ಕಲ್ಪನಾ ಲೋಕದ ಈ ಲೈಂ* ಗಿಕ ಕ್ರಿಯೆ ಬಲು ಅಪಾಯಕಾರಿ!!

Updated: Saturday, November 21, 2020, 21:51 [IST]

ಇಂದಿನ ಯುವಜನತೆ ತಮ್ಮ ಸಂಗಾತಿಯ ಜೊತೆ ನಿಜ ಜೀವನದಲ್ಲಿ ನಡೆಸಬೇಕಾದ ಲೈಂ*ಗಿಕ ಕ್ರಿಯೆಯನ್ನು ತಾವು ತಮ್ಮ ಮನಸ್ಸಿನಲ್ಲಿ ತಮಗೆ ಬೇಕಾದ ಹಾಗೆ ಅಂದುಕೊಂಡು ಸಂತೋಷ ಪಡುತ್ತಿದ್ದಾರೆ.

ಲೈಂ*ಗಿಕ ಚಟುವಟಿಕೆ ಎನ್ನುವುದು ಒಂದು ನೈಸರ್ಗಿಕ ಕ್ರಿಯೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ನಿಸರ್ಗದತ್ತವಾಗಿ ವಂಶಾಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುವ ಒಂದು ಕ್ರಿಯೆ. ಆದರೆ ಇಂದಿನ ಯುವಜನತೆ ಈ ನೈಸರ್ಗಿಕ ಕ್ರಿಯೆಯ ಸ್ವರೂಪವನ್ನು ವಿರುದ್ಧ ರೀತಿಯಲ್ಲಿ ವ್ಯಕ್ತ ಪಡಿಸಲು ಹವಣಿಸುತ್ತಿದ್ದಾರೆ.  

ಸಂಶೋಧನೆಗಳು ಹೇಳುತ್ತವೆ ಇದಕ್ಕೆಲ್ಲಾ ಇಂದಿನ ಯುವಕರ ಮತ್ತು ಯುವತಿಯರ ಮಾನಸಿಕ ಸ್ಥಿತಿಯೇ ಕಾರಣ ಎಂದು. ಯುವ ಜನತೆ ಇಂದು ತಲುಪಿದ ಇಂತಹ ಮಾನಸಿಕ ಸ್ಥಿತಿಗೆ ಅವರ ಜೀವನ ಶೈಲಿ ಬಹಳ ಮುಖ್ಯ ಪಾತ್ರ ಬೀರುತ್ತದೆ.

 

ತಮ್ಮ ಸಂಗಾತಿಯ ಜೊತೆ ನಿಜ ಜೀವನದಲ್ಲಿ ನಡೆಸಬೇಕಾದ ಲೈಂ*ಗಿಕ ಕ್ರಿಯೆಯನ್ನು ತಾವು ತಮ್ಮ ಮನಸ್ಸಿನಲ್ಲಿ ತಮಗೆ ಬೇಕಾದ ಹಾಗೆ ಅಂದುಕೊಂಡು ಸಂತೋಷ ಪಡುತ್ತಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಲ್ಲಿ ಸಾಕಷ್ಟು ತೊಂದರೆ ತಂದು ಕೊಡುವ ಸಾಧ್ಯತೆ ಇದೆ.

ಹಾಗಾಗಿ ಪುರುಷರು ಅಥವಾ ಮಹಿಳೆಯರು ತಮ್ಮ ಕಲ್ಪನಾ ಲೋಕದ ಈ ಲೈಂ*ಗಿಕ ಚಟುವಟಿಕೆಗೆ ಬ್ರೇಕ್ ಹಾಕಲೇಬೇಕು. ಇಲ್ಲವೆಂದರೆ ಏನೆಲ್ಲಾ ತೊಂದರೆಗಳು ಎದುರಾಗಲಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

 

ನಿದ್ರಾಹೀನತೆ ಸಮಸ್ಯೆ ಎದುರಾಗಬಹುದು

 • ನಿಮ್ಮ ಸಂಗಾತಿಯ ಜೊತೆ ನಿಜ ಜೀವನದಲ್ಲಿ ನೀವು ಅನುಭವಿಸುವ ಲೈಂಗಿಕ ಸುಖಕ್ಕಿಂತ ಕಲ್ಪನಾ ಲೋಕದಲ್ಲಿ ನಿಮಗೆ ಹೆಚ್ಚು ಲೈಂಗಿಕ ಖುಷಿ ಸಿಗುವ ಕಾರಣದಿಂದ ನಿಮಗೆ ನಿಜ ಜೀವನಕ್ಕಿಂತ ಭ್ರಮಾ ಲೋಕದ ಲೈಂಗಿಕ ಸುಖವೇ ಹೆಚ್ಚಾಗುತ್ತದೆ.
 • ದಿನ ಕಳೆದಂತೆ ಇದು ನಿಮಗೆ ಒಂದು ಚಟವಾಗಿ ಅಂಟಿಕೊಳ್ಳುತ್ತದೆ. ಇದರಿಂದ ನಿಮಗೆ ನಿದ್ರೆಗೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಹಗಲು - ರಾತ್ರಿ ಎನ್ನದೆ ನೀವು ಹೆಚ್ಚು ವರ್ಚುವಲ್ ಸೆಕ್ಸ್ ನಲ್ಲಿ ಪಾಲ್ಗೊಳ್ಳುವ ಕಾರಣ ನಿಮ್ಮ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಹದಗೆಡುತ್ತದೆ.  
 • ನೀವು ಯಾವುದೇ ಒಂದು ವಿಚಾರದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯ ಆಗುವುದಿಲ್ಲ. ಇದು ನಿಮಗೆ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ತಂದುಕೊಡುತ್ತದೆ ಮತ್ತು ನಿಮ್ಮ ಇಡೀ ಜೀವನ ಹಾಳಾಗುವ ಸಾಧ್ಯತೆ ಇರುತ್ತದೆ.

ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು

 • ಭ್ರಮಾ ಲೋಕದಲ್ಲಿ ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿರುವವರು ತಮ್ಮ ತಲೆಯಲ್ಲಿ ಸಾಕಷ್ಟು ಆಲೋಚನೆಗಳನ್ನು ನಮ್ಮ ಸಂಗಾತಿಯ ಬಗ್ಗೆ ವಿಧ ವಿಧವಾದ ಬಯಕೆಗಳನ್ನು ಹೊಂದಿಕೊಳ್ಳಲು ಪ್ರಾರಂಭ ಮಾಡುತ್ತಾರೆ.
 • ಇದರಿಂದ ಅಂತರ್ಜಾಲದಲ್ಲಿ ವೀಕ್ಷಣೆ ಮಾಡಿದ ರೀತಿ ಮ ಸಂಗಾತಿ ಇರಬೇಕೆಂದು ನೀವು ಬಯಸಬಹುದು. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲದೆ ಅಥವಾ ನಿಮ್ಮ ಬಯಕೆಗೆ ತಕ್ಕಂತೆ ನಿಮ್ಮ ಸಂಗಾತಿ ನಡೆದುಕೊಳ್ಳಲು ಸಾಧ್ಯವಾಗದೆ ನಿಮ್ಮನ್ನು ನಿರಾಸೆ ಮಾಡಬಹುದು.  
 • ಇದರಿಂದ ನಿಮ್ಮ ಸಂಗಾತಿಯ ಮೇಲೆ ನಿಮಗೆ ಕೋಪ - ತಾಪ, ಕಿರಿಕಿರಿ ಎಲ್ಲವೂ ಉಂಟಾಗಬಹುದು. ನಿಜವಾಗಿ ನೀವು ಸಾಕಷ್ಟು ಕುಗ್ಗಬಹುದು.

ಆತ್ಮೀಯತೆಯ ಸಮಸ್ಯೆ ಎದುರಾಗಬಹುದು

 • ಕಲ್ಪನಾ ಲೋಕದಲ್ಲಿ ನೀವು ಲೈಂ*ಗಿಕ ಕ್ರಿಯೆ ನಡೆಸಿದಂತೆ ಕನಸು ಕಾಣುತ್ತಿದ್ದರೆ ನಿಮ್ಮ ಹಾಗೂ ನಿಮ್ಮ ಸಂಗಾತಿ ನಡುವೆ ಅಂತರ ಹೆಚ್ಚಾಗಲು ಇದು ಕಾರಣವಾಗುತ್ತದೆ. ಇದರಿಂದ ನಿಮ್ಮ ಕುಟುಂಬದಲ್ಲಿ ಬಿರುಕು ಮೂಡಬಹುದು.
 • ನಿಮ್ಮ ಸಂಗಾತಿ ನಿಮ್ಮ ಎದುರಿಗೆ ಬಂದ ಸಂದರ್ಭದಲ್ಲಿ ನೀವು ಅವರನ್ನು ಮುಟ್ಟಲು ಸಹ ಇಷ್ಟ ಪಡುವುದಿಲ್ಲ. ಇದರಿಂದ ನಿಮ್ಮ ಮಧ್ಯೆ ಇರಬೇಕಾದ ನಿಜವಾದ ಬಾಂಧವ್ಯ ಹದಗೆಡುತ್ತದೆ.  
 • ಬಹಳಷ್ಟು ಸಂಬಂಧಗಳು ಕೇವಲ ಈ ರೀತಿಯ ಕಲ್ಪನಾ ಲೋಕದಲ್ಲಿ ತಮ್ಮ ಸಂಗಾತಿಯ ಜೊತೆ ಲೈಂ*ಗಿಕ ಕ್ರಿಯೆ ನಡೆಸುವಂತೆ ಕನಸು ಕಂಡು ನಿಜ ಜೀವನದಲ್ಲಿ ಅದು ನಡೆಯದೆ ಹೋದಾಗ ಮನನೊಂದು ಡೈವರ್ಸ್ ಪಡೆದುಕೊಂಡು ಬೇರೆ ಬೇರೆಯಾದ ಸಾಕಷ್ಟು ಉದಾಹರಣೆಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ.

ಊಹೆಗೂ ಮೀರಿದ ನಿರೀಕ್ಷೆಗಳು ಹೆಚ್ಚಾಗಬಹುದು

 • ಇದು ಹೇಗೆಂದರೆ ನಿಮ್ಮ ಜೀವನ ಒಂದು ಸಿನಿಮಾ ಕಥೆಯ ರೀತಿ ಆಗಿ ಬಿಡುತ್ತದೆ. ಏಕೆಂದರೆ ಸಿನಿಮಾ ಕಥೆಯೇ ಬೇರೆ ನಿಜ ಜೀವನವೇ ಬೇರೆ. ಲೈಂಗಿಕತೆಯ ವಿಷಯ ಬಂದಾಗಲೂ ಅಷ್ಟೇ. ನೀವು ನಿಜವಾಗಲೂ ಲೈಂಗಿಕ ಕ್ರಿಯೆಯಲ್ಲಿ ನಿಮ್ಮ ಸಂಗಾತಿಯ ಜೊತೆ ತೊಡಗುವ ಪರಿಯೇ ಬೇರೆ ಆಗಿರುತ್ತದೆ.
 • ನೀವು ಕಲ್ಪನಾ ಲೋಕದಲ್ಲಿ ನಿಮ್ಮ ಸಂಗಾತಿಯ ಜೊತೆ ಲೈಂ*ಗಿಕ ಕ್ರಿಯೆ ನಡೆಸುತ್ತಿರುವ ರೀತಿ ಕಲ್ಪನೆ ಮಾಡಿಕೊಂಡು ಅನುಭವಿಸುವ ಸುಖವೇ ಬೇರೆ ರೀತಿ ಇರುತ್ತದೆ.  
 • ಇದರಿಂದ ನಿಮ್ಮ ಊಹೆಗೂ ಮೀರಿದ ನಿರೀಕ್ಷೆಯನ್ನು ನೀವು ನಿಮ್ಮ ಸಂಗಾತಿಯಿಂದ ನಿಜ ಜೀವನದಲ್ಲಿ ಬಯಸುವ ಸಂದರ್ಭವೇ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ.
 • ಇದರಿಂದ ಮಾನಸಿಕವಾಗಿ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಹಿಂಸೆ ಆಗಬಹುದು. ನೀವು ಅಂದುಕೊಂಡ ಮಟ್ಟಿಗೆ ನಿಮ್ಮ ಲೈಂ*ಗಿಕ ಸುಖ ನಿಮಗೆ ಸಿಗದೇ ಇರಬಹುದು.

 

ಲೈಂಗಿಕ ಚಟುವಟಿಕೆಗೆ ಅಡ್ಡಿಯಾಗುತ್ತದೆ

 • ಪುರುಷರು ಮತ್ತು ಮಹಿಳೆಯರು ತಮ್ಮ ಅಗತ್ಯವಾದ ವಯಸ್ಸಿನಲ್ಲಿ ಲೈಂ*ಗಿಕತೆ ಎನ್ನುವುದು ಸಿಗದೇ ಹೋದಾಗ ಈ ರೀತಿಯ ವರ್ಚುವಲ್ ಸೆಕ್ಸ್ ಅಥವಾ ಭ್ರಮೆಯಿಂದ ಲೈಂಗಿಕ ಸುಖ ಅನುಭವಿಸುವ ತಂತ್ರಕ್ಕೆ ಜಾರುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ.
 • ಆರಂಭಿಕ ದಿನಗಳಲ್ಲಿ ಇದರಿಂದ ಯಾವುದೇ ತೊಂದರೆ ಆಗದಿದ್ದರೂ ನಂತರ ದಿನಕಳೆದಂತೆ ಕ್ರಮೇಣವಾಗಿ ಪುರುಷರಲ್ಲಿ ಜನನಾಂಗಗಳ ಅಸ್ವಸ್ಥತೆ ಎದುರಾಗುತ್ತದೆ. ಪುರುಷರಲ್ಲಿ ಇದರ ಜೊತೆಗೆ ಶೀಘ್ರ ಸ್ಖಲನ ಸಹ ಉಂಟಾಗಬಹುದು.
 • ಮಹಿಳೆಯರಲ್ಲಿ ಲೈಂ*ಗಿಕ ಪರಾಕಾಷ್ಠೆ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಅಥವಾ ಲೈಂಗಿಕ ಪರಾಕಾಷ್ಠೆ ತಲುಪಲು ಸಾಧ್ಯ ಆಗದೇ ಹೋಗಬಹುದು.