ಸಾಯುವ ಮುನ್ನ ಕ್ರೇಜಿಸ್ಟಾರ್ ಗೆ ಸಿಲ್ಕ್ ಸ್ಮಿತಾ ಕರೆ ಮಾಡಿದ್ದೇಕೆ ಗೊತ್ತಾ..?

ಸಾಯುವ ಮುನ್ನ ಕ್ರೇಜಿಸ್ಟಾರ್ ಗೆ ಸಿಲ್ಕ್ ಸ್ಮಿತಾ ಕರೆ ಮಾಡಿದ್ದೇಕೆ ಗೊತ್ತಾ..?

ಸಿಲ್ಕ್ ಸ್ಮಿತಾ ಎಂದರೆ ಈಗಲೂ ಹಲವರು ಹುಡುಗರ ಮೈ ಜುಮ್ ಅನ್ನುತ್ತೆ. ಏಕೆಂದರೆ ಅವರ ನಟನೆಯೇ ಹಾಗೆ ಪಡ್ಡೆ ಹುಡುಗರ ನಿದ್ದೆಯನ್ನು ಕಸಿದುಕೊಳ್ಳುವಂತಿತ್ತು. ಕನ್ನಡ, ತೆಲುಗು, ತಮಿಳು, ಮಳಯಾಳಂ ಚಿತ್ರಗಳಲ್ಲಿ ನಟಿಸಿದ್ದ ಸಿಲ್ಕ್ ಸ್ಮಿತಾ ಅವರ ಬದುಕು ತುಂಬೆಲ್ಲಾ ಮುಳ್ಳಿನ ಹಾದಿಯೇ ಇತ್ತು. ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದರು. 35 ವರ್ಷ ವಯಸ್ಸಿನಲ್ಲಿಯೇ ಸಿಲ್ಕ್ ಸ್ಮಿತಾ ಅವರು ಉಸಿರು ಚೆಲ್ಲಬೇಕಾಯ್ತು. ಆದರೆ, ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾದ ಸಿಲ್ಕ್ ಸ್ಮಿತಾ ಅವರ ಸಾಯುವ ಮುನ್ನ ಕ್ರೇಜಿಸ್ಟಾರ್ ಗೆ ಕರೆ ಮಾಡಲು ಕಾರಣ ಯಾರು ಗೊತ್ತಾ..?

ಡಿಸೆಂಬರ್ 2, 1960 ರಂದು ಸಿಲ್ಕ್ ಸ್ಮಿತಾ ಅವರು ಆಂಧ್ರಪ್ರದೇಶದಲ್ಲಿ ಜನಿಸಿದರು. ಆದರೆ ಇವರ ಹೆಸರು ವಿಜಯಲಕ್ಷ್ಮಿ ವಡ್ಲಪಟ್ಲ. ಮನೆಯಲ್ಲಿ ಕಷ್ಟ ಇದ್ದಿದ್ದರಿಂದ 10ನೇ ತರಗತಿಗೆ ಓದು ನಿಲ್ಲಿಸಿದ್ದರು. ಇನ್ನು ಆಗಲೇ ಇವರ ಹಿಂದೆ ಪಡ್ಡೆ ಹುಡುಗರು ಓಡಾಡುತ್ತಿದ್ದರಂತೆ. ಅಷ್ಟು ಸುಂದರವಾಗಿದ್ದರಂತೆ ಸಿಲ್ಕ್ ಸ್ಮಿತಾ. ಹೀಗಾಗಿ ಅವರ ಮನೆಯಲ್ಲಿ ಕೇವಲ 16 ವರ್ಷಕ್ಕೆ ಮದುವೆ ಮಾಡಲಾಯ್ತು. ಸಿನಿಮಾ ಹುಚ್ಚಿದ್ದ ಸಿಲ್ಕ್ ಸ್ಮಿತಾ ಅವರು ಅತ್ತೆ ಮನೆಯಲ್ಲಿ ಸದಾ ರೇಡಿಯೋದಲ್ಲಿ ಚಿತ್ರಗಳ ಹಾಡುಗಳನ್ನು ಕೇಳುತ್ತಿದ್ದರಂತೆ. ಇದರಿಂದ ಅತ್ತೆಯ ಮನೆಯವರು ಸಹಿಸಿಕೊಳ್ಳುತ್ತಿರಲಿಲ್ಲ. 


ಹೀಗಾಗಿ ಸಿಲ್ಕ್ ಸ್ಮಿತಾ ಅವರ ಗಂಡ ನಿತ್ಯ ರಾತ್ರಿ ಮನೆಗೆ ಬಂದು ಹೊಡೆಯುತ್ತಿದ್ದರಂತೆ. ಜೊತೆಗೆ ದೈಹಿಕವಾಗಿ ಹಿಂಸೆ ಕೊಡುತ್ತಿದ್ದರಂತೆ. ಅವರ ಗಂಡನಿಗೆ ಆಕೆಯ ಅಂದವೇ ಅನುಮಾನಿಸಲು ಎಡೆ ಮಾಡಿಕೊಟ್ಟಿತ್ತಂತೆ. ಹೀಗಾಗಿ ಒಂದು ದಿನ ಸಿಲ್ಕ್ ಸ್ಮಿತಾ ಅವರು ಆಂಧ್ರಪ್ರದೇಶದಿಂದ ರಾತ್ರೋರಾತ್ರಿ ಚೆನ್ನೈಗೆ ಓಡಿ ಬಂದರಂತೆ. ಅಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಹುಡುಕಾಡುತ್ತಿದ್ದರಂತೆ. ಒಮ್ಮೆ ಆಕೆಗೆ ಮೇಕಪ್ ಮಾಡುವ ಕೆಲಸ ಸಿಕ್ಕಿತಂತೆ. ನಟ-ನಟಿಯರಿಗೆ ಮೇಕಪ್ ಮಾಡುತ್ತಿದ್ದ ಸಿಲ್ಕ್ ಸ್ಮಿತಾ ರಾತ್ರಿ ಪೂರ ಒಬ್ಬೊಬ್ಬ ಡೈರೆಕ್ಟರ್, ಪ್ರೊಡ್ಯೂಸರ್ ಗಳ ಜೊತೆ ಮಂಚ ಹಂಚಿಕೊಳ್ಳಬೇಕಿತಂತೆ. 

ನಟಿಸುವ ಅವಕಾಶಕ್ಕಾಗಿ ನಿತ್ಯ ಮಂಚ ಹಂಚಿಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾ ಅವರಿಗೆ 1979 ರ ತಮಿಳು ಸಿನಿಮಾ ವಂಡಿಚಕ್ಕರಂನಲ್ಲಿ ಸರಾಯಿ ಸಪ್ಲೈ ಮಾಡುವ ಕೆಲಸ ಸಿಕ್ಕಿತಂತೆ. ಇದರಲ್ಲಿ  ಸಿಲ್ಕ್ ಸ್ಮಿತಾ  ಪಾತ್ರದಲ್ಲಿ ಮಿಂಚಿ ತಮ್ಮ ಹೆಸರನ್ನು ಬದಲಾಯಿಸಿಕೊಂಡರಂತೆ. ಬಳಿಕ ಆ ಪಾತ್ರದಿಮದ ಒಂದಾದ ಮೇಲೆ ಒಂದು ಸಿನಿಮಾದಲ್ಲಿ ನಟಿಸಿ, ರಜನಿಕಾಂತ್, ಕಮಲ್ ಹಾಸನ್ ನಂತಹ ದೊಡ್ಡ ದೊಡ್ಡ ಸ್ಟಾರ್ ಜೊತೆಗೂ ತೆರೆ ಹಂಚಿಕೊಂಡರಂತೆ. ಬಳಿಕ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾ ಅವರು 17 ವರ್ಷದ ಸಿನಿ ಜರ್ನಿಯಲ್ಲಿ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಲಾಕಪ್ ಡೆತ್, ಚಿನ್ನ, ಪ್ರಚಂಡ ಕುಳ್ಳ, ಗಣೇಶನ ಗಲಾಟೆ, ಹಳ್ಳಿ ಮೇಷ್ಟ್ರು, ಅಳಿಮಯ್ಯ ಸಿನಿಮಾಗಳಲ್ಲೂ ಮಿಂಚಿಸರು.

ನಂತರ ಸ್ಟಾರ್ ನಟನನ್ನು ಪ್ರೀತಿಸುತ್ತಿದ್ದರಂತೆ. ಆದರೆ ಆತನಿಂದ ಮೋಸ ಹೋದ ಸಿಲ್ಕ್ ಸ್ಮಿತಾ ಅವರು ಖಿನ್ನತೆಗೆ ಒಳಗಾಗಿದ್ದರಂತೆ. ಕೊನೆಯ ಬಾರಿಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟಿ ಅನುರಾಧ ಅವರಿಗೆ ಕರೆ ಮಾಡಿದ್ದರಂತೆ. ಡೆತ್ ನೋಟ್ ಬರೆದಿಟ್ಟಿದ್ದ ಅವರು, ಸ್ಟಾರ್ ನಟನ ಹೆಸರನ್ನು ಮಾತ್ರ ಬಹಿರಂಗ ಪಡಿಸದೇ ನೇಣಿಗೆ ಶರಣಾಗಿದ್ದರಂತೆ. ಅವರ ಬಯೋಪಿಕ್ ಕೂಡ ಮಾಡಲಾಗಿದ್ದು, 2011ರಲ್ಲಿ ರಿಲೀಸ್ ಆಯ್ತು.