ಸೋಲು ಗೊತ್ತಾಗುತ್ತಿದ್ದಂತೆ ಕುಸುಮಾ ಅವರು ಮಾಡಿರುವ ಕೆಲಸ ನೋಡಿ..

Updated: Wednesday, November 11, 2020, 11:45 [IST]

ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ತೀವ್ರ ನಿರಾಸೆಯಾಗಿದೆ.. ಅದರಲ್ಲೂ ಮತಗಳ ಅಂತರ 50 ಸಾವಿರದ ಗಡಿ ದಾಟಿದ್ದು ಮುಖಂಡರಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ.. ಆದರೆ ತನ್ನ ಸೋಲು ತಿಳಿಯುತ್ತಿದ್ದಂತೆ ಕುಸುಮಾ ಅವರು ಮಾಡಿರುವ ಕೆಲಸ ಮೆಚ್ಚುವಂತದ್ದು.. ಹೌದು ಸೋತರೆ ಹೊರಗಿನ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಸುಮ್ಮನಾಗುವ ಅದೆಷ್ಟೋ ಅಭ್ಯರ್ಥಿಗಳನ್ನು‌ ನೋಡಿರುತ್ತೇವೆ.. ಆದರೆ ಕುಸುಮಾ ಅವರು ತಮ್ಮ ಸೋಲು‌ ತಿಳಿಯುತ್ತಿದ್ದಂತೆ ಖುದ್ದು ಅವರೇ ಮುಖಂಡರು ಹಾಗೂ ಸ್ಥಳೀಯ ಕಾರ್ಯಕರ್ತರಿಗೆ ಫೋನ್ ಮಾಡಿ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ..‌ ಮುಂದೆಯೂ ಆರ್ ಆರ್ ನಗರದಲ್ಲಿ ಜನರ ಸೇವೆ ಮಾಡುವುದಾಗಿ ತಿಳಿಸಿದ್ದಾರೆ.. 

ದೀಪಾವಳಿ ಧಮಾಕ ಆಫರ್ : ರಿಯಲ್ ಮೀ ಇಯರ್ 3 ವೈರ್ ಲೆಸ್ ಫೋನ್ ಕಾಂಬೋ ಆಫರ್ 2500 /-  ​

 

Advertisement

ಹೌದು.. “ಚುನಾವಣೆಯಲ್ಲಿ ನೀವೆಲ್ಲರು ಕೊಟ್ಟಿರುವ ಈ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇನೆ.. ಕಾಂಗ್ರೆಸ್ ಪಕ್ಷವನ್ನು ಆ ಮೂಲಕ ನನ್ನನ್ನು ಬೆಂಬಲಿಸಿದ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.. ಮತಯಾಚನೆಗಾಗಿ ಮನೆ ಬಾಗಿಲಿಗೆ ಬಂದಾಗ ಮನೆ ಮಗಳಂತೆ ಬರಮಾಡಿಕೊಂಡು ಕುಂಕುಮ ಇಟ್ಟು.. ಹೂ ಮುಡಿಸಿ.. ಉಡಿ ತುಂಬಿ.. ನೀವು ತೋರಿದ ಪ್ರೀತಿಗೆ ಋಣಿ.. ನಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರ ಎಂದೆಂದಿಗೂ ನನ್ನ ಕರ್ಮಭೂಮಿ.. ಎಂದಿನಂತೆ ನಿಮ್ಮೊಂದಿಗಿದ್ದು ನನ್ನ ಸಮಾಜ ಸೇವಾ ಕಾರ್ಯಗಳನ್ನು ಮುಂದುವರೆಸುವ ಮೂಲಕ ನೊಂದವರ ಧನಿಯಾಗುತ್ತೇನೆ..  

ಹೆಣ್ಣು ಮಕ್ಕಳು ಮಹಿಳೆಯರ ಬಲವರ್ಧನೆಗಾಗಿ ಸದಾ ಬದ್ಧವಾಗಿರುವ ನಮ್ಮ ಕಾಂಗ್ರೆಸ್ ಪಕ್ಷದ ಆಶಯದಂತೆ ರಾಜಕೀಯಕ್ಕೆ ಹೊಸಬಳಾದ ನನ್ನನ್ನು ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟ ನಮ್ಮ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮತ್ತು ಕಾರ್ಯಧ್ಯಕ್ಷರಾದ ಸಲೀಂ ಅಹಮದ್ ಅವರು ಹಾಗೂ ಇತರ ಎಲ್ಲಾ ಪದಾಧಿಕಾರಿಗಳಿಗೂ ಋಣಿ..  

Advertisement

ಚುನಾವಣೆಯೂ ಸೇರಿದಂತೆ ಎಲ್ಲಾ ಸಂದರ್ಭದಲ್ಲಿಯೂ ನನಗೆ ಒತ್ತಾಸೆಯಾಗಿ ನಿಂತ ಜನಪ್ರಿಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದರಾದ ಡಿ ಕೆ ಸುರೇಶ್ ಅವರು ಮಾಜಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹಾಗೂ ಎಲ್ಲಾ ನಾಯಕರುಗಳಿಗೂ ಕೃತಜ್ಞಳಾಗಿದ್ದೇನೆ.. ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ..