ಡಕ್‌ಔಟ್‌ ಆಗಿ ಸಿಕ್ಕಾಪಟ್ಟೆ ಟ್ರೋಲಾದ ಪೃಥ್ವಿ ಶಾ!

Updated: Thursday, December 17, 2020, 22:21 [IST]

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಮಯಾಂಕ್‌ ಅಗರ್ವಾಲ್‌ ಜೊತೆಗೆ ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಬೇಕು ಎಂದು ದಿಗ್ಗಜರಾದ ಸುನಿಲ್ ಗವಾಸ್ಕರ್ ಮತ್ತು ಅಲಾನ್‌ ಬಾರ್ಡರ್‌ ಅಭಿಪ್ರಾಯ ಪಟ್ಟಿದ್ದರು. ಆದರೆ, ಇದಕ್ಕೆ ಕಿಂಚಿತ್ತೂ ಬೆಲೆಕೊಡದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಕಳಪೆ ಲಯದಲ್ಲಿ ಇದ್ದ ಪೃಥ್ವಿ ಶಾ ಅವರನ್ನೇ ಓಪನರ್‌ ಆಗಿ ಆಯ್ಕೆ ಮಾಡಿ ಭಾರಿ ಬೆಲೆ ತೆತ್ತಿದೆ.

ಡೇ-ನೈಟ್‌ ಟೆಸ್ಟ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ವಿರಾಟ್‌ ಕೊಹ್ಲಿ ಬಳಗಕ್ಕೆ ನಿರೀಕ್ಷಿತ ಆರಂಭ ಸಿಗಲೇ ಇಲ್ಲ. ಆಸ್ಟ್ರೇಲಿಯಾ ನೆಲದಲ್ಲಿ ಮೊತ್ತ ಮೊದಲ ಬಾರಿ ಬ್ಯಾಟಿಂಗ್‌ಗೆ ಇಳಿದ ಯುವ ಓಪನರ್‌ ಪೃಥ್ವಿ ಶಾ, ಎದುರಿಸಿದ ಎರಡನೇ ಎಸೆತದಲ್ಲೇ ಕ್ಲೀನ್‌ ಬೌಲ್ಡ್‌ ಆಗಿ ನಿರಾಸೆ ಮೂಡಿಸಿದರು.

 

ಆಸೀಸ್‌ನ ಅನುಭವಿ ಎಡಗೈ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರ ಅದ್ಭುತ ವೇಗಕ್ಕೆ ನಿರುತ್ತರರಾದ 21 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಎದುರಿಸಿದ 2ನೇ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಆಫ್‌ ಸ್ಟಂಪ್‌ನ ಆಚೆಯಿದ್ದ ಚೆಂಡನ್ನು ಫುಟ್‌ವರ್ಕ್‌ ಇಲ್ಲದೇ ಆಡಲು ಮುಂದಾದ ಶಾ, ಇನ್‌ಸೈಡ್‌ ಎಡ್ಜ್‌ ಮೂಲಕ ಕ್ಲೀನ್‌ ಬೌಲ್ಡ್‌ ಆದರು.

ಇದರ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾಗಳಲ್ಲಿ ಪೃಥ್ವಿ ಶಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಯಿತು. ಸೊನ್ನೆ ಸುತ್ತಿದ ಬ್ಯಾಟ್ಸ್‌ಮನ್‌ನ ತರಾಟೆಗೆ ತೆಗೆದುಕೊಂಡ ನೆಟ್ಟಿಗರು ತರಹೇವಾರಿ ಟ್ರೋಲ್‌ ಫೋಟೊಗಳೊಂದಿಗೆ ಬಿಸಿ ಮುಟ್ಟಿಸಿದ್ದಾರೆ. ಕಳೆದ ತಿಂಗಳು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲೂ ಪೃಥ್ವಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದಕ್ಕೂ ಮೊದಲು ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದಾಗಲೂ ಪೃಥ್ವಿ ಅವರಿಂದ ಟೆಸ್ಟ್‌ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ಹೊರಬಂದಿರಲಿಲ್ಲ.

  

ಇನ್ನು ಇನ್‌ ಫಾರ್ಮ್‌ ಬ್ಯಾಟ್ಸ್‌ಮನ್‌ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಈಗಾಗಗಲೇ ಆರಂಭಿಕನಾಗಿ ಆಡಿ ಶತಕ ಬಾರಿಸಿದ ಅನುಭವ ಕೂಡ ಹೊಂದಿರುವ ಕೆಎಲ್‌ ರಾಹುಲ್‌ ಅವರನ್ನು ಬದಿಗೊತ್ತಿ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿಕೊಂಡದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.

ಪೃಥ್ವಿ ವಿರುದ್ಧ ಹರಿದಾಡಿದ ಕೆಲ ಟ್ರೋಲ್‌ಗಳು ಹೀಗಿವೆ