ಬೆಂಗಳೂರಿಗರಿಗೆ ಶಾಕ್..! 2.3 ಲಕ್ಷ ಮಂದಿಗೆ ಕೊರೊನ ಬರುವ ಶಂಕೆ..!

Updated: Wednesday, July 15, 2020, 16:48 [IST]

ಕಾಯಿಲೆ ಹಿನ್ನೆಲೆಯಲ್ಲಿ ದಿನೇ ದಿನೇ ಇಡೀ ರಾಜ್ಯದ ತುಂಬಾ ಕೊರೊನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಪ್ರತಿದಿನ ಕೇಳಿಬರುತ್ತಲೇ ಇವೆ. ನಿನ್ನೆ ಇದ್ದ ಕೊರೊನ ಕೇಸಸ್ ಒಂದೆರಡು ದಿನ ಬಿಟ್ಟರೆ, ಅವೇ ಕೊರೊನ ಕೇಸ್ ಗಳು ಮೂರುಪಟ್ಟು ಹೆಚ್ಚಾಗಿ ಇಡೀ ರಾಜ್ಯದಾದ್ಯಂತ ಕೊರೊನ ವೈರಸ್ ಜೋರಾಗಿ ರಣ ಕೇಕೆ ಹಾಕುತ್ತಿದೆ.

Advertisement

ಇದೇ ಹಿನ್ನೆಲೆಯಲ್ಲಿ ಇಂದಿಗೆ ನಮ್ಮ ರಾಜ್ಯದ ಬೆಂಗಳೂರಿನಲ್ಲಿ ಒಟ್ಟು ಹದಿನೈದು ಸಾವಿರಕ್ಕೂ ಹೆಚ್ಚು ಕೊರೊನ ಕೇಸಸ್ ಗಳು ಈಗ ಇವೆ ಎನ್ನಲಾಗಿದೆ. ಆದ್ರೆ ನಮ್ಮ ರಾಜ್ಯದ ಆರೋಗ್ಯ ಸಚಿವ ರಾಮುಲು ಅವರು ಮಾಧ್ಯಮದ ಎದುರಿಗೆ ಕೊರೊನ ವಿಚಾರದ ಬಗ್ಗೆ ಕೊರೊನ ಪ್ರಕರಣಗಳ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ ಮುಂದೆ ಓದಿ. ಹೌದು ಹದಿನೈದು ಸಾವಿರ ಕೊರೊನ ಪ್ರಕರಣಗಳು ಬೆಂಗಳೂರಿನಲ್ಲಿವೆ. ಹಾಗಾಗಿ ಇನ್ನೆರಡು ತಿಂಗಳು ಬೆಂಗಳೂರನ್ನ ಮತ್ತು ರಾಜ್ಯದ ಜನರನ್ನು ದೇವರೇ ಕಾಪಾಡಬೇಕು ಎಂದು ಹೇಳುತ್ತಾ.

Advertisement

ಸರಕಾರ ಏನು ಮಾಡಲು ಆಗದೆ ಇರುವ ಸ್ಥಿತಿಯಲ್ಲಿದ್ದು, ಕೊರೊನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ, ಈ ರೋಗದ ನಿಯಂತ್ರಣ ಮಾಡಲು ಆಗುತ್ತಿಲ್ಲ ದೇವರೇ ಕಾಪಾಡಬೇಕು ಎಂದು ಹೇಳಿದರು ಎಂದು ಮೂಲಗಳ ಮೂಲಕ ತಿಳಿದುಬಂದಿದೆ. ಹಾಗೆ ಈಗಿರುವ ಬೆಂಗಳೂರಿನ ಕೊರೊನ ಪ್ರಕರಣಗಳು ಇಷ್ಟೆ ಇಲ್ಲ,

Advertisement

ಈಗಿರುವ ಕೊರೊನ ಕೇಸ್ ನ, ವರದಿ ಬರಲು ವಿಳಂಬವಾಗಲಿದೆ ಮತ್ತು ಪರೀಕ್ಷೆಯ ನಂತರ ಇದು 10 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಕನಿಷ್ಠ ಒಬ್ಬ ವ್ಯಕ್ತಿಯು ಐದು ಜನರಿಗೆ ಸೋಂಕು ತಗುಲಿಸುತ್ತದೆ, ಹಾಗಾಗಿ, ಒಟ್ಟು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಈ ಕೊರೊನ ಸೋಂಕು ಬರುವ ಶಂಕೆ ಸೋಂಕಿತ ತಜ್ಞ ಡಾಕ್ಟರ್ ಗಿರಿಧರ್ ಬಾಬು ಅವರ ಮಾಹಿತಿ ಪ್ರಕಾರ ಇದೆ ಎನ್ನಲಾಗಿದೆ..