ಶಾಲೆಗೆ ಹೋಗುವಾಗ ಕಿರಿಯ ಬಾಲಕಿಗೆ ಲೈಂ *ಗಿ ಕ ದೌರ್ಜನ್ಯ ಮಾಡಿದ ಯುವಕನಿಗೆ ಬೆಲ್ಟ್‌ನಲ್ಲಿ ಬಾರಿಸಿದ ಡೇರ್‌ಡೆವಿಲ್‌ ಅಕ್ಕ-ತಂಗಿ! ವಿಡಿಯೋ ವೈರಲ್

ಶಾಲೆಗೆ ಹೋಗುವಾಗ ಕಿರಿಯ ಬಾಲಕಿಗೆ  ಲೈಂ   *ಗಿ ಕ ದೌರ್ಜನ್ಯ ಮಾಡಿದ ಯುವಕನಿಗೆ ಬೆಲ್ಟ್‌ನಲ್ಲಿ ಬಾರಿಸಿದ ಡೇರ್‌ಡೆವಿಲ್‌ ಅಕ್ಕ-ತಂಗಿ! ವಿಡಿಯೋ ವೈರಲ್

ಈಗಿನ ಕಾಲದಲ್ಲಿ ಯುವತಿಯರಿಗೆ ಚುಡಾಯಿಸುವುದು ಮತ್ತು ಅವರ ಜೊತೆ ಅಸಭ್ಯವಾಗಿ ನಡೆದು ಕೊಳ್ಳುವುದು ಕೆಲವು ಕೆಟ್ಟ ಯುವಕರ ಚಾಳಿಯಾಗಿದೆ . ಯುವತಿಯರು ತಮಗೆ ಎಂದು ವಿರೋಧ ತೋರಿಸುವುದಿಲ್ಲ ಅಂದು ಕೊಂಡಿದ್ದ ಯುವಕನಿಗೆ ಈ ಅಕ್ಕ-ತಂಗಿ ಯಾರು ಸರಿಯಾಗೇ ಬುದ್ದಿ ಕಲಿಸಿದ್ದಾರೆ . ಈ ಘಟನೆ ಏನೆಂದು ನೋಡಣ ಬನ್ನಿ 

ಆರೋಪಿಯು ಶಾಲೆಗೆ ಹೋಗುವಾಗ ಕಿರಿಯ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಮಾಹಿತಿ ಸಿಕ್ಕಿತ್ತು. ಅದರ ಬೆನ್ನಲ್ಲಿಯೇ ಸಿಟ್ಟಿಗೆದ್ದಆಕೆ ತನ್ನ ಅಕ್ಕನ ಜೊತೆ ಸೇರಿಕೊಂಡು ನಡುರಸ್ತೆಯಲ್ಲಿಯೇ ಆತನನ್ನು ನೆಲಕ್ಕೆ ಉರುಳಿಸಿ, ತಾವೇ  ಧರಿಸಿದ್ದ ಬೆಲ್ಟ್‌ಅನ್ನು ಬಿಚ್ಚಿ ಬಾರಿಸಿದ್ದಾರೆ. ಈ ವೇಳೆ ಇಬ್ಬರು ಸಹೋದರಿಯರಿಗೆ ಶಾಲೆಯ ಇತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೂಡ ಕೈಜೋಡಿಸಿದ್ದಾರೆ. ಆ ಮೂಲಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಮನಸೋಇಚ್ಛೆ ಥಳಿಸಿದ್ದಾರೆ. ಆತ ನೋವಿನಿಂದ ನರುಳುತ್ತಿರುವುದು ಹಾಗೂ ಅವಮಾನದಿಂದ ಮುಖಮುಚ್ಚಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲಿಯೇ ಇದು ವೈರಲ್‌ ಆಗಿದೆ    

17 ವರ್ಷದ ಶಾಲಾ ಬಾಲಕಿ, ಶಾಲೆಗೆ ಸೈಕಲ್‌ನಲ್ಲಿ ಹೋಗುತ್ತಿರುವಾಗ, ಆರೋಪಿಯಾಗಿರುವ ವಿಜಯ್‌ ಸರ್ಕಾಟೆ ಎದುರಾಗಿದ್ದಾನೆ. ಗುರುವಾರ ಬೆಳಗ್ಗೆ 6.45ರ ಸುಮಾರಿಗೆ ಬಾಲಕಿಗೆ ಎದುರಾದ ವಿಜಯ್‌ ಸರ್ಕಾಟೆ, ಒತ್ತಾಯಪೂರ್ವಕವಾಗಿ ಆಕೆಯ ಕೈ ಹಿಡಿದಿದ್ದ. ಅದಲ್ಲದೆ, ಆಕೆಗೆ ಗಿಫ್ಟ್‌ ನೀಡುವ ಪ್ರಯತ್ನವನ್ನೂ ಮಾಡಿದ್ದ. ಇದಕ್ಕೆ ಆಕೆ ನಿರಾಕರಿಸಿದಾಗ, ಗಿಫ್ಟ್‌ಅನ್ನು ಆಕೆಯ ಶಾಲೆಯ ಬ್ಯಾಗ್‌ನಲ್ಲಿ ಇರಿಸಿದ್ದಲ್ಲದೆ, ಕಿಸ್‌ ನೀಡಿ, ದೌರ್ಜನ್ಯ ಎಸಗಿವ ಪ್ರಯತ್ನವನ್ನೂ ಮಾಡಿದ್ದ

ವಿಜಯ್‌ ಸರ್ಕಾಟೆ ಎಂದಿನಂತೆ ಶುಕ್ರವಾರವೂ ಬಾಲಕಿಯ ದಾರಿಗೆ ಅಡ್ಡ ಬಂದಿದ್ದಾನೆ. ಆಕೆಯ ಕೈ ಹಿಡಿದು ಎಳೆದಾಡಿದ್ದಾನೆ. ಈ ವೇಳೆ ಪಕ್ಕದಲ್ಲಿಯೇ ನಿಂತು ಇದೆಲ್ಲವನ್ನು ನೋಡುತ್ತಿದ್ದ ಅಕ್ಕ ಮಧ್ಯಪ್ರವೇಶಿಸಿದ್ದಾಳೆ. ಆತನನ್ನು ಹಿಡಿದ ಆಕೆ ನೆಲಕ್ಕೆ ದೂಡಿದ್ದಾಳೆ. ಅದರ ಬೆನ್ನಿಗೆ 17 ವರ್ಷದ ಶಾಲಾ ಬಾಲಕಿ ತನ್ನ ಬೆಲ್ಟ್‌ ಬಿಚ್ಚಿ ಆತನಿಗೆ ಬಾರಿಸಲು ಆರಂಭಿಸಿದ್ದಾರೆ. ಅವರ ಶಾಲೆಯ ಇತರ ವಿದ್ಯಾರ್ಥಿಗಳು ಮತ್ತು ದಾರಿಹೋಕರು ಸೇರಿಕೊಂಡು ಆತನನ್ನು ಥಳಿಸಿದ್ದಾರೆ..