ಸ್ಪೆಷಲ್ ಸೂಪರ್ ಮಸಾಲ್ ದೋಸೆ ಮಾಡಲು ಬಯಸುತ್ತೀರಾ!ಸಿಂಪಲ್ ರೆಸಿಪಿ ಈಗ ಮನೆಯಲ್ಲಿಯೇ ಮಾಡಬಹುದು.

By Kannada Desk

Updated:Thursday, August 13, 2020, 19:09[IST]

ಸ್ಪೆಷಲ್ ಸೂಪರ್ ಮಸಾಲ್ ದೋಸೆ ಮಾಡಲು ಬಯಸುತ್ತೀರಾ!ಸಿಂಪಲ್ ರೆಸಿಪಿ ಈಗ ಮನೆಯಲ್ಲಿಯೇ ಮಾಡಬಹುದು.

ಸ್ಪೆಷಲ್ ಸೂಪರ್ ಮಸಾಲ್ ದೋಸೆ ಮಾಡಲು ಬಯಸುತ್ತೀರಾ!ಸಿಂಪಲ್ ರೆಸಿಪಿ ಈಗ ಮನೆಯಲ್ಲಿಯೇ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು.
1.1.ಅಕ್ಕಿ 2 ಕಪ್
2.1 ಕಪ್ ಕಡಲೇ ಬೇಳೆ
3.ಕಾಲು ಕಪ್ ಉದ್ದಿನ ಬೇಳೆ
4.ಸ್ವಲ್ಪ ಮೆಂತ್ಯೆ
5.ಬೇಯಿಸಿದ ಆಲೂಗಡ್ಡೆ
6.ಕರಿಬೇವು
7.ಕಾಯಿಮೆಣಸು 3
8.ಸಾಯಿವೆ ಸ್ವಲ್ಪ
9.ಈರುಳ್ಳಿ 2
10.ಉಪ್ಪು
11.ಬೆಳ್ಳುಳ್ಳಿ 5 ಎಸಳು
12.ಅರಶಿನ
13.ಎಣ್ಣೆ.
14.ಅಡುಗೆ ಸೋಡ
15.ತುಪ್ಪ
16.ಕೆಂಪು ಮೆಣಸಿನ ಹುಡಿ.

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ 2 ಕಪ್ ಅಕ್ಕಿ,1 ಕಪ್ ಕಡಲೆ ಬೇಳೆ,ಕಾಲು ಕಪ್ ಉದ್ದಿನಬೇಳೆ,ಸ್ವಲ್ಪ ಮಂತ್ಯೆ ಹಾಕಿ ನೆನೆಯಲು ಬಿಡಿ. ನಂತರ ಅದನ್ನು ತೆಗೆದು ಮಿಕ್ಸಿಗೆ ಹಾಕಿ ರುಬ್ಬಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರ್ಧ ಗಂಟೆ ಮುಚ್ಚಿ ಇಡಿ. ನಂತರ ಒಂದು ಬಾನಲೆಗೆ ಸ್ವಲ್ಪ ಎಣ್ಣೆ,ಸಾಸಿವೆ,ಉದ್ದಿನ ಬೇಳೆ,ಕಡಲೇ ಬೇಳೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಕರಿಬೇವು,ಈರುಳ್ಳಿ,ಅರಶಿನ,ಕಾಯಿಮೆಣಸು,ಜಜ್ಜಿದ ಬೆಳ್ಳುಳ್ಳಿ  ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಫ್ರೈ ಮಾಡಿ. ಈರುಳ್ಳಿ ಹೆಚ್ಚು ಫ್ರೈ ಮಾಡೋದು ಬೇಡ. ನಂತರ ಬೇಯಿಸಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷದ ನಂತರ ಕೊತ್ತಂಬರಿಸೊಪ್ಪು ಹಾಕಿ ತೆಗೆದು ಇರಿಸಿ.

ನಂತರ 3 ಟೇಬಲ್  ಸ್ಪೂನ್ ತುಪ್ಪಕ್ಕೆ ಸ್ವಲ್ಪ ರೆಡ್ಚಿಲ್ಲಿ ಪೌಡರ್ ಹಾಕಿ ಮಿಕ್ಸ್ ಮಾಡಿ ಇಡಿ.

ನಂತರ ಹಿಟ್ಟಿಗೆ ಅಡುಗೆ ಸೋಡ ಹಾಕಿ ಮಿಕ್ಸ್ ಮಾಡಿ. ನಂತರ ಕಾವಲಿಗೆ ನೀರು ಹಾಕಿ ಒರೆಸಿ ಅಗಲವಾಗಿ ದೋಸೆ ಮಾಡಿ ತೆಳುವಾಗಿ ನಂತರ ಬ್ರೆಶ್ ನಲ್ಲಿ ತುಪ್ಪದ ಪೇಸ್ಟ್ ಅನ್ನು ದೋಸೆಗೆ ಹಾಕಿ ಹರಡಿ. ಆ ಜಾಗ ಕೆಂಪಾಗಿ ಫ್ರೈ ಆಗುತ್ತದೆ.ನಂತರ ತೆಗೆದು ಇರಿಸಿ..ಬಾಜಿಹಾಕಿ ಚಟ್ನಿ ಜೊತೆಗೆ ತಿನ್ನಿ..ರುಚಿಯಾಗಿ ಇರುತ್ತದೆ.

ಶೇರ್ ಮಾಡಲು ಮರೆಯದಿರಿ. 

ವಿಡಿಯೋ: