ಸ್ಫೋಟಕ ಭವಿಷ್ಯ ನುಡಿದ ನೊಣವಿನಕೆರೆ ಯಶ್ವಂತ ಗುರೂಜಿ : ಈ ಬಾರಿ ದೇಶಕ್ಕೆ ಮಹಿಳಾ ಪ್ರಧಾನಿ ಅಂತೇ ?

ಸ್ಫೋಟಕ ಭವಿಷ್ಯ ನುಡಿದ ನೊಣವಿನಕೆರೆ ಯಶ್ವಂತ ಗುರೂಜಿ : ಈ ಬಾರಿ ದೇಶಕ್ಕೆ ಮಹಿಳಾ ಪ್ರಧಾನಿ ಅಂತೇ ?

ಈ ಬಾರಿಯ ಲೋಕಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಮಾತ್ರ ಉಳಿದಿದೆ .  ಈಗ ಎಲ್ಲರಲ್ಲೂ ಕಾಡುತ್ತಿರುವ ಕುತೂಹಲ ಏನಂದ್ರೆ ಮೋದಿಯವರು ಮತ್ತೆ ಪ್ರಧಾನಿ ಆಗುತ್ತಾರೆ ಎಂದು .ಕೆಲವರು ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ  ಎನ್ನುವದರಲ್ಲಿ ಯಾವುದೇ ಸಂದೇಹ ಇಲ್ಲ ಅನ್ನುತ್ತಾರೆ ಆದರೆ ಈಗ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಲಿದ್ದು ದೇಶಕ್ಕೆ  ಮಹಿಳಾ  ಪ್ರಧಾನಿ ಸಿಗಲಿದ್ದಾರೆ. ಬಳಿಕ ಅವರು ಪುರುಷರಿಗೆ ಬಿಟ್ಟುಕೊಡಲಿದ್ದಾರೆ ಎಂದು ಯಶ್ವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕ ಗಾಂಧಿ (Priyanka Gandhi) ದೇಶದ ಗದ್ದುಗೆ ಏರಲಿದ್ದಾರೆ ಎಂದು ಯಶ್ವಂತ ಗುರೂಜಿ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ 135 ಸೀಟು ಪಡೆಯಲಿದೆ ಎಂದು‌ ಈ ಹಿಂದೆ ಯಶ್ವಂತ ಗುರೂಜಿ ನಿಖರ ಭವಿಷ್ಯ ನುಡಿದಿದ್ದರು. ಅಲ್ಲದೆ ಕೊರೊನಾ ಮಹಾಮಾರಿ ಬರುವ ಬಗ್ಗೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದರು ಅದು ಈಗ ನಿಜವಾಗಿದೆ .   
ಕಾಲಜ್ಞಾನದ ಪ್ರಕಾರ ಪ್ರಧಾನಿಯಾಗೋ ಯೋಗ ಹೊಂದಿರೋದು ಪ್ರಿಯಾಂಕ ಗಾಂಧಿ ಅವರು. ಬಳಿಕ ರಾಹುಲ್ ಗಾಂಧಿಗೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಶಿವರಾತ್ರಿಗೂ ಮುನ್ನ ಚುನಾವಣೆ ನಡೆದಿದ್ದರೇ ಮೋದಿ ಅವರಿಗೆ ಪ್ರಧಾನಿಯಾಗೋ ಯೋಗವಿತ್ತು. ಆದರೇ ಈಗ ಮೋದಿ ಅವರಿಗೆ ಆ ಯೋಗ ಇಲ್ಲ. ಅವರಿಗೆ ಅನಾರೋಗ್ಯ ಕಾಡಬಹುದು. ಸದ್ಯ ಪ್ರಿಯಾಂಕ ಗಾಂಧಿಗೆ ಹಂಸಕ, ಚಂದ್ರಮಂಗಳ, ಬುಧಾಧಿತ್ಯ ಯೋಗ ಶುರುವಾಗಿದೆ. ಈ ಯೋಗದಿಂದಲೇ ಪ್ರಧಾನಿ ಪಟ್ಟ ಸಿಗೋ ಅವಕಾಶ ಒದಗಿಬರಲಿದೆ.  ಇದು ಎಷ್ಟು ನಿಜವಾಗುತ್ತೆ ಎಂದು ನಾವು ಕಾದು ನೋಡಬೇಕಾಗಿದೆ .

( video credit :Zee kannada news )