ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಬಳಿಕ ಮತ್ತೆ ಎದುರಾಗಿರುವ ಹೊಸ ಚ್ಯಾಲೆಂಜ್ ! ಆ ಚ್ಯಾಲೆಂಜ್ ಏನು ಗೊತ್ತಾ?

ಈ ತಿಂಗಳು ನಮ್ಮ ದೇಶದ ಪ್ರಜೆಗಳಿಗೆ ಬಹಳ ಹೆಮ್ಮೆ ಪಡುವ ತಿಂಗಳು ಎಂದ್ರೆ ತಪ್ಪಾಗಲಾರದು. ಏಕೆಂದರೆ ಇದೆ ತಿಂಗಳಲ್ಲಿ ನಮ್ಮ ದೇಶಕ್ಕೆ ಬಹಳ ಹೆಮ್ಮೆ ಪಡುವ ವಿಚಾರಗಳು ನಡೆದಿದೆ. ಮೊದಲಿಗೆ ಬಹಳ ಚಿಕ್ಕ ವಯಸ್ಸಿನಲ್ಲಿ "ಪ್ರಜ್ಞಾನಂದ" ಅವರು ' ಅಂತಾರಾಷ್ಟ್ರೀಯ ಮಟ್ಟದಲ್ಲಿ "ಚೆಸ್ ಕಾಂಪಿಟೇಶನ್" ನಲ್ಲಿ ಭಾಗಾಹಿಸಿ 'ಬೆಳ್ಳಿ ಪದಕ' ಗೆದ್ದರು. ಹಾಗೆಯೇ ಮೊನ್ನೆಯಷ್ಟೇ" ಒಲಂಪಿಕ್ಸ್" ಅಲ್ಲಿ ಚಿನ್ನದ ಪದಕ ಕೂಡ ಭಾರತ ಪಡೆದುಕೊಂಡಿದೆ. ಇದೆಲ್ಲದಕ್ಕಿಂತ ಎಲ್ಲಾ ದೇಶದವರು ಉಬ್ಬೇರಿಸಿದ ವಿಚಾರ ಎಂದ್ರೆ ಅದು ನಮ್ಮ ದೇಶದ ಹೆಮ್ಮೆ "ಚಂದ್ರಯಾನ 3". ಇದು ವರೆಗೂ ಯಾವ ದೇಶದವರು ಕೂಡ ಚಂದ್ರ ಪೂರ್ವ ದಿಕ್ಕಿನಲ್ಲಿ ಅದೆಷ್ಟೋ ಕೋಟಿ ಕರ್ಚು ಮಾಡಿದ್ದರು ಕೂಡ ಲ್ಯಾಂಡ್ ಮಾಡಲು ಆಗಿರಲಿಲ್ಲ. ಆದರೆ ನಮ್ಮ ಭಾರತದ ವಿಜ್ಞಾನಿಗಳು ಅತಿ ಕಡಿಮೆ ವೆಚ್ಚದಲ್ಲಿ ಲ್ಯಾಂಡ್ ಮಾಡಿ ನಮ್ಮ ದೇಶದ ಹೆಮ್ಮೆಯನ್ನು ಹಾಗೂ ಗೌರವವನ್ನು ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗಲಾರದು.
ಈ ಬಾರಿ ಚಂದ್ರದ ಅಂಗಳದಲ್ಲಿ ಇರುವ ಚಂದ್ರಯಾನ-3 ಚಂದ್ರಯಾನ-2 ರ ಫಾಲೋ-ಆನ್ ಮಿಷನ್ ಆಗಿದೆ ಎಂದು ನಮ್ಮ ಭಾರತದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮತ್ತು ರೋವಿಂಗ್‌ನಲ್ಲಿ ಅಂತ್ಯದಿಂದ ಅಂತ್ಯದ ಸಾಮರ್ಥ್ಯವನ್ನು ಈಗ ನಮ್ಮ ರೋವರ್ ಶುರುಮಾಡಿದೆ. ನಮ್ಮ ರೋವರ್ ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿ ಮೆಟ್ರಿಕ್ ಅಳತೆಗಳನ್ನು ಅಧ್ಯಯನ ಮಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಲ್ಯಾಂಡಿಂಗ್ ದೊಡ್ಡ ಸಾಧನೆಯಾದರೂ ಕೂಡ ಆ ನಂತರದ ಕೆಲ್ಸಗಳಲ್ಲಿ ಅಷ್ಟೇ ಜಾಗರೂಕರಾಗಿ ಮಾಡುವುದು ಅಷ್ಟೇ ಮುಖ್ಯವೆಂದು ತಿಳಿಸಿದ್ದಾರೆ. ಏಕೆಂದರೆ ಚಂದ್ರನ ಮೈಮೇಲೆ ಒಂದು ಸಣ್ಣ ಚಲಾವಣೆ ಮಾಡಲು ಕೊಡ ಸಾಕಷ್ಟು ಸಮಯ ಹಿಡಿಯಲಿದೆ. ಏಕೆಂದ್ರೆ ಚಂದ್ರನಲ್ಲಿ ಗುರುತು ಆಕರ್ಷಣೆಯ ಭಲ ಬಹಳ ಕಡಿಮೆ ಇರುವ ಕಾರಣದಿಂದ.
ಲ್ಯಾಂಡರ್ ಪೇಲೋಡ್‌ಗಳು: ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಪ್ರಯೋಗದ (ChaSTE) ಸಹಾಯದಿಂದ ಚಂದ್ರನ ಸುತ್ತ ಮುತ್ತಲಿನ ವಾತಾವರಣದ ಉಷ್ಣ ವಾಹಕತೆ ಮತ್ತು ತಾಪಮಾನವನ್ನು ಈ ಡಿವೈಸ್ ಮೂಲಕ ಅಳೆಯ ಬಹುದು. ಅದ್ರಲ್ಲೂ ಲ್ಯಾಂಡಿಂಗ್ ಸೈಟ್ ಸುತ್ತಲೂ ಭೂಕಂಪನವನ್ನು ಪರೀಕ್ಷಿಸಲು ಚಂದ್ರನ ಭೂಕಂಪನದ ಚಟುವಟಿಕೆಗಳನ್ನು ಗಮನಿಸುವ(ILSA) ಸಾಧನ ಇದಾಗಿದೆ. ಹಾಗೆಯೇ ಈ ಪೋಲೊಡ್ ಗಳ ಸಹಾಯದಿಂದ ಚಂದ್ರನ ಪ್ಲಾಸ್ಮಾ ಸಾಂದ್ರತೆ ಮತ್ತು ಚಂದ್ರನಲ್ಲಿ ಆಗುವ ವ್ಯತ್ಯಾಸಗಳನ್ನು ಕಂಡುಹಿಡಿಯಬಹುದು. ರೋವರ್ ನಲ್ಲಿ ಅಳವಡಿಸಿರುವ ಲ್ಯಾಂಗ್ಮುಯಿರ್ ಪ್ರೋಬ್ (LP) ಎನ್ನುವ ಸಾಧನದಿಂದ ಚಂದ್ರನಲ್ಲಿ ಇರುವ ಲೇಸರ್ ಶ್ರೇಣಿಯನ್ನೂ ನಾವು ಕಂಡು ಹಿಡಿದು ಅದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ರೋವರ್ ಪೇಲೋಡ್‌ಗಳು: ಚಂದ್ರನ ಮೈಮೇಲೆ ಲ್ಯಾಂಡಿಂಗ್ ಸೈಟ್‌ನ ಸಮೀಪದಲ್ಲಿ ಧಾತುರೂಪದ ಸಂಯೋಜನೆಯನ್ನು ಪಡೆಯಲು ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (APXS) ಮತ್ತು ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಈ ಡಿವೈಸ್ ನಲ್ಲಿ ಕೂಡ ಅಳವಡಿಸಲಾಗಿದೆ. ಚಂದ್ರಯಾನ-3 ಸ್ವದೇಶಿ ಲ್ಯಾಂಡರ್ ಮಾಡ್ಯೂಲ್ (LM), ಪ್ರೊಪಲ್ಷನ್ ಮಾಡ್ಯೂಲ್ (PM) ಮತ್ತು ರೋವರ್ ಹೊಂದಿದ್ದು. ಈ ಡಿವೈಸ್ ಗಳ ಮೂಲಕ ಬಾಹ್ಯ ಗ್ರಹಗಳ ಕಾರ್ಯಾಚರಣೆಗಳನ್ನೂ ನಾವು ತಿಳಿಯಬಹುದಾಗಿದೆ. ಇದೆಲ್ಲವನ್ನೂ ಮೀರಿ, ಪ್ರೊಪಲ್ಷನ್ ಮಾಡ್ಯೂಲ್ ಮೌಲ್ಯವರ್ಧನೆಯಾಗಿ ಒಂದು ವೈಜ್ಞಾನಿಕ ಪೇಲೋಡ್ ಅನ್ನು ಸಹ ಹೊಂದಿದೆ, ಇದು ಲ್ಯಾಂಡರ್ ಮಾಡ್ಯೂಲ್ ಅನ್ನು ಬೇರ್ಪಡಿಸಿದ ನಂತರ ನಮ್ಮ ರೋವರ್ ವಿಜ್ಞಾನಿಗಳಿಗೆ ಬೇಕಾದ ಹಾಗೆ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬಹುದಾಗಿದೆ.
VIDEO CREDIT : Vismaya Vani