ರವಿ ಬೆಳಗೆರೆಯವರ ಕೊನೆಯುಸಿರೆಳೆದ ಕೊನೆಯ ಕ್ಷಣಗಳು..! ಹೇಗಿತ್ತಂತ ಇಲ್ನೋಡಿ..

Updated: Wednesday, November 18, 2020, 09:45 [IST]

ಬಳ್ಳಾರಿಯಿಂದ ಲೇಖನಿ ಹಿಡಿದು ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಕೋಟಿ ಕೋಟಿ ಹಣ, ದೊಡ್ಡಮಟ್ಟದ ಹೆಸರು ಸಂಪಾದಿಸಿದ ರವಿಬೆಳಗೆರೆಯವರು ಅದೆಷ್ಟೋ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅದೆಷ್ಟೋ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ. ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಸಾಕಷ್ಟು ರಾಜಕಾರಣಿಗಳ ಸಿನಿಮಾ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಬರೆದು ಕೆಲವರ ವಿರೋಧವನ್ನು ಕಟ್ಟಿಕೊಂಡಿದ್ದುಂಟು. ಆದರೆ ಇದ್ದದ್ದನ್ನು ಇದ್ದಹಾಗೆ ಹೇಳುವ ಅವರ ಸರಳವಾದ ವ್ಯಕ್ತಿತ್ವ ದಿಂದ ಪರಿಚಿತರಾದ ರವಿಬೆಳಗೆರೆ ಎಂದರೆ ಸಾಕಷ್ಟು ಜನರಿಗೆ ಪ್ರೀತಿಯಿತ್ತು, ಗೌರವವಿತ್ತು.

Advertisement

ಹೌದು.. ನಿನ್ನೆ ಇದ್ದಕ್ಕಿದ್ದ ಹಾಗೆ ಆ ಚೇತನ ಇನ್ನಿಲ್ಲದಂತಾಗಿದೆ. ಗುರುವಾರ ರಾತ್ರಿ 12 ಗಂಟೆ 15ನಿಮಿಷಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅಷ್ಟು ತಡರಾತ್ರಿ ಅವರಿಗೆ ಏನಾಗಿತ್ತು.ಆ ಸಮಯದಲ್ಲಿ ಅವರ ಜೊತೆಗೆ ಇದ್ದವರು ಯಾರು ಎಂಬುದನ್ನು ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ. ಅವರ ಸಾಯುವ ಕೊನೆಯ ಕ್ಷಣ ಕಳೆದಿದ್ದು ಬೇರೆಲ್ಲೂ ಅಲ್ಲ ಅವರ ಜೀವನದ ಬಹಳಷ್ಟು ಸಮಯ ಕಳೆದ ಅವರ ಆಫೀಸ್ನಲ್ಲಿ ಪುಸ್ತಕ ಬರೆಯುತ್ತಿರುವಾಗಲೇ ಅಸ್ತಂಗತರಾಗಿದ್ದಾರೆ.ರವಿ ಬೆಳಗೆರೆಯವರು ಹಗಲು ರಾತ್ರಿ ಎನ್ನದೆ ಪುಸ್ತಕವನ್ನು ಓದುವುದು.. ಬರೆಯುವುದು.. ಅವರ ನಿತ್ಯದ ಕೆಲಸವಾಗಿತ್ತು. ಮನೆಗೆ ಹೋಗುವುದೇ ಕಡಿಮೆ ರಾತ್ರಿಯಲ್ಲಾ ನಿದ್ದೆಯು ಕಡಿಮೆ.

Advertisement

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಸದಾ ಆಫೀಸಿನಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅವರು ಸಾಯುವ ರಾತ್ರಿಯೂ ಕೂಡ ಬರೆಯುವುದನ್ನು ಮುಗಿಸಿ ತಡರಾತ್ರಿ ನಿದ್ದೆಗೆ ಜಾರಿದ್ದರು 12 ಹತ್ತಕ್ಕೆ ಎಚ್ಚರಗೊಂಡಿದ್ದ ರವಿಯವರು  ಮಗನಂತೆ ತಿಳಿದುಕೊಂಡಿದ್ದ ತಮ್ಮ ಸಹಾಯಕ ವಾದಿರಾಜ ನನ್ನು ಕರೆದು ಸಮಯ ಎಷ್ಟಾಗಿದೆ ಎಂದು ಕೇಳಿದ್ದಾರೆ. 12 ಗಂಟೆ ಹತ್ತು ನಿಮಿಷ ಆಗಿದೆ. ಬಾತ್ರೂಮ್ ಗೆನಾದರು ಹೋಗ್ತೀರಾ ಎಂದು ವಾದಿರಾಜ ಕೇಳಿದ್ದಾರೆ. ಇಲ್ಲ ಎಂದು ಕತ್ತು ಅಲ್ಲಾಡಿಸಿದ ರವಿಬೆಳಗೆರೆಯವರು ಅದೇ ಕ್ಷಣ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.    

ತದನಂತರ ವಾದಿರಾಜ್ ರವಿಬೆಳಗೆರೆಯವರ ಮಗ ಕರ್ಣನಿಗೆ ಫೋನ್ ಮಾಡಿ ವಿಚಾರವನ್ನು ತಿಳಿಸಿದರು. ಅಲ್ಲೇ ಹತ್ತಿರದಲ್ಲೇ ಇದ್ದ ಕರ್ಣ ತಕ್ಷಣ ಆಫೀಸಿಗೆ ಬಂದಿದ್ದಾರೆ. ಜೊತೆಗೆ ರವಿ ಅವರ ಮಗಳು ಚೇತನ ಕೂಡ ಬಂದಿದ್ದಾರೆ. ಅಷ್ಟರಲ್ಲಾಗಲೇ ರವಿಯವರು ಇಹ ಲೋಕವನ್ನು ತ್ಯಜಿಸಿದ್ದರು ಆದರೂ ರವಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು. ಡಾಕ್ಟರ್  ಕೂಡ ರವಿಯವರ ಸಾವನ್ನಪ್ಪಿದ ವಿಚಾರವನ್ನು ಖಚಿತಪಡಿಸಿದ್ದಾರೆ.    

ಅವರ ಪ್ರೀತಿಯ ಪ್ರಾರ್ಥನಾ ಶಾಲೆಯಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬನಶಂಕರಿಯಲ್ಲಿ ಅಂತಿಮ ಕಾರ್ಯವನ್ನ ನೆರವೇರಿಸಲಾಗಿತ್ತು. ರಾಜಕಾರಣಿಗಳು, ಪತ್ರಕರ್ತರು, ಸ್ನೇಹಿತರು, ಅಭಿಮಾನಿಗಳು ಎಲ್ಲರೂ ಕೋರೋನ ಲೆಕ್ಕಿಸದೆ ಆಗಮಿಸಿ ಅಗಲಿದ ಮಹಾನ್ ಪತ್ರಕರ್ತನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ ಎಂದು ಸಾಮಾಜಿಕ ಸುದ್ದಿಮಾಧ್ಯಮಗಳಿಂದ ನಮಗೆ ತಿಳಿದು ಬಂದಿದೆ. ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ ಕಾಮೆಂಟ್ ಮಾಡಿ ಧನ್ಯವಾದಗಳು...