ಏಲಕ್ಕಿ ಜೇನುತುಪ್ಪವನ್ನ ಒಟ್ಟಿಗೆ ಸೇವಿಸುವುದರಿಂದ ಏನಾಗುತ್ತದೆ ಗೊತ್ತಾ? ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ..!

Updated: Tuesday, August 18, 2020, 21:39 [IST]

ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಏಲಕ್ಕಿ ತುಂಬಾ ಪ್ರಯೋಜನಕಾರಿಯಾಗಿದೆ. ಸಹಜವಾದ ನೆಗಡಿ,  ಕೆಮ್ಮಿನಿಂದ ಹಿಡಿದು ಕ್ಯಾನ್ಸರ್ನಂತಹ ದೊಡ್ಡ ಸಮಸ್ಯೆಯಿಂದ ದೂರವಿರುವುದಕ್ಕೆ ಸಹಾಯ ಮಾಡುತ್ತದೆ.

ಇನ್ನು ಏಲಕ್ಕಿಯನ್ನು ಉರಿದು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಅನೇಕ ಆರೋಗ್ಯಕರ ದೇಹ ಪ್ರಕೃತಿಯನ್ನು ನಮ್ಮದಾಗಿಸಿಕೊಳ್ಳುವುದು. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದಲ್ಲದೆ.ಅನಾರೋಗ್ಯನ್ನು ದೂರಮಾಡುತ್ತದೆ. ಏಲಕ್ಕಿ ಮತ್ತು ಜೇನುತುಪ್ಪ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು ದೇಹದಲ್ಲಿ ರೂಪಗೊಳ್ಳುವ ಕ್ಯಾನ್ಸರ್ ಕೋಶಗಳ ಅಭಿವೃದ್ಧಿಯನ್ನು ತಡೆಯುತ್ತದೆ. ಹಾಗಾಗಿ ಏಲಕ್ಕಿ ಮತ್ತು ಜೇನುತುಪ್ಪ ಒಟ್ಟಿಗೆ ಸೇವಿಸುವುದರಿಂದ ಕ್ಯಾನ್ಸರ್ ನಿಂದ ದೂರವಿರಬಹುದು.  

Advertisement

ಅಷ್ಟೇ ಅಲ್ಲದೆ ಕೆಲವು ಜನ ಬಾಯಿಯ ದುರ್ವಾಸನೆಯಿಂದ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಏಲಕ್ಕಿ ಅಂತಹ ದುರ್ವಾಸನೆ ಹೋಗಲಾಡಿಸುವ ಔಷಧೀಯ ಗುಣಗಳನ್ನು ಹೊಂದಿದ್ದು ಏಲಕ್ಕಿ ಬೀಜ ಆಗಿರುವುದರಿಂದ ಬಾಯಿಂದ ಬರುವ ಕೆಟ್ಟ ವಾಸನೆಯನ್ನು ದೂರ ಮಾಡಬಹುದು. ಹಾಗೆಯೇ ಏಲಕ್ಕಿ ಜೇನುತುಪ್ಪ ಒಟ್ಟಿಗೆ ಸೇರಿ ಸೇವಿಸುವುದರಿಂದ ಬಾಯಿಯ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.  

Advertisement

ಕೊನೆಯದಾಗಿ ನಮ್ಮ ಆಹಾರ ಪದ್ಧತಿ ದಿನಚರಿಯಲ್ಲಿ ಒಳಗೊಂಡಿರುವ ಅನೇಕ ಹಾನಿಕಾರಕ ಚಟುವಟಿಕೆಗಳಿಂದಾಗಿ ಮತ್ತು ಇಂದಿನ ಆಧುನಿಕ ಜೀವನಶೈಲಿ ಫಲವಾಗಿ ದಿನದಿಂದ ದಿನಕ್ಕೆ ಹೃದಯಾಘಾತದಂತಹ ಅದ್ಭುತ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿವೆ. ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಮತ್ತು ಜೇನುತುಪ್ಪವನ್ನು ಏಕಕಾಲದಲ್ಲಿ ಸೇವಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ಹೃದಯವನ್ನು ಸಧೃಡವಾಗಿಡಲು ಮತ್ತು ರೋಗಗಳಿಂದ ರಕ್ಷಿಸುವಂತೆ ಕಾರ್ಯನಿರ್ವಹಿಸುತ್ತದೆ, ಈ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಬಂದಿದೆ. ಉಪಯುಕ್ತ ಎನಿಸಿದರೆ ಹೆಚ್ಚು ಶೇರ್ ಮಾಡಿ, ಕಾಮೆಂಟ್ ಮಾಡಿ ಧನ್ಯವಾದಗಳು..