ಬೇರೆ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ ; ವಿಡಿಯೋ ವೈರಲ್

ಬೇರೆ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ ; ವಿಡಿಯೋ ವೈರಲ್

ಈಗಿನ ಕಾಲದಲ್ಲಿ ವಯಸ್ಸಿಗೆ ಬಂದ ಹುಡುಗಿಯರು ಅಥವಾ ಹುಡುಗ ತಮ್ಮ ತಂದೆ ತಾಯಿಗೆ ಕಿಂಚತ್ತು ಮರ್ಯಾದೆ ಕೊಡುವುದಿಲ್ಲ . ಅವರಿಗೆ ಇಷ್ಟ ಬಂದ ಹಾಗೆ ಯಾರನ್ನೋ ಪ್ರೀತಿಸಿ ಮದುವೆ ಆಗುತ್ತಾರೆ . ಇದರಿಂದ ತಮ್ಮನ್ನು ಸಾಕಿದ ತಮ್ಮ ತಂದೆ ತಾಯಿ ಮಾನ ಮರ್ಯಾದೆ  ಬೀದಿ ಪಾಲಾಗುತ್ತೆ ಅಂತ ಕೊಂಚವೂ ಯೋಚನೆ ಮಾಡುವುದಿಲ್ಲ . ಏನ್ ಇದು ಘಟನೆ ನೋಡಣ ಬನ್ನಿ 

ಇಲ್ಲಿನ ಗರ್ಬಡಾ ಗ್ರಾಮದ ನಿವಾಸಿಯೊಬ್ಬರ ಮಗಳು ಒಂದು ತಿಂಗಳ ಹಿಂದೆ ಅನ್ಯಜಾತಿಯ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಈ ವಿಷಯ ತಿಳಿದ ಯುವತಿಯ ತಂದೆ ಬದುಕಿದ್ದಾಗಲೇ ತನ್ನ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ
ಒಂದು ತಿಂಗಳ ಹಿಂದೆ ತಮ್ಮ ಮಗಳು ಮನೆಯಿಂದ ಹೊರಗೆ ಹೋದವಳು ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಗ್ರಾಮಸ್ಥರಿಗೆಲ್ಲಾ ವಿಷಯ ಮುಟ್ಟಿಸಿ ಹುಡುಕಾಟ ನಡೆಸಿದ್ದರು.

ಎಷ್ಟು ಹುಡುಕಾಡಿದರೂ ಸಿಗದಿ‌ದ್ದಾಗ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ  ನಡೆಸಿದ್ದ ಪೊಲೀಸರು ಮಗಳನ್ನು ಪತ್ತೆ ಮಾಡಿದಾಗ ಆಕೆ ಅನ್ಯ ಜಾತಿಯ ಹುಡುಗನ್ನ ಪ್ರೀತಿಸಿ  ಮದುವೆಯಾಗಿರುವುದು ಕಂಡುಬಂದಿತು.   

( video credit ; brut india )

ನಂತರ ಮಗಳನ್ನು ತನ್ನ ಪಾಡಿಗೆ ಬಿಟ್ಟು ಕುಟುಂಬಸ್ಥರೊಂದಿಗೆ ಮನೆಗೆ ಹಿಂದಿರುಗಿದ ತಂದೆ ಅಂತ್ಯ ಸಂಸ್ಕಾರ ನೆರವೇರಿಸಿ ಮಗಳಜೊತೆಗಿನ ಸಂಬಂಧವನ್ನ ಮುರಿದುಕೊಂಡಿದ್ದಾನೆ. ಇನ್ನು ಅವಳು ನನ್ನ ಪಾಲಿಗೆ ಸತ್ತು ಹೋಗಿದ್ದಾಳೆ, ನನಗು-ಅವಳಿಗು ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಲೆ ಬೋಳಿಸಿಕೊಂಡು ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನ ನೆರವೇರಿಸಿದ್ದಾನೆ.
ಇದು ಎಷ್ಟರ ಮಟ್ಟಿಗೆ ಸರಿ ಅಥವಾ ತಪ್ಪು ನೀವೇ ಹೇಳಿ