ಇಂತವರು ಕಟ್ಟಬೇಕು ಪೂರ್ಣ ಕರೆಂಟ್ ಬಿಲ್,ಕಾಂಗ್ರೆಸ್ ಫ್ರೀ ಕರೆಂಟ್ ನಿಯಮ ತಿಳಿದುಕೊಳ್ಳಿ

ಇಂತವರು ಕಟ್ಟಬೇಕು ಪೂರ್ಣ ಕರೆಂಟ್ ಬಿಲ್,ಕಾಂಗ್ರೆಸ್ ಫ್ರೀ ಕರೆಂಟ್ ನಿಯಮ ತಿಳಿದುಕೊಳ್ಳಿ

ರಾಜ್ಯದಲ್ಲಿ ಇದೀಗ ಕಾಂಗ್ರೆಸ್  ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್ ನೀಡಿದ ಐದು ಭರವಸೆಗಳ ಅನುಷ್ಠಾನದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದು ಕೆಲವು ದಿನಗಳು ಆದರೂ ಕೂಡ ಇನ್ನು ಭರವಸೆಗಳ ಅನುಷ್ಠಾನದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ.

ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಜಾರಿ ಬಗ್ಗೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕಾಂಗ್ರೆಸ್ ನ ಐದು ಗ್ಯಾರೆಂಟಿಗಳು


ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗು ಯುವ ನಿಧಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಯೋಜನೆ ಜಾರಿ ಮೊದಲಾದ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಯೋಜನೆ ಜಾರಿ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಗೃಹಜ್ಯೋತಿ ಯೋಜನೆ


ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. 200 ಯುನಿಟ್ ಮೇಲ್ಪಟ್ಟು ವಿದ್ಯುತ್ ಬಳಕೆ ಮಾಡಿದರೆ ವಿದ್ಯುತ್ ಬಳಕೆದಾರರು ಪೂರ್ಣ ಬಿಲ್ ಪಾವತಿಸಬೇಕಿದೆ ಎಂದು ಹೇಳಲಾಗಿದೆ. ಕಳೆದ ವರ್ಷದ ವಿದ್ಯುತ್ ಬಳಕೆ ಆಧರಿಸಿ ಎಷ್ಟು ಉಚಿತ ವಿದ್ಯುತ್ ನೀಡಬೇಕೆಂದು ನಿರ್ಧರಿಸಲಾಗುವುದು. ಅದೇ ರೀತಿಯಲ್ಲಿ ಕರೆಂಟ್ ಬಿಲ್ ನ ನಿಗದಿತ ಶುಲ್ಕವನ್ನ ಜನರು ಕಟ್ಟಬೇಕು.

ಗ್ರಾಹಕರು ಮೊದಲಿಗೆ ಪೂರ್ಣ ಬಿಲ್ ಪಾವತಿಸಿ ನಂತರ ಡಿಬಿಟಿ ಮೂಲಕ ಹಣ ಪಡೆಯಬೇಕು. ಉಚಿತ ವಿದ್ಯುತ್ ಬೇಡವಾದವರು ಅದನ್ನು ತಿರಸ್ಕರಿಸಬಹುದು. ಈ ರೀತಿಯಾಗಿ ಹಲವು ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.