
4.ಒಂದು ಸಣ್ಣ ಶೂಂಠಿ
5.ಎರಡು ಹಸಿಮೆಣಸಿನ ಕಾಯಿ
6.ಅರ್ಧ ಟೀ ಸ್ಪೂನ್ ಜೀರಿಗೆ
7.ಉಪ್ಪು

ಮಾಡುವ ವಿಧಾನ:
ಒಂದು ಟೊಮೇಟೋ,ಹಸಿಮೆಣಸಿನ ಕಾಯಿ,ಬೆಳ್ಳುಳ್ಳಿ,ಶೂಂಠಿ,ಜೀರಿಗೆ ತೆಗೆದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.ನಂತರ ಒಂದು ಬೌಲ್ ನಲ್ಲಿ 
ಒಂದು ಅರ್ಧ ಕಪ್ ಗೋಧಿ ಹಿಟ್ಟು ತೆಗೆದುಕೊಳ್ಳಿ. ಅದಕ್ಕೆ ರುಬ್ಬಿದ ಟೊಮೇಟೋ ಮಸಾಲೆಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪೂರಿ ಮಾಡುವ ಹಾಗೆ ಸರಿಯಾಗಿ ಹದ ಮಾಡಿ ನಂತರ ಪೂರಿ ಮಾಡುವ ಗಾತ್ರದ  ಪ್ರಮಾಣದಷ್ಟು ಉಂಡೆ ಮಾಡಿ ಪೂರಿ ತಯಾರಿಸಿ.

ನಂತರ ಒಂದು ಬಾನಲೆಗೆ ಎಣ್ಣೆ ಹಾಕಿ,ಎಣ್ಣೆ ಕಾದ ನಂತರ ಪೂರಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಎರಡು ಕಡೆ ಕೆಂಪಾದ ಬಣ್ಣ ಬರುವವರೆಗೂ ಫ್ರೈ ಮಾಡಬೇಕು. ಈಗ ನಿಮ್ಮ ಸ್ಪೆಷಲ್ ಟೊಮೇಟೋ ಮಸಾಲಪೂರಿ ರೆಡಿಯಾಗುತ್ತದೆ.ಇದನ್ನು ಮೊಸರು ಅಥವಾ ಆಲೂಗಡ್ಡೆ ಬಾಜಿಯೊಂದಿಗೆ ಸೇವಿಸಬಹುದು.

ಶೇರ್ ಮಾಡಲು ಮರೆಯದಿರಿ

ವಿಡಿಯೋ: