ವರ್ಕೌಟ್ ಮಾಡುವ ಮಹಿಳೆಯರೇ.. ಈ ಸುದ್ದಿ ನಿಮಗಾಗಿಯೇ ತಪ್ಪದೇ ಓದಿ.. ಆಮೇಲೆ ವ್ಯಾಯಾಮ ಮಾಡಿ..

ವರ್ಕೌಟ್ ಮಾಡುವ ಮಹಿಳೆಯರೇ.. ಈ ಸುದ್ದಿ ನಿಮಗಾಗಿಯೇ ತಪ್ಪದೇ ಓದಿ.. ಆಮೇಲೆ ವ್ಯಾಯಾಮ ಮಾಡಿ..

ಈಗ ಎಲ್ಲರೂ ವರ್ಕೌಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಫಿಟ್ ನೆಸ್ ಹಾಗೂ ಆರೋಗ್ಯದ ಮೇಲಿನ ಕಾಳಜಿ ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಎಲ್ಲರೂ ಬೆಳಗ್ಗೆ ಸಂಜೆ ಎನ್ನದೇ ವಾಕಿಂಗ್, ಜಿಮ್, ಯೋಗ ಮಾಡುತ್ತಾರೆ. ಚಿಕ್ಕ ಮಕ್ಕಳು ಕೂಡ ವರ್ಕೌಟ್ ಮಾಡಲು ಶುರು ಮಾಡಿಕೊಂಡಿದ್ದಾರೆ. ಸ್ವಲ್ಪ ದಪ್ಪಗಾದರೂ ಕಾನ್ಶಿಯಸ್ ಆಗುವ ಯುವತಿ-ಯುವಕರು, ಜಿಮ್ ಸೇರಿಕೊಂಡು ಬಿಡುತ್ತಾರೆ. ಎಣ್ನೆ ಪದಾರ್ಥಗಳನ್ನು ತಿನ್ನುವುದೂ ಇಲ್ಲ. ದಪ್ಪಗಾಗುತ್ತೀವಿ ಅಂತ ತುಂಬಾನೇ ಗಮನಕೊಡುತ್ತಾರೆ. 

ಈಗಂತೂ ಎಲ್ಲರ ಮನೆಯಲ್ಲು ತಮ್ಮ ಮಗಳು ಏನೂ ತಿನ್ನೊಲ್ಲ ಡಯಟ್ ಮಾಡುತ್ತಿದ್ದಾಲೆ. ಅದೂ ಇದೂ ಎಂದು ಹೇಳುತ್ತಲೇ ಇರುತ್ತಾರೆ. ಈಗಾ ಯಾಕೆ ಈ ವಿಚಾರವೇಂದರೆ, ಹೆಣ್ಣು ಮಕ್ಕಳು ಯಾವಾಗ ವರ್ಕೌಟ್ ಮಾಡಬೇಕು..? ಯಾವಾಗ ಮಾಡಬಾರದು ಎಂದು ನಿಮಗೆ ಗೊತ್ತಿದೆಯಾ. ಹೆಣ್ಣು ಮಕ್ಕಳ ದೇಹ ತುಂಬಾ ಸೂಕ್ಷ್ಮವಾಗಿರುತ್ತದೆ. ಅವರ ದೇಹಕ್ಕೆ ಸ್ವಲ್ಪವೇ ವ್ಯಾಯಾಮ ಸಾಕಾಗುತ್ತದೆ. ಹೆಣ್ಣುಮಕ್ಕಳಿಗೆ ವಿಟಮಿನ್, ಪ್ರೊಟೀನ್  ಸರಿಯಾಗಿ ದೇಹಕ್ಕೆ ಸೇರಿದರೆ ಅಷ್ಟೇ ಸಾಕು. 

ಇನ್ನು ಹೆಣ್ಣುಮಕ್ಕಳು ಯಾವುದಾದರೂ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರೆ, ಗಾಯವೆಲ್ಲಾ ವಾಸಿಯಾಗಿ, ವೈದ್ಯರು ಹೇಳುವವರೆಗೂ ವ್ಯಾಯಾಮ ಮಾಡಬಾರದು. ಅಲ್ಲದೇ, ಹೆನ್ಣು ಮಕ್ಕಳು ಪ್ರತೀ ತಿಂಗಳು ಪೀರಿಯಡ್ಸ್ ಆಗುತ್ತಾರೆ. ಆಗಲೂ ಕೂಡ ಅವರು ವ್ಯಾಯಾಮ ಮಾಡಬಾರದು. ಅದರಿಂದ ಅವರ ಗರ್ಭ ಚೀಲಕ್ಕೆ ತೊಂದರೆಯಾಗುತ್ತದೆ. ಅಲ್ಲದೇ, ಅವರಿಗೆ ಬೇಗನೇ ಸುಸ್ತಾಗುವ ಸಾಧ್ಯತೆ ಇರುತ್ತದೆ. ಇನ್ನು ಗರ್ಭಾವಸ್ಥೆಯಲ್ಲಂತೂ ಮಹಿಳೆಯರು ವ್ಯಾಯಾಮವನ್ನು ಮಾಡಲೇ ಬಾರದು. ಅದರಿಂದ ಮಗುವಿಗೂ ತೊಂದರೆಯಾಗುವ ಸಾಧ್ಯೆತೆ ಇರುತ್ತದೆ.