ಬ್ರೇಕಿಂಗ್ ನ್ಯೂಸ್ :ಇನ್ನಾದರೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಇಲ್ಲದಿದ್ದರೆ ನಿಮ್ಮ ಡಿಲ್ ಅಮಾನತುಗೊಳಿಸಲಾಗುತ್ತೆ

Updated: Tuesday, October 20, 2020, 12:21 [IST]

ಹೆಲ್ಮೆಟ್ಧ ಧರಿಸದೇ  ವಾಹನ ಚಲಾಯಿಸುವರ ಸಂಖ್ಯೆ ಹೆಚ್ಚಾಗಿ ಅಪಘಾತಗಳು ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಹೊಸ ಕಾನೂನು ಜಾರಿಗೊಳ್ಳಿಸಿದೆ . ಇದರ ಪ್ರಕಾರ ನೀವು ಹೆಲ್ಮೆಟ್ ಧರಿಸದೇ ವಾಹನ ಓಡಿಸಿದರೆ ನಿಮ್ಮ ಡಿಲ್ ಅನ್ನು ಅಮಾನತುಗೊಳಿಸುತ್ತಾರೆ. ಮತ್ತು ದಂಡವನ್ನು ಸಹ  ಕಟ್ಟ ಬೇಕಾಗುತ್ತೆ

ಆದರೂ ರಾಜ್ಯದಲ್ಲಿ ಅನೇಕ ಬೈಕ್ ಸವಾರರು ವಾಹನ ಚಲಾವಣೆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುತ್ತಿಲ್ಲ. ಹೀಗಾಗಿ ಇಂತಹ ರಸ್ತೆ ಕಾನೂನು ಉಲ್ಲಂಘನೆಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸಂಚಾರಿ ಇಲಾಖೆ ಇನ್ನೂ ರಸ್ತೆಯಲ್ಲಿ ವಾಹನ ಚಲಾಯಿಸುವಾದ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಇದ್ದಲ್ಲಿ ಅವರ ಡಿಎಲ್ (ವಾಹನ ಚಾಲನಾ ಪರವಾನಗಿ) ಮೂರು ತಿಂಗಳ ಕಾಲ ಅಮಾನತುಗಳಿಸುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.    

Advertisement

ಮೋಟಾರು ವಾಹನ ಕಾಯ್ದೆ 2019ರ ಅನ್ವಯ ಹೆಲ್ಮೆಟ್ ರಹಿತ ವಾಹನ ಚಲಾವಣೆಗೆ 1000 ರೂ.ದಂಡ ಮತ್ತು ಮೂರು ತಿಂಗಳುಗಳ ಕಾಲ ಅವರ ಡಿಎಲ್ ಅನ್ನು ಅಮಾನತುಗೊಳಿಸಬಹುದು. ಆದರೆ, ರಾಜ್ಯದಲ್ಲಿ ದಂಡವನ್ನು 500ಕ್ಕೆ ಇಳಿಸಲಾಗಿತ್ತಾದರೂ ಡಿಎಲ್ ಅಮಾನತುಗೊಳಿಸಲು ಇಲಾಖೆ ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ, ಇದೀಗ ಹೆಲ್ಮೆಟ್ ರಹಿತ ವಾಹನ ಚಲಾವಣೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಮುಂದಾಗಿದೆ ಎನ್ನಲಾಗುತ್ತಿದೆ.      

Advertisement

ಆದುದರಿಂದ ನಿಮ್ಮ ಸುರಕ್ಷೆ ಗಾಗಿ ಮತ್ತು ನಿಮ್ಮ ಡಿಲ್ ಅನ್ನು ಅಮಾನತುಗೊಳಿಸದಂತೆ ಮಾಡಲು ನೀವು ಮರೆಯದೆ ಹೆಲ್ಮೆಟ್ ಅನ್ನು ಧರಿಸಿ ವಾಹನ ಚಲಾಯಿಸಿ . ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”