ಖ್ಯಾತ ನಿರ್ದೇಶಕ ದೇವಸ್ಥಾನದ ಆವರಣದಲ್ಲಿ ನಟಿ ಗೆ ಮುತ್ತಿಟ್ಟ ದನ್ನು ಕಂಡು ಅರ್ಚಕ ಕೆಂಡಾಮಂಡಲ ಹೇಳಿದ್ದೇನು ನೋಡಿ ; ವಿಡಿಯೋ ವೈರಲ್

ಹೌದು, ಜೂನ್ 6 ರಂದು ಚಿತ್ರತಂಡ ತಿರುಮಲ ತಿರುಪತಿಯಲ್ಲಿಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಸ್ , ಕೃತಿ ಸನೊನ್ ಸೇರಿದಂತೆ ಚಿತ್ರತಂಡದ ಅನೇಕ ಮಂದಿ ಹಾಜರಿದ್ದರು. ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಹಾಜರಾಗುವ ಮುನ್ನ ಪ್ರಭಾಸ್, ಕೃತಿ ಸನೊನ್, ನಿರ್ದೇಶಕ ಓಂ ರಾವುತ್ ಸೇರಿದಂತೆ ಅನೇಕ ಮಂದಿ ತಿರುಪತಿ ದೇಗುಲಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದು, ತಮ್ಮ ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥಿಸಿದ್ದರು. ಆದರೆ ಈ ವೇಳೆ ಕೃತಿ ಅವರಿಗೆ, ನಿರ್ದೇಶಕ ರಾವುತ್ ಚುಂಬಿಸಿದ್ದು, ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಕೆಲವರು ಈ ಫೋಟೋಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಘಟನೆ ವೈರಲ್ ಆಗುತ್ತಿದ್ದಂತೆ ತೆಲಂಗಾಣದ ಚಿಲ್ಕುರ್ ಬಾಲಾಜಿ ದೇವಸ್ಥಾನದಶ್ರೀಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಘಟನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅವರು, ವೆಂಕಟೇಶ್ವರ ದೇವಸ್ಥಾನ ತಿರುಪತಿಯಲ್ಲಿ ನಟಿಗೆ ಕಿಸ್ ಮಾಡಿದ್ದು ತಪ್ಪು ಎಂದಿದ್ದಾರೆ. ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿದ ಅವರು ಇದು ಖಂಡನಾತ್ಮಕ ಘಟನೆ. ಪತಿ-ಪತ್ನಿಯೂ ಜೊತೆಯಾಗಿ ತಿರುಪತಿಗೆ ಹೋಗುವುದು ಕಡಿಮೆ. ನೀವು ಹೋಟೆಲ್ ರೂಮಿಗೆ ಹೋಗಿ ಅದನ್ನು ಮಾಡಿ. ನಿಮ್ಮ ನಡವಳಿಕೆ ರಾಮಾಯಣ ಹಾಗೂ ಸೀತಾಮಾತೆಯನ್ನು ಅವಮಾನಿಸುವಂತಿದೆ ಎಂದಿದ್ದಾ
ಅಂದಹಾಗೆ ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಚಲನಚಿತ್ರ ನಿರ್ದೇಶಕ ಕೃತಿಗೆ ವಿದಾಯ ಹೇಳುವಾಗ ಅವರ ಕೆನ್ನೆಗೆ ಚುಂಬಿಸುವುದನ್ನು ಕಾಣಬಹುದು. ದೇವರ ದರ್ಶನ ಮಾಡಿದ ಬಳಿಕ ನಟಿ ಕೃತಿ ಸನೊನ್, ಮನೆಗೆ ಹೊರಡಲು ಕಾರು ಏರುವಾಗ ತಮ್ಮ ಜೊತೆಯಲ್ಲಿದ್ದವರಿಗೆ ಬೈ ಹೇಳುತ್ತಾರೆ. ಆತ್ಮೀಯತೆಯಿಂದ ಕೃತಿ ಅವರನ್ನು ಹಗ್ ಮಾಡಿ ಮುತ್ತು ನೀಡುತ್ತಾರೆ. ಈ ವಿಡಿಯೋ ಕ್ಲಿಪ್ಲಿಂಗ್ ಹಾಗೂ ಪೋಟೋ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.