ವಾವ್ ಭರ್ಜರಿ ಆಫರ್ಈ ಸ್ಮಾರ್ಟ್ ಟಿವಿ ಈಗ ಕೇವಲ 6000 ಕ್ಕೆ ಸಿಗುತ್ತೆ !! ಎಲ್ಲಿ ಸಿಗುತ್ತೆ ಗೊತ್ತಾ ?

Updated: Thursday, October 15, 2020, 11:31 [IST]

ಹೌದು ಸೂಪರ್​​ ಪ್ಲಾಸ್ಟ್ರೋನಿಕ್​​ ಎಂಬ ಕಂಪನಿ ಥಾಮ್ಸನ್​​ ಟಿವಿಗಳ ಮಾರಾಟಕ್ಕೆ ಭರ್ಜರಿ ಆಫರ್​ ಗಳನ್ನು ನೀಡಿದೆ. ತುಂಬಾ ಕಡಿಮೆ ಮತ್ತು  ಆಕರ್ಷಕ ಬೆಲೆಗೆ ಟಿವಿಗಳನ್ನು ಮಾರಾಟ ಮಾಡಲು ಮುಂದೆ ಬಂದಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಆನ್​ಲೈನ್​ ಮೂಲಕ ಮಾರಾಟ ಮಾಡುವ ಫ್ಲಿಪ್​ಕಾರ್ಟ್​ "ಬಿಗ್​ ಬಿಲಿಯನ್​ ಡೇಸ್" ಗಳಿಂದಲೂ ಥಾಮ್ಸನ್​ ಸಕತ್ ಸ್ಮಾರ್ಟ್​ ಟಿವಿಗಳನ್ನು ಮರುತ್ತಿದ್ದಾರೆ. ಇವೆಲ್ಲವೂ ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ ಆಫರ್ ನೀಡಲಾಗಿದೆ ಎಂದು ಕೇಳಿಬಂದಿದೆ. 

Advertisement

ಸೂಪರ್​ ಪ್ಲಾಸ್ಟ್ರೋನಿಕ್​ ಸಂಸ್ಥೆಯು ಥಾಮ್ಸನ್​ ಸ್ಮಾರ್ಟ್​ ಟಿವಿಯನ್ನು ಕೇವಲ 5999 ರೂ ರೂಪಾಯಿಗಳಿಂದ ಮಾರಾಟ ಮಾಡುತ್ತಿದೆಯಂತೆ. ಜೊತೆಗೆ ಆ್ಯಂಡ್ರಾಯ್ಡ್​ ಸ್ಮಾರ್ಟ್​ ಟಿವಿಗಳನ್ನು ಕೇವಲ 10,999 ರೂಪಾಯಿ ಬೆಲೆಗೆ ಸೇಲ್​ ಮಾಡುತ್ತಿದೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ.

ಈ ವರ್ಷದ ಮುಂಬರುವ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅತ್ತ ಸ್ಮಾರ್ಟ್​ಟಿವಿ ಕಂಪನಿಗಳು, ತಮ್ಮ ಉತ್ಪನ್ನಗಳ ಬೆಲೆಯನ್ನು ಕಡಿತ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಫ್ಲಿಪ್​ಕಾರ್ಟ್​ ಸಹ , ಬೇರೆ ಬೇರೆ ರೀತಿಯ ಹಲವಾರು ಉತ್ಪನ್ನಗಳ ಮೇಲೆ ಕಡಿಮೆ ಬೆಲೆಯನ್ನು ನಿಗದಿಪಡಿಸ ಮಾರಾಟ ಮಾಡುತ್ತಿದೆಯಂತೆ. ಮತ್ತು ಅತ್ಯಾಕರ್ಷಕ ಬೆಲೆಗೆ ಗ್ರಾಹಕರಿಗೆ ಉತ್ಪನ್ನಗಳು ದೊರಕುವಂತೆ ಮಾಡುತ್ತಿದೆ.

Advertisement

ಇದೆಲ್ಲದರ ನಡುವೆ , 'ಬಿಗ್​ ಬಿಲಿಯನ್​ ಡೇಸ್​' ನಲ್ಲಿ 24 ಇಂಚಿನ ಹೆಚ್​ಡಿ ಬೇಸಿಕ್​ ಮಾಡೆಲ್​ ಆರ್​ 9 ಸಿರೀಸ್​ ಟಿವಿಯನ್ನು ಕೇವಲ 5999 ರೂಪಾಯಿಗೆ ಮಾರಾಟ ಮಾಡಲು ಮುಂದಾದರೆ, 32 ಇಂಚಿನ ಮಾಡೆಲ್​ ಟಿವಿಯನ್ನು ಕೇವಲ 8499 ರೂಪಾಯಿಗೆ ಮಾರಾಟ ಮಾಡುತ್ತಿದೆ ಎಂದು ತಿಳಿದುಬಂದಿದೆ.

'OATHPRO' ಸಿರೀಸ್​ ಗಳ, ಟಿವಿಯ ಬೆಲೆ 24,499 ರೂಪಾಯಿಯಿಂದ ಆರಂಭವಾಗುತ್ತದೆ. ಜೊತೆಗೆ 65 ಇಂಚಿನ ಟಿವಿ ಬೆಲೆ ಒಟ್ಟು 45,999 ರೂಪಾಯಿಯಂತೆ, ಹಾಗೂ 75 ಇಂಚಿನ ಟಿವಿ ಬೆಲೆ 94,499 ರೂಪಾಯಿಗೆ 'ಬಿಗ್​ ಬಿಲಿಯನ್ ಡೇಸ್​' ನಲ್ಲಿ ಸೇಲ್​ ಮಾಡಲು ಮುಂದೆ ಬಂದಿವೆ ಎಂದು ತಿಳಿದುಬಂದಿದೆ. ಮಾಹಿತಿ ಇಷ್ಟ ವಾದಲ್ಲಿ ಹೆಚ್ಚು ಶೇರ್ ಮಾಡಿ, ನಿಮ್ಮ ಅನಿಸಿಕೆ ಪ್ರಶ್ನೆಗಳನ್ನು ಕಾಮೆಂಟ್ ಮಾಡಿ..