ನೀವು ಹಾಗೂ ನಿಮ್ಮ ಮನೆಯವರು ಗೊರಕೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಇಲ್ಲಿದೆ ನೋಡಿ ಉಪಯುಕ್ತ ಸೂಚನೆಗಳು

Updated: Saturday, October 10, 2020, 22:49 [IST]

ಗೊರಕೆ ಸಮಸ್ಯೆ ಅನಾದಿ ಕಾಲದಿಂದಲೂ ಇದೆ ಇದು ಇಂದು ನಿನ್ನೆಯದಲ್ಲ ಎಷ್ಟೋ ಜನ ಗೊರಕೆ ಸಮಸ್ಯೆಗೆ ಒಳಗಾಗಿರುತ್ತಾರೆ  ತಾವು ಗೊರಕೆ ಹೊಡೆಯುವುದು ತಮಗೆ ತಿಳಿದಿರುವುದಿಲ್ಲ. ಇನ್ನೊಬ್ಬರ ಸುಖ ನಿದ್ದೆಗೆ ಕಾರಣವಾಗುವ ಈ ಗೊರಕೆ ಬೇರೆಯವರ ನಿದ್ದೆಯನ್ನು ಹಾಳು ಮಾಡುತ್ತದೆ. ಈ ಗೊರಕೆ ವಿಷಯಕ್ಕೆ ಎಷ್ಟೋ ಸಂಸಾರಗಳು ವಿಚ್ಛೇದನ ತೆಗೆದುಕೊಂಡು ದೂರವಾಗಿದ್ದಾರೆ. ವೈದ್ಯಕೀಯ ಸಮೀಕ್ಷೆಯ ಪ್ರಕಾರ ಹೇಳುವುದಾದರೆ ಶೇಕಡಾ ೫೦ರಷ್ಟು ವಯಸ್ಕರು ಗೊರಕೆ ಸಮಸ್ಯೆಗೆ ಒಳಗಾಗಿರುತ್ತಾರೆ. ಗೊರಕೆ ಯಿಂದ ಎಷ್ಟೋ ಮಂದಿ ಕಿರಿಕಿರಿಗೆ ಒಳಗಾಗಿ ಇರುತ್ತಾರೆ. ಈ ರೀತಿಯ ಸಮಸ್ಯೆ ನಿಮ್ಮಲ್ಲಿದ್ದರೆ ಅದಕ್ಕೆ ಮನೆಮದ್ದಿನ ಜೊತೆ ನಿಮಗೆ ಸೂಕ್ತ ಪರಿಹಾರಗಳು ಇಲ್ಲಿದೆ ನೋಡಿ.  

Advertisement

‌ಮೂಗಿನ ಹೊಳ್ಳೆ ಕಟ್ಟಿಕೊಂಡಾಗ ಉಸಿರಾಟದ ಸಮಸ್ಯೆ ಇದ್ದವರು ಗೊರಕೆ ಹೊಡೆಯುತ್ತಾರೆ, ನೀರಿನಲ್ಲಿ ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ ಮಲಗುವಾ ಮುನ್ನ ಕುಡಿದು ಮಲಗಬೇಕು.‌ಗಂಟಲಲ್ಲಿ ಕಫ ಕಟ್ಟಿದಾಗ ಮತ್ತು ಗಂಟಲು ನೋವು ಇದ್ದಾಗ ಗೊರಕೆ ಹೊಡೆಯುತ್ತಾರೆ ಆಗ ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚದಲ್ಲಿ ಜೇನುತುಪ್ಪ ಹಾಕಿ ಕಲಸಿ ಕುಡಿಯಬೇಕು.‌ಕ್ಯಾಮೋಮೈಲ್ ಹೂವನ್ನು ಬಿಸಿನೀರಿನಲ್ಲಿ ಹಾಕಿ ಸ್ವಲ್ಪ ಜೇನತುಪ್ಪ ಹಾಕಿ ಕುಡಿಯುವುದರಿಂದ ಗಂಟಲ ಹಿಂದಿನ ಸ್ನಾಯುಗಳು ಸಡಿಲವಾಗಿ ಆರಾಮಾಗಿ ಉಸಿರಾಡಲು ದಾರಿಯಾಗಿ ನಿದ್ದೆಗೆ ಜಾರಿ ಗೊರಕೆಯನ್ನು ಹೊಡೆಯುವುದಿಲ್ಲ.  

Advertisement

‌ಬೆಳ್ಳುಳ್ಳಿ ಎಷ್ಟೋ ಅರೋಗ್ಯದ ಸಮಸ್ಯೆಗೆ ಔಷದಿ ಆಗಿದ್ದು ಇದನ್ನು ರಾತ್ರಿ ಊಟ ಮಾಡುವಾಗ ಅನ್ನದ ಜೊತೆ ಕಲಸಿ ಊಟ ಮಾಡಿದರೆ ಕಾಲಕ್ರಮೇಣ ಗೊರಕೆ ಸಮಸ್ಯೆ ಕಮ್ಮಿಯಾಗುತ್ತದೆ.‌ಇದೆ ರೀತಿಯಾಗಿ ಅರಿಶಿನ ಒಂದು ಅತ್ಯುತ್ತಮವಾದ ಮನೆಮದ್ದು ಅರಿಶಿನವನ್ನು ಹಾಲಿಗೆ ಹಾಕಿ ಕಲಸಿ ಕುಡಿಯುವುದರಿಂದ ಉಸಿರಾಟ ಸಲಿಸಾಗುತ್ತದೆ ಗೊರಕೆ ಸಮಸ್ಯೆ ಕಮ್ಮಿಯಾಗುತ್ತದೆ. ಶೀತವಾದಾಗ ಗೊರಕೆ ಹೊಡೆಯವುದು ಸಹಜ ಆಗ ತಲೆ ದಿಂಬನ್ನು ಎತ್ತರ ಮಾಡಿಕೊಂಡು ಮಲಗಬೇಕು ಉಸಿರಾಟ ಮಾಡಲು ಸಲಿಸಗುತ್ತದೆ.‌ಗೊರಕೆ ಹೊಡೆಯುವವರನ್ನು ಒಂದು ಕಡೆ ವಾಲಿಸಿ ಮಲಗಿಸಬೇಕು.‌  

Advertisement

ಹಾಲಿನ ಉತ್ಪನ್ನಗಳನ್ನು ಕಮ್ಮಿಯಾಗಿ ಸೇವಿಸಬೇಕು ಜೊತೆಗೆ ಮದ್ಯಪಾನ ಸೇವನೆಯಿಂದ ದೂರವಿರಬೇಕು.ಅತಿಯಾದ ಕೆಲಸದ ಒತ್ತಡ ಸುಸ್ತು ಶೀತ ಆರೋಗ್ಯದಲ್ಲಿ ಏರುಪೇರು ದಪ್ಪ ಆದಾಗ ಗೊರಕೆ ಸಮಸ್ಯೆ ಆಗುತ್ತದೆ ಮೇಲೆ ತಿಳಿಸಿದ ಮನೆಮದ್ದುಗಳನ್ನು ಬಳಸಿ ಗೊರಕಿಯಿಂದ ಮುಕ್ತಿ ಪಡೆಯಿರಿ.