ಈ ವರ್ಷದ ಐಪಿಎಲ್ ನಲ್ಲಿ ಆರ್ ಸಿಬಿ ತಂಡದಿಂದ ಈ ಪ್ರಮುಖ ಆಟಗಾರನ ಜೊತೆ ಇವರು ಹೊರಕ್ಕೆ..!

Updated: Wednesday, January 20, 2021, 15:54 [IST]

ಹೌದು 2021ರ ಐಪಿಎಲ್ ನಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ನಡೆಯುವ ಮುನ್ನವೇ ಭಾರತ ಪ್ರೀಮಿಯರ್ ಲೀಗ್ ನಿಂದ ಕೆಲ ತಂಡಗಳು ಕೆಲ ಆಟಗಾರರನ್ನು ತಮ್ಮ ತಂಡದಿಂದ ಕೈಬಿಡಲು ನಿರ್ಧಾರ ಮಾಡಿದೆ ಮತ್ತು ಇದೇ ಜನವರಿ 21 ರವರೆಗೆ ಆಯಾ ತಂಡಗಳ ಆಟಗಾರರ ಉಳಿಸಿಕೊಳ್ಳುವ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಹೇಳಲಾಗಿದೆ ಮತ್ತು ಫೆಬ್ರವರಿ 11ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ನಮ್ಮ ಆರ್ಸಿಬಿ ತಂದ ಹರಾಜು ಪ್ರಕ್ರಿಯೆ ಆರಂಭವಾಗುವ ಮುನ್ನ ಕೆಲ ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದ್ದು ಅಸಮರ್ಥ ಆಟಗಾರರಿಗೆ ಕೋಕ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ 

Advertisement

ಆರ್ ಸಿಬಿ ತಂಡದಲ್ಲಿ ಮತ್ತೆ ಮುಂದುವರಿಯಲಿರುವ ಹೆಚ್ಚು ಸಾಧ್ಯತೆ ಇರುವ ಆಟಗಾರರು, ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ದೇವದತ್ ಪಡಿಕ್ಕಲ್, ಯಜುವೇಂದ್ರ ಚಾಹಲ್, ನವದೀಪ್ ಸೈನಿ, ಶಿವಂ ದುಬೆ, ವಾಷಿಂಗ್ ಟನ್ ಸುಂದರ್, ಇವರೆಲ್ಲ ತಂಡದಲ್ಲಿ  ಮುಂದುವರಿಯಲಿದ್ದಾರೆ. ಆದ್ರೆ ಸೌತ್ ಆಫ್ರಿಕಾದ ಕ್ರಿಸ್ ಮೊರೀಸ್, ಇಂಗ್ಲೆಂಡ್ ನ ಮೊಯಿನ್ ಅಲಿ, ಹಾಗೂ  ಆರನ್ ಫಿಂಚ್, ಕೊನೆಯದಾಗಿ, ಗುರುಕೀರತ್ ಸಿಂಗ್ ಆರ್ಸಿಬಿ ತಂಡದಲ್ಲಿ ಮುಂದುವರಿಯುವ ಅವಕಾಶ ತುಂಬಾನೇ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ.. 

Advertisement

ಹಾಗೇನೇ ದಕ್ಷಿಣ ಆಫ್ರಿಕಾದ ಸ್ಟೆನ್ ಗನ್ ಎಂದೇ ಖ್ಯಾತಿ ಪಡೆದಿರುವ, ಡೇಲ್ ಸ್ಟೇನ್ ಮುಂದಿನ ಐಪಿಎಲ್ ಪಂದ್ಯದಲ್ಲಿ ಆಟ ಆಡುವುದಿಲ್ಲವೆಂದು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಪಾರ್ಥೀವ್ ಪಾಟೀಲ್, ಎಲೋನ್, ಇಸುರು ಉದಾನ, ಕೇನ್ ರಿಚರ್ಡ್ಸಸನ್, ಜೋಶ್ ಫಿಲಿಪ್ ಕೂಡ ಪಂದ್ಯದಲ್ಲಿ ಆಡಬಹುದಾಗಿದೆ ಎಂದು ತಿಳಿದುಬಂದಿದೆ. ಆದರೆ ಕನ್ನಡಿಗ ಪವನ್ ದೇಶ್ ಪಾಂಡೆ ಮತ್ತು ಪವನ್ ನೇಗಿ ಅವರ ಬಗ್ಗೆ ಆರ್ ಸಿಬಿ ಅನುಮಾನ ವ್ಯಕ್ತ ಪಡಿಸಿದ್ದಾರೆ.. ನಾಯಕ ವಿರಾಟ್ ಕೊಹ್ಲಿಯ ನೇತೃತ್ವದಲ್ಲಿ,ಆರ್ ಸಿಬಿ ಸತತವಾಗಿ ಮುಗ್ಗುರಿಸಿದೆ..ಬಿಲ್ ಹಾಗಾಗಿ ,ಈ ಬಾರಿಯ ಐಪಿಎಲ್,ಎಲ್ಲಿ ನಡೆಯಬಹುದು ಎಂಬುದು ಗೊತ್ತಿಲ್ಲದ ಕಾರಣಕ್ಕೆ ಬೆಂಗಳೂರು ತಂಡದ  ಒಳಗಿರುವ ಆಟಗಾರರ ನ್ಯುನತೆಯನ್ನು ಸರಿಪಡಿಸಲು ಆರಂಭಿಕ ಜೋಡಿಯ ಜೊತೆಗೆ, ಮಧ್ಯಮ ಕ್ರಮಾಂಕದ ಆಟಗಾರರನ್ನು ಕೂಡ ಸರಿಯಾಗಿ ಆಯ್ಕೆ ಮಾಡಿ, ನಮ್ಮ  ಆರ್ ಸಿಬಿ ತಂಡವನ್ನು ಬಲಿಷ್ಟಗೊಳಿಸುವ ಪ್ರಯತ್ನ ನಡೆದಿದೆ ಎಂದು ಕೇಳಿಬಂದಿದೆ...