ಕನ್ನಡದ ಖ್ಯಾತ ಕಲಾವಿದ ಇನ್ನಿಲ್ಲ..! ಅಪಘಾತದಲ್ಲಿ ಮೃತಪಟ್ಟ ನಟ..! ಕಣ್ಣೀರಿನಲ್ಲಿ ಇಡೀ ಕುಟುಂಬ

ಕನ್ನಡದ ಖ್ಯಾತ ಕಲಾವಿದ ಇನ್ನಿಲ್ಲ..! ಅಪಘಾತದಲ್ಲಿ ಮೃತಪಟ್ಟ ನಟ..! ಕಣ್ಣೀರಿನಲ್ಲಿ ಇಡೀ ಕುಟುಂಬ

ಹೌದು ಇದೀಗ ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕನ್ನಡದ ಕಲಾವಿದ ಆಗಿ ಗುರುತಿಸಿಕೊಂಡಿದ್ದ ನಟ ಲೋಕೇಶ್ ಎನ್ನುವವರು ಸಾವನ್ನಪ್ಪಿದ್ದಾರೆ. ಅದು ಬೈಕ್ ಅಪಘಾತದಲ್ಲಿ ಎಂದು ತಿಳಿದು ಬಂದಿದೆ. ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ಬಳಿ ಯಲಿಯೂರು ಗ್ರಾಮದ ಹತ್ತಿರ ಲೋಕೇಶ್ ಅವರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ತಮ್ಮ ಹುಟ್ಟೂರಿಗೆ ತೆರಳುತ್ತಿದ್ದ ಲೋಕೇಶ್ ಅವರು ತಡರಾತ್ರಿ ಬೆಂಗಳೂರು ಬಿಟ್ಟಿದ್ದು ಬೈಕ್ ನಲ್ಲಿ ತೆರಳುವಾಗ ಶನಿವಾರ ಬೆಳಗಿನ ಜಾವ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಅಪಘಾತದಲ್ಲಿ ಕಲಾವಿದ ಲೋಕೇಶ್ ಅವರ ಎರಡು ಕೈಗಳು ಎರಡು ಕಾಲಗಳು ತುಂಡು ತುಂಡಾಗಿ ಬಿದ್ದಿದ್ದು ಸಾವನಪ್ಪಿದ್ದಾರೆ. ಈ ವಿಷಯ ತಿಳಿದು ಇದೀಗ ಅವರ ಕುಟುಂಬಸ್ಥರು ಕಣ್ಣೀರಿನ ಶೋಕದಲ್ಲಿ ಮುಳುಗಿದ್ದಾರೆ. ಬೆಂಗಳೂರಿನಿಂದ ತಡ ರಾತ್ರಿ ಎರಡುವರೆ ಸಮಯಕ್ಕೆ ಹೊಸ ಬೈಕ್ ತೆಗೆದು ಕೊಂಡು ಲೋಕೇಶ್ ಅವರು ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್ ದಾರಿಯಲ್ಲಿ ತೆರಳುತ್ತಿದ್ದರು..ಶನಿವಾರ ಬೆಳಗಿನ ಜಾವಾ 5:30ಕ್ಕೆ ಈ ಅಪಘಾತ ಸಂಭವಿಸಿದ್ದು, ಅಪಘಾತವಾದ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ದೊರಕಿದೆ ಎಂದು ಪೊಲೀಸರ ಮೂಲಕ ಮಾಹಿತಿ ಹೊರ ಬಿದ್ದಿದೆ. ಆದರೆ ಹೇಗೆ ಈ ಅಪಘಾತವಾಯಿತು ಎಂಬುದು ತಿಳಿದು ಬಂದಿಲ್ಲ.

 

ಕನ್ನಡದ ಖ್ಯಾತ ಕಲಾವಿದ ಇನ್ನಿಲ್ಲ..! ಅಪಘಾತದಲ್ಲಿ ಮೃತಪಟ್ಟ ನಟ..! ಕಣ್ಣೀರಿನಲ್ಲಿ ಇಡೀ ಕುಟುಂಬ

ಬದಲಿಗೆ ಇದೀಗ ಪೊಲೀಸ್ರು ಕಾರಿನ ನಂಬರ್ ಪ್ಲೇಟ್ ಇಟ್ಟುಕೊಂಡು ಅ ಕಾರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಚಿತ್ರ ಕಲಾವಿದ ಲೋಕೇಶ್ ಅವರು ಕೇವಲ ಕಲೆಯಲ್ಲಿ ಮಾತ್ರವಲ್ಲದೆ ನಟನೆಯಲ್ಲೂ ಕೂಡ ಸೈ ಅನಿಸಿಕೊಂಡವರು. ಕನ್ನಡದ ಕಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೋಕೇಶ್ ಅವರು ಕೆಲ ನಿರ್ದೇಶಕರ ಬಳಿ ಕೆಲಸ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವರದು ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪುರು ಎನ್ನುವ ಗ್ರಾಮ. ಲೋಕೇಶ್ ಅವರು ಅವರ ಊರಿಗೆ ತೆರಳುವಾಗ ಈ ಬೈಕ್ ಅಪಘಾತ ಸಂಭವಿಸಿದೆಯಂತೆ. ಲೋಕೇಶ್ ಅವರಿಗೆ ಈಗಾಗಲೇ ಮದುವೆಯಾಗಿದ್ದು ಓರ್ವ ಪುತ್ರಿ ಕೂಡ ಇದ್ದರು. ನಟ ಲೋಕೇಶ್ ಅವರು ಅಮೂಲ್ಯ ರತ್ನ ಎಂಬ ಕಿರು ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ.

ಇತ್ತೀಚಿನ ಫ್ಯಾಮಿಲಿ ಫ್ಯಾಕ್ ಚಿತ್ರದಲ್ಲಿಯೂ ಸಹ ಕಲಾವಿದ ಲೋಕೇಶ್ ಅಭಿನಯಿಸಿದ್ದರು. ಇದೀಗ ಈ ಅಪಘಾತ ಸಂಭವಿಸಿದ್ದು ಲೋಕೇಶ್ ಅವರು ಇನ್ನಿಲ್ಲವಾಗಿದ್ದಾರೆ. ಶುಕ್ರವಾರ ಸಂಜೆ 7 ಕ್ಕೆ ರಿಲ್ಸ್ ಮಾಡಿ ಸೋಷಿಯಲ್ ಮೀಡಿಯಾ ಫೇಸ್ಬುಕ್ ನಲ್ಲಿ ಹರಿ ಬಿಟ್ಟಿದ್ದು ಈ ರೀತಿ ದುರಂತ ಅಂತ್ಯ ಕಂಡರು. ದೇವರು ಇವರ ಕುಟುಂಬಕ್ಕೆ ನೋವನ್ನ ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ ಧನ್ಯವಾದಗಳು..