ಪಾದರಾಯನಪುರ ರಸ್ತೆಗಳಿಗೆ ಮುಸ್ಲಿಮರ ಹೆಸರಿಡಲು ಮುಂದಾದ ಬಿಬಿಎಂಪಿ..! ತೇಜಸ್ವಿ ಹೇಳಿದ್ದೇನು ಗೊತ್ತಾ.?

Updated: Friday, January 1, 2021, 19:19 [IST]

ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನ ಇಡಲು ಮುಂದಾಗಿರುವ ಬಿಬಿಎಂಪಿ  ತೀರ್ಮಾನಕ್ಕೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಆಗಿರುವ ತೇಜಸ್ವಿ ಸೂರ್ಯ ಅವರು ಕೂಡ, ಇದೀಗ ಬಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ಇದೆ ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನೀಡುವ ಹಿನ್ನೆಲೆಯಲ್ಲಿ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು, ಇದೀಗ ತೇಜಸ್ವಿ ಅವರು ಕೂಡ ಇದೆ ವಿಚಾರದಲ್ಲಿ ಮಾತನಾಡಿದ್ದಾರೆ. ಹೌದು   

Advertisement

ಬಿಬಿಎಂಪಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಕಟುವಾಗಿ ಪ್ರಶ್ನೆ ಮಾಡಿ ಆಯುಕ್ತರಿಗೆ ಪತ್ರ ಬರೆದಿರುವ ತೇಜಸ್ವಿಯವರು 'ಪಾದರಾಯನಪುರದ ಕೆಲವು ರಸ್ತೆಗಳಿಗೆ ಕೇವಲ ಮುಸ್ಲಿಂ ಹೆಸರುಗಳ ನಾಮಕರಣಕ್ಕೆ ಪ್ರಸ್ತಾವ ಮಾಡಿರುವ ಬಿಬಿಎಂಪಿಯ ನಿರ್ಧಾರವನ್ನು ಸಂಸದರಾದ ಅನಂತಕುಮಾರ್ ಹೆಗಡೆ ಅವರೊಂದಿಗೆ ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ' ಎಂದು ಹೇಳಿದ್ದಾರೆ..'ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ಮುಸಲ್ಮಾನರ ಹೆಸರುಗಳನ್ನೇ ಶಿಫಾರಸ್ಸು ಮಾಡಿರುವ  ಬಿಬಿಎಂಪಿಯ, ಈ ನಿರ್ಧಾರವು ಭಾರತ, ಪಾಕಿಸ್ಥಾನದ ವಿಭಜನೆಗೆ ಮೂಲವಾಗಿದ್ದ ದ್ವಿರಾಷ್ಟ್ರ ಸಿದ್ಧಾಂತದ ಪಳಿಯುಳಿಕೆಯಂತಿದೆ'.. ಎಂಬುದಾಗಿ ಸಂಸದರಾಗಿರುವ ತೇಜಸ್ವಿಯರು ಬಿಬಿಎಂಪಿಯ ಈ ನಡೆಯನ್ನು ಖಂಡಿಸಿದ್ದಾರೆ.. 

Advertisement

'ಈ ಪ್ರಸ್ತಾವಕ್ಕೆ ನನ್ನ ಸಂಪೂರ್ಣ ವಿರೋಧವಿದ್ದು, ನನ್ನ ಆಕ್ಷೇಪವಿದೆ. ಪಾಲಿಕೆಯು ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿದುಕೊಂಡು, ಕೇವಲ ಮುಸ್ಲಿಂ ಹೆಸರುಗಳ ನಾಮಕರಣ ಪ್ರಕ್ರಿಯೆಯನ್ನು ಹಿಂಪಡೆಯಬೇಕು' ಎಂದು   ತೇಜಸ್ವಿಯವರು ಆಗ್ರಹಿಸಿದ್ದಾರೆ ಎಂದು ಟ್ವಿಟರ್ ಮೂಲಕ ತಿಳಿದಿದ್ದು, ಈ ಮೇಲಿನ ಎಲ್ಲಾ ಮಾಹಿತಿ ನಮಗೆ ಮಾಧ್ಯಮ ಮೂಲಕ ತಿಳಿದುಬಂದಿದೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು..