ಇನ್ನೂ ನಿಮ್ಮ ಮೊಬೈಲ್ ನಲ್ಲಿ ಟಿಕ್ ಟಾಕ್ ಅಪ್ಲಿಕೇಷನ್ ಇದ್ದರೆ ಈಗಲೇ ಡಿಲೀಟ್ ಮಾಡಿ..! ಚೀನಾದವರು ಎಂಥ ಕೆಲಸ ಮಾಡಲು ಮುಂದಾಗಿದ್ದಾರೆ ನೋಡಿ..!

Updated: Tuesday, June 30, 2020, 11:11 [IST]

ಹೌದು ಕೆಲವು ದಿನಗಳ ಹಿಂದಷ್ಟೇ ಭಾರತದ ಮೇಲೆ ಚೀನಾ ಮಾಡಿದ ದಾಳಿಯಿಂದ ಇಪ್ಪತ್ತು ಮಂದಿ ಸಾವನ್ನಪ್ಪಿದ್ದರು, ಚೀನಾ ದೇಶದ 40 ಜನರನ್ನ ನಮ್ಮ ಭಾರತೀಯ ಸೇನೆ ಅವರನ್ನ ಹೊಡೆದು ಹಾಕಿ ಮರಣ ಹೊಂದುವ ಹಾಗೆ ಮಾಡಿದರು, ತದನಂತರ ನಮ್ಮ ಇಂಡಿಯಾ ದೇಶದ ಮೇಲೆ ಗಲಾಟೆ ಮಾಡಿದ ಚೀನಾದವರ ವಿರುದ್ಧ ನಮ್ಮ ಭಾರತೀಯರು ಹೊಸದೊಂದು ಅಭಿಯಾನ ಶುರು ಮಾಡಿದರು.ನಮಗೆ ಸ್ವಾಭಿಮಾನ ಅನ್ನುವದು ಇದ್ದರೆ ನಾವು ಈ ಕೂಡಲೇ ಟಿಕ್ ಟಾಕ್ ಅನ್ನು ಡಿಲೀಟ್ ಮಾಡೋಣ . ಇದರಿಂದ ನಾವು ಚೀನಾ ದೇಶಕ್ಕೆ ಒಳ್ಳೆಯ ಪಾಠ ಕಲಿಸಿದ ಹಾಗೆ ಆಗುತ್ತೆ    

ಅದು ನಮಗೂ ನಿಮಗೂ ಗೊತ್ತಿರುವ ಹಾಗೆ, ಚೀನಾದ ವಸ್ತುಗಳನ್ನು ಮತ್ತು ಚೀನಾ ಅಪ್ಲಿಕೇಷನ್ ಗಳನ್ನ, ಉಪಯೋಗ ಮಾಡದೆ ಅವರಿಗೆ ಬುದ್ಧಿ ಕಲಿಸೋಣ, ಎಂದು ಎಲ್ಲರೂ ಕೈ ಜೋಡಿಸಿದರು, ಹಾಗಾಗಿ ನಿನ್ನೆ ಅಷ್ಟೇ ಸರಕಾರ ಕೂಡ ಇದಕ್ಕೆ ಕೈ ಜೋಡಿಸಿ, ಟಿಕ್ ಟಾಕ್ ಸೇರಿ ಒಟ್ಟು 50 ಕ್ಕಿಂತ ಹೆಚ್ಚು ಚೀನಾ ಅಪ್ಲಿಕೇಷನ್ ಗಳನ್ನ ಬ್ಯಾನ್ ಮಾಡಲು ಹೇಳಿದ್ದಾರೆ.ಇದರ ನಡುವೆ ಇನ್ನೂ ಕೆಲವರು ತಮ್ಮ ತಮ್ಮ ಮೊಬೈಲ್ ಗಳಲ್ಲಿ ಟಿಕ್ ಟಾಕ್ ಅಪ್ಲಿಕೇಷನ್ ಅನ್ನು    

ಉಪಯೋಗ ಮಾಡುತ್ತಿದ್ದಾರೆ. ಹಾಗಾಗಿ ಟಿಕ್ ಟಾಕ್ ಬ್ಯಾನ್ ಆಗಿದ್ದರು, ಇನ್ನು ನಿಮ್ಮ ಮೊಬೈಲ್ ನಲ್ಲಿ ಆ ಅಪ್ಲಿಕೇಷನ್ ಹಾಗೆ ಇದ್ದರೆ ಈಗಲೇ ಡಿಲೀಟ್ ಮಾಡಿ, ಇಲ್ಲದೆ ಇದ್ದಲ್ಲಿ ಚೀನಾದವರು ಇದರಿಂದ ಬರುತ್ತಿದ್ದ ಲಾಭವನ್ನು ನಿಲ್ಲಿಸಿದ ಭಾರತೀಯರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಮೊಬೈಲ್ ಹ್ಯಾಕ್ ಮಾಡಿ ಟಿಕ್ ಟಾಕ್ ಅಪ್ಲಿಕೇಷನ್ ಇನ್ನೂ ಇರುವ ಮೊಬೈಲ್ ಅನ್ನೆ ಟಾರ್ಗೆಟ್ ಮಾಡಿ ಅವರಿಂದ ಡೇಟ ಮತ್ತು ಮೊಬೈಲ್ ನಲ್ಲಿರುವ ಬ್ಯಾಂಕ್ ಖಾತೆಗಳ ವಿವರನ್ನು ಕೂಡ ಹ್ಯಾಕ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಈಗಲೇ ನಿಮ್ಮ ಮೊಬೈಲ್ ತೆಗೆದುಕೊಂಡು ಆ ಅಪ್ಲಿಕೇಷನ್ ಅನ್ನ ಡಿಲೀಟ್ ಮಾಡಿ, ಆದಷ್ಟು ಈ ಮಾಹಿತಿಯನ್ನ ಎಲ್ಲರೂ ಶೇರ್ ಮಾಡಿ ದೇಶದ ಈ ಕೆಲಸಕ್ಕೆ ಕೈ ಜೋಡಿಸಿ..