ಇಷ್ಟರಲ್ಲೇ ಐಪಿಎಲ್ ಹರಾಜು, ಈ ಆಟಗಾರರನ್ನೆಲ್ಲ ಕೈ ಬಿಡಲು ಮುಂದಾದ 8 ತಂಡದ ಫ್ರಾಂಚೈಸಿಗಳು..!

Updated: Tuesday, January 12, 2021, 13:50 [IST]

ಹೌದು ಕಳೆದ ವರ್ಷ ಕೊರೊನ ನಡುವೆಯೇ, 13ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಯಶಸ್ವಿಯಾಗಿ ಮುಗಿದಿದ್ದು, ಇದೀಗ ಹದಿನಾಲ್ಕನೆಯ ಆವೃತ್ತಿ ಐಪಿಎಲ್ ಗೆ ಎಲ್ಲ ಸಿದ್ಧತೆಯನ್ನು ಬಿಸಿಸಿಐ ನಡೆಸಲು ಮುಂದಾಗಿದೆ. ಹಾಗೆ ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ, ಐಪಿಎಲ್ ಆಡಳಿತ ಮಂಡಳಿಯು ಆಯಾ ತಂಡಗಳ ಫ್ರಾಂಚೈಸಿಗಳಿಗೆ ಯಾವ ಆಟಗಾರರನ್ನು ತಂಡಗಳಿಂದ ಬಿಡುಗಡೆ ಮಾಡುತ್ತೀರಿ, ಮತ್ತು ಯಾವ ಆಟಗಾರರನ್ನು ಉಳಿಸಿಕೊಳ್ಳಲು ಮುಂದಾಗಿದ್ದೀರೆಂದು ಪ್ರಶ್ನೆ ಮಾಡಿದ್ದು, ಲಿಸ್ಟ್ ರೆಡಿ ಮಾಡಿಕೊಳ್ಳಲು ಐಪಿಎಲ್ ಆಡಳಿತ ಮಂಡಳಿ ಸೂಚನೆ ನೀಡಿದೆಯಂತೆ.   

Advertisement

ಅದರ ಪ್ರಕಾರ ಈ ವರ್ಷ ಮಾರ್ಚ್ ತಿಂಗಳಲ್ಲಿ ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಕ್ರಿಕೆಟ್  ಆರಂಭ ಆಗುತ್ತಿದ್ದು, ಇದೀಗ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಅಷ್ಟಕ್ಕೂ ಯಾವ ತಂಡಗಳು ಯಾವ ಆಟಗಾರನನ್ನು ತಮ್ಮ ತಂಡದಿಂದ ಬಿಡುಗಡೆ ಮಾಡಲು ಮುಂದಾಗಿವೆ ಗೊತ್ತಾ ಮುಂದೆ ಓದಿ..

ಹೌದು ಮೊದಲನೆಯದಾಗಿ ಟಾಪ್ ತಂಡವಾದ, ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟೀಮ್  ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ತಂಡದಲ್ಲಿ ಪವನ್ ನೇಗಿ, ಉಮೇಶ್ ಯಾದವ್, ಜೋಷ್ ಫೀಲಿಪ್ಪೆ, ಡೆಲ್ ಸ್ಟ್ರೀನ್, ಶಹಬಾಜ್ ಅಹಮದ್, ಪವನ್ ದೇಶಪಾಂಡೆ ಇವರನ್ನೆಲ್ಲಾ ಕೈಬಿಡಲಾಗುತ್ತದೆ ಎಂದು ಕೇಳಿಬಂದಿದೆ.    

Advertisement

ಡೆಲ್ಲಿ ಕ್ಯಾಪಿಟಲ್ಸ್  ತಂಡದಿಂದ, ಅಜಿಂಕ್ಯ ರಹನೆ, ಹಾಗೂ ಅವೇಶ್ ಖಾನ್, ಹರ್ಷಲ್ ಪಾಟೀಲ್, ಇಶಾಂತ್ ಶರ್ಮಾ, ಕೀಮೊ ಪಾಲ್, ಸಂದೀಪ್ ಲಮಿಚ್ಚೆನೆ, ಕ್ಯಾರಿ, ಲಲಿತ್ ಯದವ್, ಮೋಹಿತ್ ಶರ್ಮ. ಇವರೆನ್ನೆಲ್ಲ  ಕೈ ಬಿಡಲು ಮುಂದಾಗಿದೆಯಂತೆ ಡೆಲ್ಲಿ ತಂಡ..

ಇನ್ನು ಸನ್ರೈಸರ್ಸ್ ಹೈದರಾಬಾದ್:  ಬೇಸಿಲ್ ತಂಪಿ, ಬಿಲ್ಲಿ ಸ್ಟಾನ್ ಲೇಕ್, ಮೊಹಮ್ಮದ್ ನಬಿ, ಶ್ರೀವತ್ಸ ಗೋಸ್ವಾಮಿ, ಸಿದ್ಧಾರ್ಥ್, ವಿರಾಟ್ ಸಿಂಗ್, ಬಾವಾನಕಾ ಸಂದೀಪ್, ಫ್ಯಾಬಿಯನ್ ಅಲೆನ್, ಸಂಜಯ್ ಯದವ್‌ ಈ ಆಟಗಾರರನ್ನು ತಂಡದಿಂದ ಕೈಬಿಡಲಾಗುತ್ತದೆ ಎಂದು ಫ್ರಾಂಚೈಸಿ ನಿರ್ಧಾರ ಮಾಡಿದೆಯಂತೆ.   

Advertisement

ರಾಜಸ್ಥಾನ್ ರಾಯಲ್ಸ್:  ಮಾಯಾಂಕ್ ಮಾರ್ಕಂಡೆ, ಅಂಕಿತ್ ರಜಪೂತ್, ಮನನ್ ವೂಹ್ರಾ, ಶಶಾಂಕ್ ಸಿಂಗ್, ವರುನ್ ಆರನ್, ಓಶಾನೆ ಥಾಮಸ್, ಅನಿರುಧ್ ಜೋಷಿ, ಆಂಡ್ರ್ಯ ಟೈ, ಆಕಾಶ್ ಸಿಂಗ್, ಅನುಜ್ ರಾವತ್. ಟೀಮ್ ನಿಂದ ಕೈ ಬಿಡಲಾಗುತ್ತಂತೆ.

ಮುಂಬೈ ಇಂಡಿಯನ್ಸ್ :  ಆದಿತ್ಯ ತಾರಾ, ಧವಲ್ ಕುಲಕರ್ಣಿ, ಜಯಂತ್ ಯಾದವ್, ಮಿಚಲ್ ಮೆಕ್ಲೆನಾಗನ್, ಕ್ರಿಸ್ ಲಿನ್, ಮೋಹಿನ್ ಖಾನ್, ದಿಗ್ವಿಜಯ್ ದೇಶ್ಮುಖ್, ಪ್ರಿನ್ಸ್ ಬಲ್ವಂತ್ ರೈ ಸೇರಿದಂತೆ ಹಲವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಕೊನೆಯದಾಗಿ, ಚೆನ್ನೈ ಸೂಪರ್ ಕಿಂಗ್ಸ : ಕೆಎಂ ಆಸಿಫ್ ಇಮ್ರಾನ್ ತಾಹಿರ್, ಕೇದಾರ್ ಜಾಧವ್, ಕರ್ಣ್ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಎಂ ವಿಜಯ್, ಪಿಯೂಷ್ ಚಾವ್ಲಾ, ಲುಂಗಿ ಎನ್ ಜಿಡಿ, ಹರ್ಭಜನ್ ಸಿಂಗ್, ಶೇನ್ ವ್ಯಾಟ್ಸನ್ ರನ್ನ ಟೀಮ್ ನಿಂದ ಕೈ ಬಿಡಲು ಈ ಚೆನ್ನೈ ಪ್ರಾಂಚೈಸಿ ಮುಂದಾಗಿದೆ ಎನ್ನಲಾಗುತ್ತಿದೆ. ಈ ಮಾಹಿತಿ ಇಷ್ಟವಾದ್ರೆ ಶೇರ್ ಮಾಡಿ, ಕಾಮೆಂಟ್ ಮಾಡಿ ,ಹಾಗೆ ಪಂಜಾಬ್ ಟೀಮ್ ಇನ್ನೂ ಲಿಸ್ಟ್ ಬಿಡದ ಕಾರಣ ಇಲ್ಲಿ ಪ್ರಸ್ತಾಪಿಸಿಲ್ಲ..