ಒಂದೇ ಮಗುವನ್ನು ಹೊಂದುವುದರಿಂದ ಆಗುವ ತೊಂದರೆ, ಲಾಭ, ನಷ್ಟ ಏನು? ಒಂದೇ ಮಗು ಸಾಕು ಎನ್ನುವುದು ಒಳ್ಳೆಯ ನಿರ್ಧಾರವೇ?

ನೋಡ್ರಿ ನೀವು ಆರ್ಥಿಕವಾಗಿ ಎರಡು ಮಕ್ಕಳು ಹೊಂದೋದು ಉತ್ತಮ ನಾ ಅಂದ್ರೆ, ಅದು ಇಲ್ಲ ಒಂದೇ ಮಗು ನಿಮಗೆ ಆರ್ಥಿಕವಾಗಿ ಹಣ ದುಬ್ಬರ ಕಡಿಮೆ ಮಾಡೋದು.

ಆದರೆ ನನ್ನ ಅನಿಸಿಕೆ ಅಂದ್ರೆ ಎರಡು ಮಕ್ಕಳು ಇರೋದು ನಿಮಗೆ ಹಾಗೂ ಮಕ್ಕಳಿಗೆ ಅತಿ ಉತ್ತಮ. 

2 ಮಕ್ಕಳನ್ನು ಹೊಂದುವುದರಿಂದ ಏನು ಪ್ರಯೋಜನ ಎಂದು ನೋಡಿ : 


1. ಕೆಲವು ಬಾರಿ ಒಬ್ಬನಿಗೆ ಹುಷಾರಿಲ್ಲ ಅಂದ್ರೆ ಇನ್ನೊಬ್ಬನ್ನ ವಾಕಿಂಗ್ ಕರ್ಕೊಂಡು ಹೋಗ್ತೀನಿ. ಒಬ್ಬನೇ ವಾಕಿಂಗ್ ಗೆ ಬಂದ್ರೆ ಅವನು ನನ್ನ ಬುಡಕ್ಕೆ ಅಂಟಿಕೊಂಡಿರುತ್ತಾನೆ.

2. ಇಬ್ಬರೂ ಸಕ್ಕತ್ತಾಗ್ ಜಗಳ ಕಾಯ್ತಾರೆ. ಆದರೆ ಒಬ್ಬನ್ನ ಬಿಟ್ಟು ಇನ್ನೊಬ್ಬ ಇರಲ್ಲ.

3. ಒಬ್ಬ ಇನ್ನೊಬ್ಬನ ಅನುಸರಿಸಿಕೊಂಡು ಹೋಗೋದು ಈಗ ಕಲಿತುಕೊಂಡಿದ್ದಾರೆ.

4. ಅವರಿಗೆ ಬೇಜಾರಾದರೆ ಇಲ್ಲ ಮಣ್ಣು ಇಲ್ಲ ನೀರು ಇಲ್ಲ ಯಾವುದಾದರೂ ಹುಳ ಏನಾದರೂ ಇದ್ದರೆ ಸಾಕು ಅವ್ರೆ ಆಟ ಆಡ್ಕೋತಾ ಇರ್ತಾರೆ.

5. ಚಿಕ್ಕವನಿಗೆ ಅಣ್ಣ ಅಂದ್ರೆ ತುಂಬಾ ಇಷ್ಟ. ದೊಡ್ಡವನಿಗೆ ಚಿಕ್ಕವನ ಜೊತೆ ಆಟ ಆಡಕ್ಕೆ ತುಂಬಾ ಇಷ್ಟ.

6. ಹುಳಗಳನ್ನ ಒದ್ದಾಡೋದನ್ನ ಅವರಿಗೆ ನೋಡಲಿಕ್ಕೆ ತುಂಬಾ ಇಷ್ಟ. ನಂಗೂ ಚಿಕ್ ವಯ್ಸಲ್ಲಿ ತುಂಬಾ ಇಷ್ಟ ಇತ್ತು. ನಮ್ಮಮ್ಮ ನಾನು ಚಿಕ್ಕ ವಯಸ್ಸಿನಲ್ಲಿ Godda ಓಡಾಡ್ತಾ ಇದ್ರೆ, ಬಡಿದು ಬಾಯಿಲ್ ಹಾಕೊಂಡ್ಬಿಡ್ತಿದ್ದೆ ಅಂತ ಹೇಳ್ತಾ ಇರ್ತಾರೆ.

7. ಇಬ್ಬರೂನ್ನು ಪಾರ್ಟಿಗೆ ಕರ್ಕೊಂಡು ಹೋದ್ರೆ ಅವರಿಬ್ರು ಸೇರ್ಕೊಂಡು ಒಂದುವರೆ ಗಂಟೆ ಆಟ ಆಡ್ತಾರೆ. ಒಬ್ಬನನ್ನೇ ಆಟಕ್ಕೆ ಕರ್ಕೊಂಡು ಹೋದ್ರೆ ಐದು ನಿಮಿಷ ಕೂಡ ಆಟ ಆಡಲ್ಲ.

8. ಯಾರಾದ್ರೂ ಮನೆಗೆ ಬಂದ್ರೆ ಅವರಿಬ್ಬರಿಗೂ ಇಷ್ಟ ಆಗಲ್ಲ ರೂಮಲ್ಲಿ ಹೋಗಿ ಏನೋ ಕುಸ್ತಿ ಅಥವಾ ಆಟದ ಸಾಮಾನ್ ಇಟ್ಟುಕೊಂಡು ಆಟ ಆಡ್ತಾ ಇರ್ತಾರೆ.

9. ಇಬ್ಬರಿಗೂ ಒಬ್ಬರಿಗೊಬ್ಬರ ಸಂಗಡ ಇಷ್ಟ ಆದರೆ ಜಗಳ ಆಡೋದು ಮಾತ್ರ ಜಬರ್ದಸ್ತ್ , ನಮಗೆ ಕಷ್ಟ!

ಈಗಿನ ಕಾಲದಲ್ಲಿ ಬರೀ ದುಡ್ಡಿನ ಮುಖ ನೋಡಿಕೊಂಡು ಬರಿ ಒಂದು ಮಗು ಹೆತ್ತು ಕುತ್ಕೋತಾರೆ. ನಮಗೆ  ಅನ್ಸೋದು ಅಂದ್ರೆ ಎರಡನೇ ಮಗು ಮಾಡಿಕೊಂಡಿದ್ದು ಅತಿ ಉತ್ತಮ ನಿರ್ಧಾರ ಅಂತ.

ಆದರೆ ನೀವು ಜೀವನದಲ್ಲಿ ಹಲವಾರು ಆರ್ಥಿಕ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಸಮಸ್ಯೆಗಳನ್ನು ಪರಿಹರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಂತರ ಎರಡನೇ ಮಗುವಿಗೆ ಯೋಜಿಸಿ ಇಲ್ಲದಿದ್ದರೆ ನೀವು ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತೀರಿ.

ಮಕ್ಕಳು ತಮ್ಮ ಜೀವನದಲ್ಲಿ ಅದೃಷ್ಟವನ್ನು ತರುತ್ತಾರೆ ಎಂದು ಕೆಲವರು ಹೇಳುತ್ತಾರೆ, ಆದ್ದರಿಂದ ಅದು ಏನೇ ಇರಲಿ, ಅದಕ್ಕೆ ಅನುಗುಣವಾಗಿ ಯೋಜಿಸಿ.