ಈ ಊರಿನ ಗ್ರಾಮದಲ್ಲಿ ಹೆಂಡತಿಯರನ್ನು ಸಂತೆಯಲ್ಲಿ ಬಾಡಿಗೆಗೆ ಕೊಡುತ್ತಾರೆ! ಇದು ಎಲ್ಲಿ ಗೊತ್ತಾ?…ವಿಡಿಯೋ ನೋಡಿ

ಈ ಊರಿನ ಗ್ರಾಮದಲ್ಲಿ ಹೆಂಡತಿಯರನ್ನು ಸಂತೆಯಲ್ಲಿ ಬಾಡಿಗೆಗೆ ಕೊಡುತ್ತಾರೆ! ಇದು ಎಲ್ಲಿ ಗೊತ್ತಾ?…ವಿಡಿಯೋ ನೋಡಿ

ಈಗಿನ ಕಾಲದಲ್ಲೂ ಈ ರೀತಿ ಹೆಂಡತಿಯರನ್ನು ಸಂತೆಯಲ್ಲಿ ಬಾಡಿಗೆಗೆ ಕೊಡುತ್ತಾರೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ಲವಾ . ಆದರೂ ಇದು ಸತ್ಯ 
ಆಗಿನ ಕಾಲದಿಂದಲೂ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಲೆ ಇದೆ. ಇನ್ನು ಇಂದಿಗೂ ಸಹ ಇದು ನಿಂತಿಲ್ಲ. ಪ್ರತಿಯೊಂದು ಹೆಣ್ಣು ತನ್ನ ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಮದುವೆಯಾದ ನಂತರ ತನ್ನ ಗಂಡನ ಜೊತೆ ಆಗಿರಬೇಕು ಹೀಗಿರಬೇಕು, ತನ್ನ ಗಂಡ ತನ್ನನ್ನು ಹೆಚ್ಚಾಗಿ ಪ್ರೀತಿಸಬೇಕು.

ಆತನ ಜೊತೆಗೆ ತನ್ನ ಇಡೀ ಜೀವನವನ್ನು ಕಳೆಯಬೇಕು. ಈ ರೀತಿ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಇಲ್ಲಿ ಒಂದು ಗ್ರಾಮದಲ್ಲಿ ಈ ಗಂಡಂದಿರು ತಮ್ಮ ಹೆಂಡತಿಯರನ್ನು ಹರಾಜು ಹಾಕುತ್ತಿದ್ದಾರೆ. ದುಡ್ಡಿಗಾಗಿ ಅವರು ತಮ್ಮ ಹೆಂಡತಿಯನ್ನು ಸಂತೆಯಲ್ಲಿ ನಿಂತು ಬೇರೆ ಪುರುಷರಿಗೆ ಮಾರುತ್ತಿದ್ದಾರೆ.  ಹೌದು ಮಧ್ಯಪ್ರದೇಶದ ಶಿವಪುರ ಎಂಬ ಗ್ರಾಮದಲ್ಲಿ ಒಂದು ಸಂತೆ ನಡೆಯುತ್ತಿದೆ. ಈ ಸಂತೆಯಲ್ಲಿ ಹಣ್ಣು ತರಕಾರಿಗಳನ್ನು ಮಾರುವುದಿಲ್ಲ ಬದಲಿಗೆ ಹೆಂಡತಿಯರನ್ನು ಸ್ವತಃ ತಮ್ಮ ಗಂಡಂದಿರೆ ಹರಾಜು ಹಾಕುತ್ತಾರೆ. ಹೌದು ತಮ್ಮ ಹೆಂಡತಿಯರನ್ನು ಈ ಗ್ರಾಮದಲ್ಲಿ ಬಾಡಿಗೆಗೆ ಕೊಡುತ್ತಾರೆ.     

ಇಲ್ಲಿನ ಪುರುಷರು ಈ ರೀತಿ ಮಾಡಲು ಕಾರಣ ಏನು ಎಂದು ನೀವು ಕೇಳಬಹುದು. ಈ ಗ್ರಾಮದ ಕೆಲ ಜಾತಿಯ ಪುರುಷರು ಮೇಲ್ಜಾತಿಯ ಪುರುಷರಿಗೆ ತಮ್ಮ ಹೆಂಡತಿಯರನ್ನು ಬಾಡಿಗೆಗೆ ಕೊಡುತ್ತಾರೆ. ಇದು ಮೊದಲಿನಿಂದಲೂ ನಡೆದು ಬಂದ ಪದ್ದತಿ ಅಂತೆ. ಇನ್ನು ಇಂದಿಗೂ ಸಹ ಇಲ್ಲಿನ ಜನರು ಈ ಪದ್ಧತಿಯನ್ನು ಪಾಲಿಸುತ್ತಾ ಬರುತ್ತಿದ್ದಾರೆ.

ಇನ್ನು ಇದಕ್ಕೆ ಮುಖ್ಯ ಕಾರಣ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಪುರುಷರು ಹೆಣ್ಣು ಮಕ್ಕಳಿಗೆಂತ ಜಾಸ್ತಿ ಸಂಖ್ಯೆಯಲ್ಲಿದ್ದಾರಂತೆ. ಇನ್ನು ಈ ಕಾರಣದಿಂದ ಅತಿಯರು ತಮ್ಮ ಹೆಂಡತಿಯರನ್ನು ಸಂತೆಯಲ್ಲಿ ಬಾಡಿಗೆಗೆ ಕೊಡುತ್ತಾರೆ. ಇನ್ನು 500 ರೂಪಾಯಿಯಿಂದ ಲಕ್ಷದವರೆಗೂ ಆಕೆಯನ್ನು ಮಾರುತ್ತಾರೆ.  ( video credit ; focus )

ಹೌದು ಆಕೆಯ ಮೈಬಣ್ಣ ಹಾಗೂ ಸೌಂದರ್ಯದ ಮೇಲೆ ಆಕೆ ಹಣವನ್ನು ನಿಗದಿಪಡಿಸಲಾಗಿರುತ್ತದೆ. ಇನ್ನು ಈ ರೀತಿ ಮಾಡುವುದು ಎಷ್ಟು ಸರಿ ನೀವೇ ಹೇಳಿ. ಈ ರೀತಿ ಆಚರಣೆಯನ್ನು ಯಾರಾದರೂ ಒಬ್ಬರು ನಿಲ್ಲಿಸಲೇಬೇಕು. ಹೆಣ್ಣು ಯಾರ ಕೈ ಗೊಂಬೆಯು ಅಲ್ಲ. ಹೆಣ್ಣಿನ ಮೇಲೆ ಈ ರೀತಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…