ಕೇವಲ ₹30 ಸಾವಿರಕ್ಕೆ ಆಪಲ್ ಐಫೋನ್‌- 14 ಖರೀದಿಸುವ ಅವಕಾಶ; ಎಲ್ಲಿ ಮತ್ತು ಹೇಗೆ ನೋಡಿ ?

ಕೇವಲ ₹30 ಸಾವಿರಕ್ಕೆ ಆಪಲ್ ಐಫೋನ್‌- 14 ಖರೀದಿಸುವ ಅವಕಾಶ; ಎಲ್ಲಿ ಮತ್ತು ಹೇಗೆ ನೋಡಿ ?

iPhone 14 ನ ಮೂಲ ಬೆಲೆ 79,900 ಆಗಿದೆ ಆದರೆ ಕೇವಲ ₹30 ಸಾವಿರಕ್ಕೆ ಐಫೋನ್‌- 14  ಹೇಗೆ ಸಿಗುತ್ತೆ ಅಂತ ಆಶ್ಚರ್ಯ ಪಡುತ್ತೀದ್ದಾರಾ . ಇಲ್ಲಿದೆ ನೋಡಿ iPhone 14  ಇಷ್ಟು ಕಡಿಮೆ ಬೆಲೆಗೆ ಹೇಗೆ  ಪಡೆಯುವುದು ಅಂತ . ಫ್ಲಿಪ್‌ಕಾರ್ಟ್‌ ಭರ್ಜರಿ ಆಫರ್‌ ಬಿಟ್ಟಿದ್ದು, ಅತಿ ಕಡಿಮೆ ಬೆಲೆಗೆ ಐಫೋನ್‌-14 (Apple iPhone 14) ಖರೀದಿಸುವ ಅವಕಾಶ ತೆರೆದಿದೆ. ನೀವು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಿಂದ ಕೇವಲ ₹30,000ಕ್ಕೆ ಐಫೋನ್‌-14 ಖರೀದಿಸಬಹುದು. ಆದರೆ, ಈ ಡೀಲ್‌ ಅನ್ನು ಪಡೆಯಲು, ನೀವು ಕೆಲವು ಹಂತಗಳನ್ನು ಅನುಸರಿಸಬೇಕು. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

iPhone 14 ನ ಮೂಲ ಬೆಲೆ 79,900 ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ ಕಡಿಮೆಯಾಗಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ನಲ್ಲಿ, 128GB ಮಾದರಿಯ iPhone 14 ಕೇವಲ 68,999 ರೂಗಳಿಗೆ ಲಭ್ಯವಿದೆ. ಅದೇ ಸಮಯದಲ್ಲಿ, ಅದನ್ನು ಇನ್ನೂ ಅಗ್ಗದ ಬೆಲೆಗೆ ಖರೀದಿಸಲು, ನೀವು HDFC ಬ್ಯಾಂಕ್‌ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಅನ್ನು ಬಳಸಬಹುದು. HDFC ಕ್ರೆಡಿಟ್‌/ ಡೆಬಿಟ್‌ ಕಾರ್ಡ್‌ ಮೇಲೆ 4,000 ರೂ. ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಇದೆಲ್ಲದರ ನಂತರ, iPhone 14 ಬೆಲೆ 64,999 ರೂ.ಗೆ ಇಳಿಯುತ್ತದೆ. ಇಷ್ಟೇ ಅಲ್ಲ...   

ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಚೇಂಜ್ ಆಫರ್ ನ ಲಾಭವನ್ನೂ ಪಡೆದುಕೊಳ್ಳಬಹುದು. ಎಕ್ಸ್ ಚೇಂಜ್ ನಲ್ಲಿ ಹಳೆಯ ಸ್ಮಾರ್ಟ್ ಫೋನ್ ಬೆಲೆ 35,000 ರೂ.ಗಳಷ್ಟು ಕಡಿಮೆಯಾಗಲಿದೆ. ಇದರರ್ಥ ಗ್ರಾಹಕರು ಐಫೋನ್ 14 ಅನ್ನು ರೂ 29,999 ಕ್ಕೆ ಖರೀದಿಸುವ ಅವಕಾಶವೂ ಇದೆ. ಆದರೆ, ನೀವು ಯಾವ ಫೋನ್‌ ಅನ್ನು ಎಕ್ಸ್‌ಚೇಂಜ್‌ ಮಾಡುತ್ತಿದ್ದೀರಿ ಎಂಬುದನ್ನು ಆಧರಿಸಿ ಬೆಲೆ ನಿರ್ಧಾರವಾಗುತ್ತದೆ.

ಐಫೋನ್ 14 ಅನ್ನು ಅಗ್ಗವಾಗಿ ಖರೀದಿಸುವ ಸಮಯಕ್ಕಾಗಿ ಕಾಯುತ್ತಿರುವ ಜನರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಡೀಲ್‌ ಅಲ್ಪಾವಧಿಗೆ ಮಾತ್ರ. ಈ ಆಫರ್‌ ಮುಗಿಯು ಮೊದಲು, ಕಡಿಮೆ ಬೆಲೆಗೆ ಐಫೋನ್‌ ಖರೀದಿಸಬಹುದು

ಆಪಲ್‌ ಐಫೋನ್‌ 14 ಫೀಚರ್‌ಗಳು
6.1-inch, 6.7-inch ಡಿಸ್‌ಪ್ಲೇ
A15 Bionic chip, ಉತ್ತಮ ಕಾರ್ಯಕ್ಷಮತೆಯ ಸುಧಾರಿತ five-core GPU
6GB LPDDR 4X ಮೆಮೊರಿ
12MP ƒ/1.8 ಅಲ್ಟ್ರಾ ವೈಡ್ ಕ್ಯಾಮೆರಾ
ಫಿಕ್ಸ್ಡ್ ಫೋಕಸ್‌ನೊಂದಿಗೆ 12MP ƒ/1.9 ವೈಡ್‌ ಫ್ರಂಟ್‌ ಕ್ಯಾಮೆರಾ
Wi-Fi 6E ಸಂಪರ್ಕ
5G ಚಿಪ್‌ನೊಂದಿಗೆ ದೀರ್ಘ ಬ್ಯಾಟರಿ ಬಾಳಿಕೆ
ಉಪಗ್ರಹ ಆಧಾರಿತ ಎಮರ್ಜೆನ್ಸಿ ಫೀಚರ್ಸ್‌
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಲೇಖನವನ್ನು  ತಪ್ಪದೆ  ಓದಿ  ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.