ಗೊಂದಲ ಸೃಷ್ಟಿಸಿದ ಶಾಲೆಯ ಪುನರಾರಂಭ..! ಪೋಷಕರು, ತಜ್ಞರು ಹೇಳಿದ್ದೇನು ಗೊತ್ತಾ..? ನಿಮ್ಮ ಅನಿಸಿಕೆ ಏನು ?

Updated: Thursday, October 8, 2020, 15:17 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಮಾತ್ರವಲ್ಲದೇ, ಇಡೀ ದೇಶಾದ್ಯಂತ ಕರೋನವೈರಸ್ ಎಂಬ ಸಾಂಕ್ರಾಮಿಕ ರೋಗವು ಹೆಚ್ಚಿನ ಮಟ್ಟದಲ್ಲಿ ಸಾಕಷ್ಟು ಜನರಿಗೆ ಆತಂಕ ಮೂಡಿಸಿದೆ. ಮತ್ತು ಈ ಕರೋನವೈರಸ್ ಕಾಯಿಲೆಯಿಂದ ಸಾಕಷ್ಟು ಜನರು ತುಂಬಾ ಭಯಭೀತರಾಗಿದ್ದಾರೆ. ಇದರ ನಡುವೆ ಸರ್ಕಾರ ಈಗಾಗಲೇ ಶಾಲೆಗಳನ್ನು ಪುನರಾರಂಭ ಮಾಡಬೇಕೆಂಬುದರ ಚಿಂತನೆ ಮಾಡಿದ್ದು, ಅಕ್ಟೋಬರ್ 15ಕ್ಕೆ ಶಾಲೆಗಳನ್ನು ತೆರೆಯುವಂತೆ ಆದೇಶ ನೀಡಿದ್ದು ಜೊತೆಗೆ ಕೆಲ ಕ್ರಮಗಳನ್ನು ಪಾಲಿಸಿ ಎಂದು ಹೇಳಿದ್ದಾಗಿ ಮಾಧ್ಯಮ ಮೂಲಕ ತಿಳಿದುಬಂದಿದೆ.    

Advertisement

 ಆದರೆ ಈಗ ಶಾಲೆಗಳನ್ನು ಪುನರಾರಂಭ ಮಾಡುವ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೌದು ಶಾಲೆಗೆ ಕಳುಹಿಸುವ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ, ಕರೋನ ಆತಂಕಕ್ಕೆ ಹೆದರಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುತ್ತಿಲ್ಲವಂತೆ. ಜೊತೆಗೆ ಇದೇ ವಿಷಯವಾಗಿ ಪೋಷಕರು ಮತ್ತು ಶಿಕ್ಷಣ ತಜ್ಞರು ಮತ್ತು ಆರೋಗ್ಯ ತಜ್ಞರು ಏನು ಹೇಳಿದ್ದಾರೆ ಗೊತ್ತಾ ಮುಂದೆ ಓದಿ.ಹೌದು ಪೋಷಕರು ಹೇಳುವ ಹಾಗೆ " ನಮ್ಮ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಇನ್ನಷ್ಟು ದಿನಗಳಕಾಲ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ,     

Advertisement

ಸರ್ಕಾರ ಕೂಡ ಏನೇ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿದರು,ಶಾಲೆಯಲ್ಲಿ ಸಣ್ಣ ಮಕ್ಕಳು ಇದನ್ನು ಪಾಲಿಸುವುದಿಲ್ಲ ,ಜೊತೆಗೆ ಶಾಲೆಯ ಶಿಕ್ಷಕರು ಚಿಕ್ಕ ಮಕ್ಕಳ ಕಡೆಗೆ ಗಮನ ಹರಿಸುವುದಿಲ್ಲ, ಮುಖಕ್ಕೆ ಮಾಸ್ಕ್ ಜೊತೆಗೆ ಅಂತರ ಕಾಯ್ದುಕೊಳ್ಳಬೇಕೆನ್ನುವ ಹಾಗೆ ಹೇಳಿದ್ದರೂ, ಚಿಕ್ಕ ಮಕ್ಕಳು ಅದನ್ನು ಪಾಲಿಸುತ್ತಾರೆ ಎಂದು ಹೇಗೆ ನಂಬುವುದು, ಮತ್ತು ಚಿಕ್ಕ ಮಕ್ಕಳು ಸುಚಿತ್ವ ಕಾಪಾಡಿಕೊಂಡೇ ಇರುತ್ತಾರೆ ಎಂದು ಹೇಗೆ ಹೇಳುವುದು, ಜೊತೆಗೆ ಯಾವ ಶಿಕ್ಷಕರು ಕೂಡ ಚಿಕ್ಕ ಮಕ್ಕಳ ಕಡೆ ಗಮನ ಹರಿಸದಿರುವುದೇ ನಮಗೆ ದೊಡ್ಡ ಆತಂಕ ವಾಗಿದೆ     

Advertisement

ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದಲ್ಲಿ, ಚಿಕ್ಕ ಮಕ್ಕಳ ಮೇಲೆ ತುಂಬಾ ಪರಿಣಾಮ ಬೀಳುತ್ತದೆ" ಎಂದು ಹೇಳಿದ್ದಾರೆ. ಮತ್ತು ಆರೋಗ್ಯ ತಜ್ಞರು ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದು " ಚಿಕ್ಕಮಕ್ಕಳಿಗೆ ಇಲ್ಲಿಯವರೆಗೆ ಕರೋನವೈರಸ್ ಯಾವುದೇ ತೊಂದರೆ ನೀಡಿಲ್ಲ. ಮತ್ತು ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗಿ ಚಿಕ್ಕಮಕ್ಕಳು ಕಂಡುಬಂದಿಲ್ಲ. ಇವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ"  ಎನ್ನುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.  ಮಕ್ಕಳ ಹಕ್ಕು ಆಯೋಗದಿಂದ ಶಾಲೆ ತೆರೆಯಲು ಶಿಫಾರಸು ಮಾಡಿದೆ ಆದರೆ ಇದಕ್ಕೆ ಪೋಷಕರ ಕಡೆಯಿಂದ ಬಹಳ ವಿರೋಧವಿದೆ

ಪೋಷಕರು,ವೈದ್ಯಕೀಯ ತಜ್ಞರು ,ಶಿಕ್ಷಣ ತಜ್ಞರು, ಹೇಳಿರುವ ಅಭಿಪ್ರಾಯಗಳ ಬಗ್ಗೆ ನಿಮ್ಮ ಅನಿಸಿಕೆ ಏನು?  ಮತ್ತು ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೀರಾ? ಇಲ್ಲವೋ? ಎಂಬುದನ್ನು ನಮಗೆ ಕಮೆಂಟ್ ಮಾಡಿ ಮತ್ತು ಈ ಮಾಹಿತಿಯನ್ನು ಎಲ್ಲರೂ ಶೇರ್ ಮಾಡಿ ಧನ್ಯವಾದಗಳು...