ಮಗುವಿಗೆ ಊಟ ಮಾಡಿಸಲು ತಂದೆಯ ಈ ನೃತ್ಯ : ನಕ್ಕು ನಕ್ಕು ಸಾಕಾಗುತ್ತಿರ ವಿಡಿಯೋ ನೋಡಿ

Updated: Saturday, January 16, 2021, 15:44 [IST]

ಹೌದು ಈ ದಾಂಪತ್ಯ ಜೀವನ ಎಂಬುದು ಹೇಗೆಂದರೆ, ಒಂದು ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ, ಯಾವುದಾದರೂ ಒಂದು ಸಂದರ್ಭದಲ್ಲಿ ನಮಗೆ ಇಷ್ಟವಿಲ್ಲದಿದ್ದರೂ ಕೂಡ, ನಮ್ಮ ಕುಟುಂಬದ ಏಳಿಗೆಯ ಹಿನ್ನೆಲೆಯಲ್ಲಿ, ಮತ್ತು ಅವರ ಸಂತೋಷಕ್ಕಾಗಿ ನಾವು ಕೆಲವೊಂದನ್ನು ನಾಚಿಕೆಬಿಟ್ಟು ಮಾಡಲೇಬೇಕಾಗುತ್ತದೆ. ಅದೇ ನಿಟ್ಟಿನಲ್ಲಿ ಇಲ್ಲೊಂದು ಸಕ್ಕತ್ತಾಗಿರುವ ವಿಡಿಯೋ ಕಂಡುಬಂದಿದ್ದು, ಒಂದು ವಾರದಿಂದ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.  

ಹೌದು ಸ್ನೇಹಿತರೆ, ಇಲ್ಲೊಬ್ಬ ಪುರುಷ ತನ್ನ ಮಗಳು ಊಟ ಮಾಡುತ್ತಿಲ್ಲವೆಂದು, ಊಟ ಮಾಡಿಸುತ್ತಿರುವಾಗ ಮಗಳ ಮತ್ತು ಹೆಂಡತಿಯ ಎದುರು ಊಟ ಮಾಡಲಿ ಎಂದು ಹೇಳಿ ನೃತ್ಯ ಮಾಡುತ್ತಿದ್ದಾನೆ. ಮತ್ತು ಈತನ ನೃತ್ಯ ನೋಡಿ ಅಲ್ಲೇ ಕುಳಿತಿದ್ದ ಈತನ ಹೆಂಡತಿಯು ಈತನ ಡ್ಯಾನ್ಸ್ ನೋಡಿ, ಖುಷಿಯಿಂದ ನಗುತ್ತಾ, ತನ್ನ ಮಗಳಿಗೆ ಊಟ ಮಾಡಿಸುತ್ತಿದ್ದಾರೆ.   

ಹೌದು ಈ ವೈರಲ್ ವಿಡಿಯೋ ಹಿಂದೆ ಕೆಲವು ಮಾತುಗಳು ಕೇಳಿಬಂದಿದ್ದು ಸೋಶಿಯಲ್ ಪ್ರಿಯರು ಎನ್ ಹೇಳುತ್ತಿದ್ದಾರೆ ಗೊತ್ತಾ.?

'ಈತನ ಅವಸ್ಥೆ ನೋಡಿ ಗೆಳೆಯರೇ, ಇಂದೆ ನೃತ್ಯವನ್ನು ಕಲಿತುಬಿಡಿ, ಮುಂದೆ ನಿಮ್ಮ ಜೀವನದಲ್ಲಿಯೂ ಬರುವ ಅಪಾಯದ ಶೀರ್ಷಿಕೆಯ ವಿಡಿಯೋ ಇದಾಗಿದೆ', ಎಂದು ಹೇಳುತ್ತಾ ಈ ಹಾಸ್ಯಬರಿತ ವಿಡಿಯೋವನ್ನು ನೋಡಿ ಅಭಿಪ್ರಾಯವನ್ನು ತಿಳಿಸಿದ್ದಾರೆ. ನೀವು ಕೂಡ ಈತನ ಸಕ್ಕತ್ ಫನ್ನಿಯಾಗಿರುವ ನೃತ್ಯ ನೋಡಿ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಮೆಂಟ್ ಸೆಕ್ಷನಲ್ಲಿ ಕಮೆಂಟ್ ಮಾಡಿ ತಿಳಿಸಿ, ವಿಡಿಯೋ ಇಷ್ಟವಾದರೆ ಶೇರ್ ಕೂಡ ಮಾಡಿ ಧನ್ಯವಾದಗಳು...