ಜನರ ಮಾತಿಗೆ ಮನನೊಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಸ್ಟರ್ ಆನಂದ್. ವಂಶಿಕಾ ಬೆಳವಣಿಗೆಯೇ ಈ ನೋವಿಗೆ ಕಾರಣವಾಗ್ತಿದಿಯಾ.?

ಜನರ ಮಾತಿಗೆ ಮನನೊಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಸ್ಟರ್ ಆನಂದ್. ವಂಶಿಕಾ ಬೆಳವಣಿಗೆಯೇ ಈ ನೋವಿಗೆ ಕಾರಣವಾಗ್ತಿದಿಯಾ.?

ಮಾಸ್ಟರ್ ಆನಂದ್ ಅದ್ಭುತ ಬಾಲ ಕಲಾವಿದ, ಆಂಕರ್, ಡೈರೆಕ್ಟರ್, ಪ್ರೊಡ್ಯೂಸರ್ ಸೈಡ್ ಆಕ್ಟರ್ ಹೀಗೆ ಸಾಕಷ್ಟು ಪ್ರತಿಭೆಯನ್ನು ಒಳಗೊಂಡಿರುವ ಮಾಸ್ಟರ್ ಆನಂದ್ ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗೂ ಕೂಡ ತಮ್ಮನ್ನು ತಾವು ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ‌. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋನಲ್ಲಿ ಆಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಪ್ರತಿಯೊಂದು ಕಾರ್ಯಕ್ರಮದ ಉಸ್ತುವಾರಿಯನ್ನು ತೆಗೆದುಕೊಳ್ಳುತ್ತಾರೆ ನಿರೂಪಕರಾಗಿ ಕೆಲಸ ಮಾಡುತ್ತಾರೆ.

ಹೊಸ ವರ್ಷದ ಸಂಭ್ರಮ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಈ ಸಮಯದಲ್ಲಿ ಮಾಸ್ಟರ್ ಆನಂದ್ ಅವರು ಭಾವುಕರಾಗಿ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ ಅಷ್ಟಕ್ಕೂ ಆನಂದ್ ಅವರು ಈ ವೇದಿಕೆ ಮೇಲೆ ಕಣ್ಣೀರು ಹಾಕುವುದಕ್ಕೆ ಕಾರಣವೇನು ಎಂಬುದನ್ನು ನೋಡುವುದಾದರೆ ಅದು ಅವರ ಮಕ್ಕಳ ಬಗ್ಗೆ.

ಹೌದು ಮಾಸ್ಟರ್ ಆನಂದ ಅವರಿಗೆ ಇಬ್ಬರು ಮಕ್ಕಳಿದ್ದು ಅದರಲ್ಲಿ ಪುತ್ರನೋರ್ವ ಸದ್ಯಕ್ಕೆ ಚಿಕ್ಕಮಂಗಳೂರು ಸಮೀಪದ ಗುರುಕುಲ ಒಂದರಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ. ಮಗನು ತಂದೆಗಾಗಿ ಪತ್ರ ಒಂದನ್ನು ಬರೆದು ಕಳಿಸಿದರೆ ಈ ಪತ್ರವನ್ನು ನೋಡಿದಂತಹ ಆನಂದ್ ಭಾವುಕರಾಗಿದ್ದಾರೆ. ಆ ಪತ್ರದಲ್ಲಿ ಬರೆದಿದ್ದ ಸಾಲುಗಳಾದರು ಏನು ಎಂಬುದನ್ನು ನೋಡುವುದಾದರೆ.

“ಹರಿ ಓಂ ಅಪ್ಪ. ಹುಟ್ಟುಹಬ್ಬದ ಶುಭಾಶಯಗಳು. ನಾನು ನಿಮ್ಮ ಜೊತೆ ಸಮಯ ಕಳೆಯುತ್ತಿದ್ದೆ. ಗುರುಕುಲಕ್ಕೆ ಬಂದ ಕಾರಣದಿಂದ ನಿಮ್ಮ ಜೊತೆ ಸಮಯ ಕಳೆಯಲಾಗಲಿಲ್ಲ. ಪ್ರತಿ ವರ್ಷ ನಿಮ್ಮ ಹುಟ್ಟುಹಬ್ಬಕ್ಕೆ ಇರುತ್ತಿದ್ದೆ. ನನು ಗುರುಕುಲದ ಅಧ್ಯಾಯನ ಮುಗಿಯುವವರೆಗೂ ನಿಮ್ಮ ಹುಟ್ಟುಹಬ್ಬಕ್ಕೆ ಇರಲಾಗುವುದಿಲ್ಲ. ಹಾಗೆ ನಿಮಗೆ ‘ಹೊಸ ವರ್ಷದ ಶುಭಾಶಯಗಳು’ ನಾನು ನಿಮ್ಮನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ಮನೆಯಲ್ಲಿ ನಾನು ನಿಮ್ಮ ಜೊತೆ ವಿಡಿಯೋ ಗೇಮ್ಸ್‌ ಆಡುತ್ತಿದ್ದಾಗ ಸಿಗುತ್ತಿದ್ದ ಖುಷಿ ಈಗ ಸಿಗುವಿದಿಲ್ಲ. ಐ ಲವ್ ಯು ಅಪ್ಪ” ಎಂದು ಆನಂದ್ ಪುತ್ರ ಪತ್ರ ಬರೆದಿದ್ದಾರೆ.

ಎಷ್ಟೇ ದೊಡ್ಡ ಸೆಲೆಬ್ರಿಟಿ ಆದರೂ ಕೂಡ ಮಕ್ಕಳ ವಿಚಾರ ಬಂದಾಗ ಆತ ಒಬ್ಬ ತಂದೆಯಾಗಿ ಕಾಣುತ್ತಾನೆ ಹೊರತು ಸೆಲೆಬ್ರೆಟಿಯಾಗಿ ಕಾಣುವುದಿಲ್ಲ. ಹಾಗಾಗಿ ಮಗನ ಪತ್ರ ನೋಡುತ್ತಿದ್ದ ಹಾಗೆ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ ಇದರ ಜೊತೆಗೆ ಇತ್ತೀಚಿನ ದಿನದಲ್ಲಿ ಜನರು ಮಾತನಾಡುತ್ತಿರುವಂತಹ ವಿಚಾರವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಂಶಿಕ ಸದ್ಯಕ್ಕೆ ಹೆಚ್ಚು ಬೇಡಿಕೆಯಲ್ಲಿ ಇರುವಂತಹ ಬಾಲ ನಟಿ ಸಾಕಷ್ಟು ಪ್ರೋಗ್ರಾಮ್ ಗಳನ್ನು ನಡೆಸಿಕೊಡುತ್ತಿದ್ದಾರೆ ಇದು ಒಂದು ಕಡೆ ವರವಾದರೆ ಮತ್ತೊಂದು ಕಡೆ ಶಾಪವೂ ಕೂಡ ಆಗಿದೆ.

ಮನೆಯಲ್ಲಿ ಎರಡು ಮಕ್ಕಳಿದ್ದಾಗ ನಾರ್ಮಲ್ ಆಗಿ ಹೊಲಿಸುತ್ತಾರೆ. ಅದರಲ್ಲೂ ಮಗಳು ಸ್ವಲ್ಪ ಹೆಸರು ಮಾಡಿದ್ದಾರೆ. ಈ ಹೊಲಿಕೆ ಒಂದು ಕರೆ ಆದ್ರೆ ಕೆಲವರು ನನಗೆ ಹೇಳುತ್ತಾರೆ ಆಕೆ ವಿದ್ಯಾಭ್ಯಾಸದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾವಾಗಲೂ ಆಕ್ಟಿಂಗ್‌ಗೆ ಕಳುಹಿಸುತ್ತೀನಿ ಅದು ಇದು ಅನ್ನೋ ತರ ಮಾತನಾಡುತ್ತಾರೆ. ಹೀಗೆ ಮಾತನಾಡುವವರು ನನ್ನ ಮಗನನ್ನು ನೋಡಿ ತಿಳಿದುಕೊಳ್ಳಬೇಕು ನನ್ನೊಳಗೆ ಒಬ್ಬ ಜವಾಬ್ದಾರಿ ಇರುವ ತಂದೆ ಇದ್ದಾನೆ ಎಂದು.

ಎಲ್ಲಾದಕ್ಕಿಂತ ಮುಖ್ಯವಾಗಿ ನನ್ನ ಮಗಳು ಬಾಲನಟಿ ಆಗುವ ಮುಂಚೆ ನಾನು ಒಬ್ಬ ಬಾಲ ಕಲಾವಿದ ಆಗಿದ್ದೆ ಅನ್ನೋದು ಮರೆತು ಸಲಹೆ ಕೊಡುತ್ತಾರೆ. ಅದು ಬಹಳ ನೋವು ಕೊಡುತ್ತದೆ. ವಿದ್ಯಾಭ್ಯಾಸಕ್ಕೆ ಮೊದಲಿಂದಲ್ಲೂ ನಾನು ಆಧ್ಯತೆ ಕೊಟ್ಟಿರುವೆ. ಹಾಗೆ ನನ್ನ ಮಗಳಿಗೂ ಸಹ ನಾನು ಕೊಡುವೆ. ನನ್ನ ಮಗನಿಗೆ ಈಗ ಕೊಡುತ್ತಿರುವೆ. ಎಲ್ಲವೂ ಭಗವಂತನ ಇಚ್ಛೆ’ ಎಂದ ಅನಂದ್ ಹೇಳಿದ್ದಾರೆ.