ರಾಜ್ಯದಲ್ಲಿ ನೈಟ್ ಕರ್ಪ್ಯೂ ಆದೇಶ ಹೊರಡಿಸಿದ ಬಿ ಎಸ್ ವೈ..! ಯಾವ ದಿನದವರೆಗೆ ಗೊತ್ತಾ..?

Updated: Wednesday, December 23, 2020, 13:33 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಮಾತ್ರವಲ್ಲದೆ, ಇಡೀ ಭಾರತ ದೇಶದಲ್ಲಿ ಮತ್ತೊಂದು ಕರೋನವೈರಸ್ ರೀತಿಯೇ ಹೊಸ ರೋಗ ಒಂದು ಹರಡಿದೆ ಎನ್ನುವ ಚರ್ಚೆ ಮಾತುಗಳು, ಎಲ್ಲಕಡೆ ಕೇಳಿ ಬಂದಿದ್ದವು. ಅದೇ ಬ್ರಿಟನ್ ವೈರಸ್. ಹೌದು ಅಷ್ಟಕ್ಕೂ ಆ ಬ್ರಿಟನ್ನ ವೈರಸ್ ಯಾವುದು, ಮತ್ತು ಅದು ಹೇಗೆ ಸಂಭವಿಸುತ್ತದೆ ಎಂದು ಈಗಾಗಲೇ ಅದರ ಬಗ್ಗೆ ಸಂಶೋಧಕರು ಅಧ್ಯಯನ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.  

Advertisement

ಇದೆಲ್ಲದರ ನಡುವೆ ನಿನ್ನೆಯಷ್ಟೇ ಬ್ರಿಟನ್ ನಿಂದ ಭಾರತಕ್ಕೆ ಬಂದಿಳಿದ, ಕೆಲವರಲ್ಲಿ ಕರೋನಾ ರೀತಿಯೇ ಇನ್ನೊಂದು ವೈರಸ್ ಪಾಸಿಟಿವ್ ಬಂದಿದೆ. ಕಲ್ಕತ್ತದ ಆರು ಜನರಲ್ಲಿ ಹಾಗೂ ದೆಹಲಿ 5ಜನರಲ್ಲಿ ಮತ್ತು ಚೆನ್ನೈನ ಒಬ್ಬರಲ್ಲಿ, ಇದೆ ಹೊಸ ವೈರಸ್ ಸದ್ಯ ಪಾಸಿಟಿವ್ ಆಗಿ ಕಾಣಿಸಿದೆಯಂತೆ. ಹಾಗಾಗಿ ಬ್ರಿಟನ್ ನಿಂದ ನಡೆಯುವ ಎಲ್ಲ ವಹಿವಾಟುಗಳನ್ನು ಬಂದ್ ಮಾಡಿಸಲಾಗಿದ್ದು, ಎಲ್ಲ ಸಂಚಾರ ವ್ಯವಸ್ಥೆಯನ್ನು ಕೂಡ ಬಂದ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮತ್ತು ಅಲ್ಲಿಂದ ಬರುವವರನ್ನು ವೈದ್ಯರು ತಪಾಸಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.  

Advertisement

ಇದೆಲ್ಲದರ ನಡುವೆ ನಮ್ಮ ರಾಜ್ಯ ಸರ್ಕಾರ ಕೂಡ  ಎಚ್ಚೆತ್ತುಕೊಂಡಿದ್ದು, ಇದೀಗ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ರಾಜ್ಯದಲ್ಲಿ ಒಟ್ಟು 9 ದಿನಗಳ ಕಾಲ ಕರ್ಫ್ಯೂ ಆದೇಶವನ್ನು ಹೊರಡಿಸಿದ್ದಾರೆ. ಇಂದಿನಿಂದಲೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6:00 ಗಂಟೆಯವರೆಗೂ ಯಾರು ಕೂಡ ರಾತ್ರಿ ಸಮಯದಲ್ಲಿ ಓಡಾಡಬಾರದು ಎಂದು ಆದೇಶ ಹೊರಡಿಸಿದ್ದಾರಂತೆ. ಮತ್ತು ಇದರ ವಿರುದ್ಧ ಹೋದವರಿಗೆ ಕಠಿಣ ಶಿಕ್ಷೆ ಇರುವುದಾಗಿಯೂ ಕೂಡ ಹೇಳಿದ್ದಾರೆ ಎಂದು ಕೇಳಿಬಂದಿದೆ. ಹೌದು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಮತ್ತೊಂದು ವೈರಸ್ ಬಂದಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ಕಮೆಂಟ್ ಮಾಡಿ, ಜೊತೆಗೆ ತಪ್ಪದೇ ಶೇರ್ ಮಾಡಿ ದನ್ಯವಾದಗಳು...