20 ಏಪ್ರಿಲ್ 2023ರ ಮೊದಲ ಸೂರ್ಯ ಗ್ರಹಣ ಈ 6 ರಾಶಿಯವರಿಗೆ ಅದೃಷ್ಟ ಮುಟ್ಟಿದ್ದೆಲ್ಲಾ ಚಿನ್ನ

20 ಏಪ್ರಿಲ್ 2023ರ ಮೊದಲ ಸೂರ್ಯ ಗ್ರಹಣ ಈ 6 ರಾಶಿಯವರಿಗೆ ಅದೃಷ್ಟ ಮುಟ್ಟಿದ್ದೆಲ್ಲಾ ಚಿನ್ನ

ಏಪ್ರಿಲ್ 2023, 20 ರಂದು ವರ್ಷದ ಮೊದಲ ಸೂರ್ಯ ಗ್ರಹಣ ಬರಲಿದೆ. ವೈಶಾಖ ಅಮವಾಸ್ಯೆಯಂದೇ ಈ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ಗ್ರಹಣ ಬೆಳಿಗ್ಗೆ 7 ಗಂಟೆ 4 ನಿಮಿಷಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆ 29 ನಿಮಿಷದ ವರೆಗೆ ಇರುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ, ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಸೂರ್ಯಗ್ರಹಣದ ದಿನ ಯಾವೆಲ್ಲಾ ರಾಶಿಗಳಿಗೆ ಶುಭ ಫಲಗಳು ಸಿಗುತ್ತದೆ ಎಂದು ತಿಳಿಯೋಣ ಬನ್ನಿ.. 

ಈ ದಿನ ದಿಂದ ಕೆಲ ರಾಶಿಗಳಿಗೆ ಸರ್ವಾರ್ಥ ಸಿದ್ಧಿ, ಪ್ರೀತಿಯಂತಹ ಶುಭ ಯೋಗಗಳು ರೂಪುಗೊಳ್ಳುತ್ತಿದೆ. ಈ ದಿನದ ಮಹತ್ವವೂ ಹೆಚ್ಚಾಗಲಿದೆ. ಗ್ರಹಣದ ಸಮಯದಲ್ಲಿ, ಸೂರ್ಯನು ಮೇಷ ಮತ್ತು ಅಶ್ವಿನಿ ನಕ್ಷತ್ರದಲ್ಲಿ ಇರಲಿದ್ದಾನೆ. ಗ್ರಹಣದ ಸಂದರ್ಭದಲ್ಲಿ, ಸೂರ್ಯ ರಾಹು ಮತ್ತು ಬುಧ ನ ಮೇಷ ರಾಶಿಯಲ್ಲಿ ಇರುತ್ತಾನೆ. ಹಾಗಾಗಿ ಗ್ರಹಣದ ಸಮಯವನ್ನು ಮಂಗಳಕರವೆಂದು ಪರಿಗಣಿಸಿಲ್ಲ. ಹಾಗಿದ್ದರೂ ಮಂಗಳಕರ ಯೋಗಗಳಿವೆ. ಈ ಕಾರಣದಿಂದಾಗಿ, ಸೂರ್ಯ ಗ್ರಹಣ ಕೆಲ ರಾಶಿಗಳಿಗೆ ಒಳ್ಳೆಯದನ್ನು ಮಾಡಲಿದೆ. 

ಮೊದಲಿಗೆ ಸೂರ್ಯ ಗ್ರಹಣದಿಂದ ಅಶುಭ ಫಲ ಸಿಗುವ ರಾಶಿಗಳನ್ನು ತಿಳಿದುಕೊಳ್ಳೋಣ. ಮೇಷ, ಸಿಂಹ, ಕನ್ಯಾ, ಮಕರ ಹಾಗೂ ವೃಶ್ಚಿಕ ರಾಶಿಗಳಿಗೆ ಸೂರ್ಯ ಗ್ರಹಣದಿಂದ ಸಮಸ್ಯೆಗಳು ಉಂಟಾಗುತ್ತದೆ. ಸೂರ್ಯ ಗ್ರಹಣದಿಂದ ಕೆಟ್ಟ ಪರಿಣಾಮ ಬೀರಲಿದ್ದು, ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇದರಿಂದ ಬಹಳಷ್ಟು ತೊಂದರೆಗಳು ಎದುರಾಗಲಿವೆ. ಇನ್ನು ಹಣಕಾಸಿನ ಸಮಸ್ಯೆಯೂ ಆಗಲಿದೆ. ಹಾಗಾಗಿ ಹಣಕಾಸಿನ ವಿಚಾರದಲ್ಲಿ ಈ ರಾಶಿ ಅವರು ಕೊಂಚ ಎಚ್ಚರಿಕೆಯಿಂದ ಇರುವುದು ಸೂಕ್ತ. 

ಇನ್ನು ಈ ವರ್ದ ಮೊದಲ ಸೂರ್ಯ ಗ್ರಹಣದಿಂದ ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದಾಗುತ್ತದೆ ಎಂಬುದನ್ನು ನೋಡೋಣ. ಮಿಥುನ, ಕುಂಭ, ತುಲಾ, ಮೀನಾ ಹಾಗೂ ಕರ್ಕಾಟಕ ರಾಶಿಗಳಿಗೆ ಸೂರ್ಯ ಗ್ರಹಣದಿಂದ ಶುಭ ಫಲಗಳು ಸಿದ್ಧಿಸಲಿವೆ. ಇವರಲ್ಲಿ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಹಣದ ಹೊಳೆಯೇ ಹರಿದು ಬರುತ್ತದೆ. ಹಳೆಯ ಸಂಕಷ್ಟಗಳು ಮಾಯವಾಗುವ ಸಾಧ್ಯತೆ ಇದೆ.

VIDEO CREDIT : Kannada ALL Round​