ಸಾಲದ ಬಾಧೆಯಿಂದ ಬಳಲುತ್ತಿದ್ದಿರಾ ಹಾಗಾದರೆ ಒಮ್ಮೆ ಈ ವಿಧಾನಯನ್ನು ಮಾಡಿ ನೋಡಿ?…

ಮನುಷ್ಯ ಎಂದ ಮೇಲೆ ಸಮಸ್ಯೆಗಳು ಸಹಜ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಹ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾನೆ. ಎಂತಹ ಸಮಸ್ಯೆ ಬಂದರೂ ಸಹ ಅದನ್ನು ಮೆಟ್ಟಿನಿಂತು ಜಯ ಸಾಧಿಸುವ ವ್ಯಕ್ತಿ ಮಾತ್ರ ಜೀವನದಲ್ಲಿ ಮುಂದೆ ಸಾಗಲು ಸಾಧ್ಯ.ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಮೊಟ್ಟಮೊದಲ ಸಮಸ್ಯೆ ಎಂದರೆ ಹಣಕಾಸಿನ ಸಮಸ್ಯೆ. ಅನೇಕ ಜನರು ಸಾಲದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಪ್ರತಿದಿನ ಸಾಲವನ್ನು ಹೇಗೆ ತೀರಿಸುವುದು ಎನ್ನುವ ಯೋಚನೆಯಿಂದ ತಮ್ಮ ಆರೋಗ್ಯ ಸಹ ಹಾಳು ಮಾಡಿಕೊಳ್ಳುತ್ತಿರುತ್ತಾರೆ.
ಏನೇ ಮಾಡಿದರು ಎಷ್ಟೇ ದುಡಿದರು ಸಹ ಕೆಲವರ ಸಾಲ ಮಾತ್ರ ತೀರುತ್ತಿರುವುದಿಲ್ಲ. ಈ ಸಮಯದಲ್ಲಿ ಅನೇಕ ಜನರು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ ಆದರೂ ಸಹ ಏನು ಪ್ರಯೋಜನ ಆಗಿರುವುದಿಲ್ಲ. ಇಂದು ನಾವು ಆಂಜನೇಯ ಸ್ವಾಮಿಯ ಒಂದು ವಿಧಿಯನ್ನು ಮಾಡಿದರೆ ಸಾಲದಿಂದ ಮುಕ್ತಿ ಪಡೆಯುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ.
ಹೌದು ಶ್ರೀ ಆಂಜನೇಯ ಸ್ವಾಮಿಯನ್ನು ನೆನೆದು ಈ ಒಂದು ವಿಧಿಯನ್ನು ಮಾಡಿದರೆ ನಿಮ್ಮ ಎಲ್ಲಾ ಸಾಲದ ಸಮಸ್ಯೆ ಆದಷ್ಟು ಬೇಗ ತೀರಿ ಹೋಗುತ್ತದೆ. ಹಾಗಾದರೆ ಈ ವಿಧಿಯನ್ನು ಮಾಡುವುದು ಹೇಗೆ? ಈ ವಿಧಿಗೆ ಯಾವೆಲ್ಲ ನಿಯಮನಿಷ್ಠ ಗಳನ್ನು ಪಾಲಿಸಬೇಕು ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ಈ ಪುಟವನ್ನು ಪೂರ್ತಿಯಾಗಿ ಓದಿ.
ನೀವು ಸಾಲದ ಬಾಧೆಯಿಂದ ಬಳಲುತ್ತಿದ್ದರೆ ಈ ಒಂದು ಆಂಜನೇಯನ ವಿಧಿ ಮಾಡುವುದರಿಂದ ನಿಮ್ಮ ಎಲ್ಲಾ ಸಾಲದ ಸಮಸ್ಯೆಗಳ ಜೊತೆಗೆ ಇನ್ನಿತರ ಸಮಸ್ಯೆಗಳು ಸಹ ಆದಷ್ಟು ಬೇಗ ನಿವಾರಣೆಯಾಗುತ್ತದೆ. ಇನ್ನು ಈ ವಿಧಿಗೆ ಮೊದಲು ನೀವು ಹನ್ನೊಂದು ವಿಲೆದೆಲೆಗಳನ್ನು ತೆಗೆದುಕೊಳ್ಳಬೇಕು, ಇದರ ಜೊತೆಗೆ 11 ಅಡಿಕೆಗಳನ್ನು ತೆಗೆದುಕೊಳ್ಳಬೇಕು, ( video credit : kannada master )
ಹಾಗೆ ಆಂಜನೇಯನ ಸ್ವಾಮಿಗೆ ಪ್ರಿಯವಾದ ಕೇಸರಿ ಬಣ್ಣದ ಸಿಂಧೂರವನ್ನು ತೆಗೆದುಕೊಂಡು ಅದನ್ನು ಎಲೆಗೆ ಹಚ್ಚಿ ಅದರಲ್ಲಿ ಅಡಿಕೆ ಇಟ್ಟು ಪಾನ್ ಅನ್ನು ತಯಾರಿಸಬೇಕು. ಇನ್ನು ಈ 11 ಪಾನ್ ಅನ್ನು ತಯಾರಿಸಿದ ನಂತರ ಓಂ ಆಂಜನೇಯ ನಮಃ ಎಂದು ಹೇಳಿ ದೇವರಿಗೆ ಅರ್ಪಿಸಬೇಕು. ಇನ್ನು ಈ ವಿಧಾನಯನ್ನು ವಾರದ ಮಂಗಳವಾರ ಗುರುವಾರ ಅಥವಾ ಶನಿವಾರದಂದು ಪ್ರಾರಂಭಿಸಬೇಕು.
ವಾರಕ್ಕೆ ಒಂದು ಬಾರಿ ಈ ರೀತಿ ಮಾಡಿ ನಂತರ ಈ ವಿಲಿಯದೆಲೆಗಳನ್ನು ಮರುದಿನ ಆಲದ ಮರ ಬಳಿ ಹಾಕಿ ದೇವರಲ್ಲಿ ಪ್ರಾರ್ಥಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಯಾವುದೇ ಸಾಲದ ಸಮಸ್ಯೆ ಇದ್ದರೂ ಆದಷ್ಟು ಬೇಗ ಎಲ್ಲವೂ ನಿವಾರಣೆ ಆಗುತ್ತದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…
.