ಫ್ರೀ ಶಕ್ತಿ’ಯ ಬಸ್ ನಿಲ್ಲಿಸದೆ ಹೋಗಿದ್ದಕ್ಕೆ ಕಲ್ಲೆಸೆದ ಮಹಿಳೆ. ನಂತರ ಏನಾಯ್ತು ನೋಡಿ ; ವಿಡಿಯೋ ವೈರಲ್

ಫ್ರೀ ಶಕ್ತಿ’ಯ ಬಸ್ ನಿಲ್ಲಿಸದೆ ಹೋಗಿದ್ದಕ್ಕೆ ಕಲ್ಲೆಸೆದ ಮಹಿಳೆ. ನಂತರ ಏನಾಯ್ತು ನೋಡಿ ; ವಿಡಿಯೋ ವೈರಲ್

ಸರ್ಕಾರ ಫ್ರೀ ಶಕ್ತಿ ಯೋಜನೆ ಘೋಷಣೆ ಮಾಡಿದ ದಿವಸದಿಂದ ಒಂದಲ್ಲಒಂದು ಅವಾಂತರ ಮಹಿಳೆಯರಿಂದ ನಡೆಯುತ್ತಲೇ ಇದೆ . ಅವರ ದೃಷ್ಟಿ ಕೋನವೇ ಬದಲಾಗಿದೆ .ಕಂಡಕ್ಟರ್ ಮೇಲೆ ಹಲ್ಲೆ ಮಾಡುವುದು ಸೇರಿದಂತೆ ಅನೇಕ ಪ್ರಕರಣಗಳು ಜರುಗಿವೆ . ಆದರೆ ಇಲ್ಲೊಬ್ಬ ಮಹಿಳೆ ಏನು ಮಾಡಿದ್ದಾಳೆ ಗೊತ್ತಾ. ಚಾಲಕ ಬಸ್ ಅನ್ನು ನಿಲ್ಲಿಸದೇ ಹೋಗಿದ್ದಕ್ಕೆ ಆಕ್ರೋಶಗೊಂಡ ಮಹಿಳೆ ಬಸ್​ಗೆ ಕಲ್ಲು ತೂರಿದ್ದಾರೆ. ಇಳಕಲ್ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬುವವರು ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ಹುಲಿಗಿಯ ಹುಲಿಗೆಮ್ಮ ದರ್ಶನ ಪಡೆದು ಲಿಂಗಾಪುರ ಬಳಿ ಮಳೆಯಲ್ಲಿ ನಾಲ್ಕೈದು ತಾಸು ಬಸ್​ಗಾಗಿ ಕಾದು ಕುಳಿತಿದ್ದರು.

ತನ್ನ ಊರಿಗೆ ತೆರಳಲು ಯಾವೊಂದೂ ಬಸ್ ನಿಲ್ಲಿಸದ ಕಾರಣ ಕೋಪಗೊಂಡ ಮಹಿಳೆ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಕಲ್ಲೆಸೆದಿದ್ದಾಳೆ. ಕಲ್ಲು ಎಸೆದ ಹಿನ್ನೆಲೆಯಲ್ಲಿ ಬಸ್​​ನ ಚಾಲಕ ಮುತ್ತಪ್ಪ ಹಾಗೂ ಕಂಡಕ್ಟರ್​​ ಪ್ರಯಾಣಿಕರ ಸಮೇತ ಪೊಲೀಸ್ ಠಾಣೆಗೆ ಬಸ್​​ ಅನ್ನು ತಂದು ದೂರನ್ನು ದಾಖಲಿಸಿದ್ದಾರೆ.  

ಬಸ್ ಡ್ಯಾಮೇಜ್ ಹಿನ್ನೆಲೆ 5000 ರೂಪಾಯಿ ದಂಡ ಕಟ್ಟುವಂತೆ ಬಸ್ ಡಿಪೋ ಮ್ಯಾನೇಜರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಳಿಕ ಕಲ್ಲೆಸೆದ ಮಹಿಳೆಯು ಕ್ಷಮೆ ಕೇಳಿ 5000 ರೂಪಾಯಿ ದಂಡವನ್ನು ಕಟ್ಟಿದ ಮೇಲೆ ಅಲ್ಲಿಂದ ಹೊರಟಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.