ಬ್ರೇಕಿಂಗ್ ನ್ಯೂಸ್ : ಪಾರ್ವತಮ್ಮ ರಾಜ್ಕುಮಾರ್ ತಮ್ಮನ ಪುತ್ರ ಸೂರಜ್ ಗೆ ಗಂಭೀರ ಗಾಯ ;ಭೀಕರ ರಸ್ತೆ ಅಪಘಾತ.ಏನಾಗಿದೆ ನೋಡಿ

ಪಾರ್ವತಮ್ಮ ತಮ್ಮನ ಮಗನಿಗೆ ಅಪಘಾತ. ಗಾಂಧೀನಗರಕ್ಕೆ ಎಂಟ್ರಿ ಕೊಡೋಕೆ ಸಜ್ಜಾಗಿದ್ದ ನಟ. ನಟನಾಗೋ ಕನಸು ಕಂಡಿದ್ದ ಸೂರಜ್. ಕಾಲು ತೆಗೆದು ಐಸಿಯುನಲ್ಲಿ ಚಿಕಿತ್ಸೆ ನೀಡ್ತಿರೋ ವೈದ್ಯರು. ನಿನ್ನೆ ಸಂಜೆ ನಂಜನಗೂಡಿನಲ್ಲಿನಡೆದ ಘಟನೆ. ಘಟನೆ ಬಗ್ಗೆ ಪಾರ್ವತಮ್ಮ ಅವರಮತ್ತೊಬ್ಬ ಸಹೋದರ ಚಿನ್ನೇಗೌಡ್ರು ಟಿವಿ9ಗೆ ಮಾಹಿತಿ ನೀಡಿರೋದು.
ದಿವಂಗತ ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಮಗ, ಯುವ ನಟ ಸೂರಜ್ಗೆ ಅಪಘಾತವಾಗಿದೆ. ದುರ್ಘಟನೆಯಲ್ಲಿ ಸೂರಜ್ ಬಲಗಾಲಿಗೆ ಗಂಭೀರ ಪೆಟ್ಟು ಬಿದ್ದಿದೆ.
ಊಟಿಗೆ ಹೋಗುತ್ತಿದ್ದಾಗ ಮೈಸೂರಿನ ನಂಜನಗೂಡು ರಸ್ತೆಯಲ್ಲಿ ದುರ್ಘಟನೆ ಸಂಭವಿಸಿದೆ. ಬೈಕ್ನಲ್ಲಿ ಹೋಗ್ತಿದ್ದಾಗ ಟಿಪ್ಪರ್ ಹರಿದು ಅನಾಹುತ ಸಂಭವಿಸಿದೆ. ಸೂರಜ್ ಬಲಗಾಲಿಗೆ ಗಂಭೀರವಾಗಿ ಗಾಯವಾದ ಹಿನ್ನೆಲೆಯಲ್ಲಿ ಮಂಡಿಯವರೆಗೆ ಕಾಲನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ ಎನ್ನಲಾಗಿದೆ.
ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರಜ್ ನೋಡಲು ಶಿವರಾಜ್ ಕುಮಾರ್, ನಿರ್ಮಾಪಕ ಚಿನ್ನೇಗೌಡ ಮೈಸೂರಿಗೆ ಆಗಮಿಸಿದ್ದಾರೆ. ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರದಲ್ಲಿ ಸೂರಜ್ ನಟಿಸಿದ್ದರು.