ಹೆಂಡ್ತಿ ಮನೇಲಿ ಫಸ್ಟ್ ನೈಟ್ ದಿನವೇ ಏನಾಯ್ತು ಗೊತ್ತಾ..? ಒಂದು ಫಸ್ಟ್ ನೈಟ್ ಕಥೆ ನೋಡಿ.!

Updated: Tuesday, November 17, 2020, 11:00 [IST]

ವರದಕ್ಷಿಣೆ ಪಡೆಯದೆ ಮದುವೆಯಾಗಬೇಕು ಎಂಬುದು ನನ್ನ ಬಯಕೆಯಾಗಿತ್ತು..! ಒಂದು ದಿನ ಹುಡುಗಿ ನೋಡೋದಕ್ಕೆ ಹೋಗಿ, ಆ ಮನೆಯಿಂದ ಹೊರಡುವಾಗ ಮೊದಲ ಬಾರಿ ಆಕೆಯನ್ನು ನಾನು ನೋಡಿದ್ದು. ನಾನು ಆ ಮನೆಯವನಾಗಿರ ಬಹುದು ಅಂತ ಆಕೆಗೆ ಅನಿಸಿರಬೇಕು. ಆಕೆ ಒಂದು ನೋಟೀಸನ್ನು ನನ್ನ ಮುಂದೆ ಚಾಚಿದಳು. ಆಕೆ ಒಬ್ಬಳು ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಳು.. ಬ್ಲಡ್ ಡೊನೇಷನ್ ಕ್ಯಾಂಪಿನ ಭಾಗವಾಗಿ, ರಕ್ತದಾನ ಮಾಡಬಯಸುವವರ ಹೆಸರನ್ನು ನೊಂದಾಯಿಸುವ ಸಲುವಾಗಿ ಆಕೆ ಬಂದಿದ್ದಳು.   

Advertisement

ಆಕರ್ಷಣೀಯವಾದ ಆಕೆಯ ಮಾತಿನ ಶೈಲಿಯು ನನ್ನನ್ನು ತುಂಬಾ ಆಕರ್ಷಿಸಿತು...ಹಾಗೆ ಯಾವತ್ತೂ ರಕ್ತದಾನ ಮಾಡಿರದ ನಾನು ಮೊದಲ ಬಾರಿ ರಕ್ತದಾನ ಮಾಡಲು ನಿರ್ಧರಿಸಿದೆ...ಅಂದು ಆಕೆಯನ್ನು ಪುನಃ ಭೇಟಿಯಾದೆ. ಆ ಭೇಟಿಯಿಂದ ಆದ ಪರಿಚಯವು  ಗೆಳೆತನಕ್ಕೆ ಬದಲಾಯಿತು....ಮೊದಲಬಾರಿ ನಾನು ಆಕೆಯ ಮೇಲಿರುವ ನನ್ನ ಪ್ರೀತಿಯನ್ನು ಹೇಳಿದಾಗ ಆಕೆ ಹೇಳಿದ ಮಾತುಗಳು ನನ್ನನ್ನು ಚಕಿತಗೊಳಿಸಿತು...

ನನ್ನ ಮನೆಗೆ ಬಂದು ಕೇಳಿನೋಡಿ , ಬಹುಶಃ ನಿಮ್ಮ ಪ್ರೀತಿಯು ಅಲ್ಲಿಗೇ ಕೊನೆಯಾಗಬಹುದು..ಆಕೆಯ ಮಾತಿನ ಅರ್ಥ ನನಗೆ ಆವಾಗ ಅರ್ಥವಾಗದಿದ್ದರೂ , ಆಕೆಯ ಮನೆಗೆ ಹೋದಾಗ ನನಗೆ ಎಲ್ಲವೂ ಅರ್ಥವಾಯಿತು..ಪಕ್ಷಪಾತದಿಂದ ಎದ್ದೇಳಲಾಗದೆ ಮಂಚದಲ್ಲೇ ಮಲಗಿರುವ ಅಮ್ಮ...ತಂದೆ ಜಮೀನಿನ ಏಜೆಂಟ್.... ಆರನೆಯ ತರಗತಿಯಲ್ಲಿ ಕಲಿಯುವ ಒಬ್ಬಳು ತಂಗಿಯಿದ್ದಾಳೆ ಆಕೆಗೆ...ಹಂಚಿನ ಹಳೆಯ ಚಿಕ್ಕ ಮನೆಯಾಗಿತ್ತು ಆಕೆಯದು...  

Advertisement

ಆ ತಂದೆಯ ಮುಖದಲ್ಲಿ ನಿಸಹಾಯವಸ್ಥೆ ಎದ್ದು ಕಾಣುತ್ತಿತ್ತು...ಆದರೆ, ನನಗೆ ಆಕೆಯ ಮೇಲೆ ತುಂಬಾ ಅಬಿಮಾನ ಅನಿಸಿತು..ನರ್ಸಿಂಗ್ ಕಲಿಕೆಯ ಮಧ್ಯೆ ಟೈಲರಿಂಗ್ ಕೆಲಸ ಮಾಡುತ್ತಾ ತನ್ನ ಮನೆಗೋಸ್ಕರ ತುಂಬಾ ಕಷ್ಟಪಡುತ್ತಿದ್ದಾಳೆ ಆಕೆ...ನನ್ನ ಮನೆಯವರ ವಿರೋಧವನ್ನು ತಿರಸ್ಕರಿಸುತ್ತಾ ಒಂದುಶುಭ ಮುಹೂರ್ತದಲ್ಲಿ ನಾನು ಆಕೆಯ ಕತ್ತಲ್ಲಿ ತಾಳಿಯನ್ನು ಕಟ್ಟಿ ನನ್ನವಳನ್ನಾಗಿಸಿ ನನ್ನ ಬದುಕಿನಾಚೆ ಕರೆತಂದೆ....    

ಹಾಗೆ ಮದುವೆ ಮುಗಿಯಿತು. ನಮ್ಮ ಸಂಪ್ರದಾಯದಂತೆ ಆಕೆಯ ಮನೆಯಲ್ಲಿ ಮೊದಲರಾತ್ರಿಯಾಗಿತ್ತು. ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ನನಗೆ ಆಕೆಯ ಮನೆಯ ಚಿಕ್ಕ ಕೋಣೆಯಲ್ಲಿ ಶ್ವಾಸೋಚ್ಛಾಸ ಮಾಡಲು ಕೂಡಾ ಕಷ್ಟ ಅಂತ ಅನಿಸತೊಡಗಿತು. ಒಂದು ಹಳೆಯ ಮಂಚವಾಗಿತ್ತು ಅಲ್ಲಿ ಇದ್ದದ್ದು. ಅದೂ ಕೂಡಾ ಕುಳಿತು ಕೊಳ್ಳುವಾಗಲೇ ಅಲುಗಾಡುತ್ತಿತ್ತು...   

Advertisement

ಮುರಿದು ಬೀಳದೆ ಕಾಪಾಡು ದೇವಾ.. ಅಂತ ಮನದಲ್ಲಿ ದೇವರನ್ನು ಬೇಡಿದೆ.. ಕೈಯಲ್ಲಿ ಒಂದು ಗ್ಲಾಸ್ ಹಾಲಿನೊಂದಿಗೆ ಆಕೆ ನಾಚಿಕೆಯಿಂದ ಬಂದಳು..ಅರ್ಧ ಗ್ಲಾಸ್ ಹಾಲನ್ನು ಕುಡಿದು ಉಳಿದದ್ದು ಆಕೆಗೆ ಕೊಟ್ಟೆ...
ನಿಂತುಕೊಂಡಿದ್ದ ಆಕೆಯ ಕೈಯನ್ನು ಹಿಡಿದು ನನ್ನ ಪಕ್ಕದಲ್ಲಿ ಕೂರಿಸಿದೆ.. ಒಳ್ಳೆಯ ಮನೆಯಲ್ಲಿ ಬೆಳೆದಿರುವ ನಿಮಗೆ ಈ ಮನೆಯಲ್ಲಿ ಸುಧಾರಿಸಿಕೊಳ್ಳಲು ಕಷ್ಟ ಆಗುತ್ತಿರಬಹುದಲ್ಲವೇ..?" ಸೆಕೆ ಇದೆ ಅಲ್ಲವೇ..? ಅಮ್ಮ ಮಲಗಿರುವ ಕೋಣೆಯಲ್ಲಿ ಮಾತ್ರ ಫ್ಯಾನ್ ಇರೋದು.... ಇವೆಲ್ಲಾ ಬೇಕಾಗಿರಲಿಲ್ಲ ಅಂತ ಅನಿಸುತ್ತಿಲ್ಲವೇ ಈಗ ನಿಮಗೆ? 

ನಿಸಹಾಕಳಾಗಿ ಕೇಳಿದ ಆಕೆಯ ಮಾತುಗಳು ನನ್ನ ಹೃದಯವನ್ನು ಚುಚ್ಚಿ ನೋಯಿಸಿತು....ನಾನು ಆಕೆಯ ತಲೆಯನ್ನು ಮೆಲ್ಲನೆ ಸವರುತ್ತಾ - ನಾನು ನಿನ್ನನ್ನು ಪ್ರೀತಿಸಿದು, ನಿನ್ನ ಕಳಂಕವಿಲ್ಲದ ಮನಸನ್ನು ಬಯಸಿದ್ದು. ಅಲ್ಲದೆ ನಿನ್ನ ಮನೆಯನ್ನಲ್ಲಾ...ಇಂದಿನಿಂದ ಎಂದೆಂದಿಗೂ ನಾನು ನಿನ್ನ ಜೊತೆಯಾಗಿರುವೆ. ಈ ಸೆಕೆಯಲ್ಲ , ಯಾವ ಸಿಡಿಲು ಮಳೆಯನ್ನೂ ಸಹಿಸಲು ನಾನು ತಯಾರಾಗಿದ್ದೇನೆ.. ಆಕೆಗೆ ನನ್ನ ಮೇಲೆ ಅಭಿಮಾನ ಹೆಚ್ಚಾಗಲಿ ಅಂತ  ಒಂದು ಡಯಲೋಗ್ ಹೇಳಿದ್ದಾಗಿತ್ತು..

ಯಾವ ಗಳಿಗೆಯಲ್ಲಿ ಆ ಡಯಲೋಗ್ ಹೇಳಲು ನನಗೆ ಮನಸು ಬಂತೋ ಗೊತ್ತಿಲ್ಲ. ದೊಡ್ಡ ಶಬ್ದದಿಂದ ಸಿಡಿಲು ಮತ್ತು ಮಳೆ ಒಮ್ಮೆಲೇ ಸುರಿಯಲಾರಂಭಿಸಿತು...ಮಳೆ ಸುರಿಯತೊಡಗಿದಾಗ ಆಕೆಯ ಮುಖ ಚಿಕ್ಕದಾದದ್ದನ್ನು ನಾನು ಗಮನಿಸಿದೆ...ಏನಾಯಿತು ಅಂತ ಕೇಳಿ ಮುಗಿಸುವಷ್ಟರಲ್ಲಿ ಮೊದಲ ಹನಿ ನನ್ನ ಮೂಗಿನ ಮೇಲೆ ಬಿತ್ತು...  

Advertisement

ಆಕೆ ಬೇಗನೆ ಎದ್ದು ಓಡಿ ಹೋಗಿ ಎರಡು ಮೂರು ಬಕೆಟ್ ಗಳನ್ನು ತಂದಳು..ಆವಾಗಲೇ ಆಕೆಯ ಮುಖ ಚಿಕ್ಕದಾಗಲು ಕಾರಣ ಏನು ಅಂತ ನನಗೆ ಗೊತ್ತಾದದ್ದು.. ನೀರು ಸೋರುತ್ತಿದ್ದಲ್ಲೆಲ್ಲಾ ಬಕೆಟ್ ಗಳನ್ನು ಇಟ್ಟಳು. ಆಕೆಯ ಆ ದುಸ್ಥಿತಿಯನ್ನು ಮತ್ತು ನಿಸಹಾಯಕತೆಯನ್ನು ಮರೆಮಾಚಲು ತುಂಬಾನೆ ಪ್ರಯತ್ನಿಸುತ್ತಿದ್ದಳು...ಆದರೆ ನನಗೆ ಆಕೆಯ ಮೇಲೆ ಹೆಚ್ಚು ಪ್ರೀತಿ ಅನಿಸಿತು...ದೊಡ್ಡ ಮಳೆಯಾಗಿದ್ದರಿಂದ ಬಕೆಟ್ ನಲ್ಲಿ ತುಂಬುವ ನೀರನ್ನು ಆವಾಗಾವಾಗ ಬದಲಿಸಬೇಕಿತ್ತು...

ನಾನು ಕೂಡಾ ಆಕೆಗೆ ಸಹಾಯ ಮಾಡುತ್ತಲೇ ಇದ್ದೆ.. ನವಜೀವನದ ಮೊದಲರಾತ್ರಿಯ ಹೊಸ ಅನುಭವಗಳು ಮತ್ತು ಬಯಕೆಗಳನ್ನು ನುಚ್ಚುನೂರು ಮಾಡಿದ ಸುಂದರವಾದ ಒಂದು ಮಳೆಯ ರಾತ್ರಿ. ಹಾಗೆ ಸುಮಾರು ಬೆಳಿಗ್ಗೆ ನಾಲ್ಕು ಗಂಟೆಯ ಹೊತ್ತಿಗೆ ಮಳೆಯು ಶಮನವಾಯಿತು..ಬಕೆಟ್ ನಲ್ಲಿ ನೀರಿನ ಹನಿಗಳು ಒಂದೊಂದಾಗಿ ಬೀಳುವ ಶಬ್ದ ಮಾತ್ರ ಆ ಚಿಕ್ಕ ಕೋಣೆಯಲ್ಲಿ ಕೇಳಿಸುತ್ತಿತ್ತು...ಅಷ್ಟರಲ್ಲಿ ನಾವಿಬ್ಬರೂ ಸುಸ್ತಾಗಿದ್ದೆವು....    

ಬೆಡ್ ಎಲ್ಲಾ ಒದ್ದೆಯಾಗಿದ್ದರಿಂದ ನೆಲದೆ ಮೇಲೆ ಒಂದು ಚಾಪೆ ಹಾಕಿ ನಾವು ಮಲಗಿದೆವು...ನನ್ನ ಎದೆಯ ಮೇಲೆ ತಲೆಯಿಟ್ಟು ಮಲಗುತ್ತಾ ಆಕೆ ಕೇಳಿದಳು - ಈಗ ಹೇಗೆ ಅನಿಸುತ್ತಿದೆ ನಿಜ ಹೇಳಿ...? ನಾನು ಆಕೆಯ ಹಣೆಯನ್ನು ಚುಂಬಿಸುತ್ತಾ ಹೇಳಿದೆ - ನಿನ್ನ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚೇ ಆಗಿದೆ ಹುಡುಗೀ..ಮನಸುಗಳು ಹತ್ತಿರವಾದಾಗ, ಅಂಗವಿಕಲತೆ, ವರದಕ್ಷಿಣೆ, ಬಡತನ, ಚಿಕ್ಕಮನೆ ಇವಲ್ಲವೂ ಒಂದು ಕೊರತೆಯಾಗದು..ಮತ್ತೆ ನಿಜವಾದ ಫಸ್ಟ್ ನೈಟನ್ನು ಮಧ್ಯಾಹ್ನ ಊಟವಾದ ನಂತರ ಆಚರಿಸಿದೆವು... ಈ ಮೇಲಿನ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿದ್ದು, ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ, ಇಷ್ಟ ಆಗಿದ್ರೆ ಶೇರ್ ಮಾಡಿ ಧನ್ಯವಾದಗಳು...