ಶಾಲಾ ಮಕ್ಕಳ ಬ್ಯಾಗ್ ತೂಕದ ಕುರಿತಾಗಿ ಹೈಕೋರ್ಟ್ ನಲ್ಲಿ ಅರ್ಜಿ..! ಶಾಲಾ ಮಕ್ಕಳಿಗೆ ಈ ನಿಯಮ ಬರಬೇಕಾ

ಶಾಲಾ ಮಕ್ಕಳ ಬ್ಯಾಗ್ ತೂಕದ ಕುರಿತಾಗಿ ಹೈಕೋರ್ಟ್ ನಲ್ಲಿ ಅರ್ಜಿ..! ಶಾಲಾ ಮಕ್ಕಳಿಗೆ ಈ ನಿಯಮ ಬರಬೇಕಾ

ಸ್ಕೂಲಿಗೆ ಹೋಗುವ ಶಾಲೆಯ ಮಕ್ಕಳ ಕುರಿತಾಗಿ ಅವರು ದಿನಾಲು ಶಾಲೆಗೆ ತೆಗೆದುಕೊಂಡು ಹೋಗುವ ಶಾಲಾ ಬ್ಯಾಗ್ ವಿಚಾರವಾಗಿ ಇದೀಗ ಹೊಸ ಸುದ್ದಿ ಹಾರಿದಾಡುತ್ತಿದೆ. ಹೌದು ಶಾಲೆಗೆ ಹೋಗುವ ಪ್ರಾಥಮಿಕ ಮಕ್ಕಳ ಬ್ಯಾಗ್ ಭಾರ ಹೆಚ್ಚು ಇರುತ್ತಿದ್ದು ಅದನ್ನು ಕಡಿಮೆ ಮಾಡುವಂತೆ ಈಗ ಹೈಕೋರ್ಟ್ ಮೊರೆ ಹೋಗಲಾಗಿದೆ. ಸರ್ಕಾರಕ್ಕೆ ಸೂಕ್ತ ಕ್ರಮಗಳನ್ನು ಈ ಹೈಕೋರ್ಟ್ ಮೂಲಕ ಕೈಗೊಳ್ಳುವಂತೆ ಸಾರ್ವಜನಿಕರ ಮತ್ತು ಜನರ ಒಳಿತಿಗಾಗಿ ಅಲ್ಲಿ ಅರ್ಜಿಯನ್ನು ಕೊಡಲಾಗಿದೆ ಎಂದು ತಿಳಿದು ಬಂದಿದೆ. ಹೌದು, ವಕೀಲರಾದ ಎಲ್ ರಮೇಶ್ ನಾಯಕ್ ಅವರು ತುಮಕೂರಿನವರು ಎಂದು ತಿಳಿದುಬಂದಿದ್ದು, ಇವರೇ ಶಾಲಾ ಮಕ್ಕಳ ಬ್ಯಾಗ್ ತೂಕದ ಇಳಿಕೆ ವಿಚಾರವಾಗಿ ಹೈಕೋರ್ಟ್ ನಲ್ಲಿ ಪಿಐಎಲ್ ಕೊಟ್ಟು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ವಿಚಾರಣೆಗೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ

ಸರ್ಕಾರಿ ಶಾಲೆ ಮಕ್ಕಳ ವಿಚಾರವಾಗಿ ಮತ್ತು ಶಾಲಾ ಮಕ್ಕಳ ಆಡಳಿತಕ್ಕೆ ಸಂಬಂಧಿತವಾದ ಕೆಲವು ಹೆಚ್ಚು ರೂಲ್ಸ್ ಅಂಡ್ ರೆಗುಲೇಷನ್ಸ್ ಹೊಸ ಹೊಸ ಅಧಿಸೂಚನೆಗಳನ್ನು ಸರ್ಕಾರ ಆಗಾಗ ಹೊರಡಿಸುತ್ತಲೇ ಬಂದಿದೆ. ಎಲ್ಲಾದಕ್ಕೂ ಶಾಲೆ ಮಕ್ಕಳ ಕುರಿತು ಹಾಗೆ ಶಾಲೆಯಲ್ಲಿ ನಿಯಮಗಳ ಕುರಿತು ಹೆಚ್ಚು ಮಾತನಾಡುತ್ತಾರೆ..ಆದರೆ ಶಾಲೆಯ ಮಕ್ಕಳ ಬ್ಯಾಗ್ ತೂಕದ ವಿಚಾರವಾಗಿ ಯಾವುದೇ ನಿಯಮಗಳನ್ನು ಸಹ ಇಲ್ಲಿಯವರೆಗೂ ವಿಧಿಸಿಲ್ಲ. ಈಗಾಗಲೇ ರಾಜ್ಯಸಭೆಯಲ್ಲಿ 2006ರಲ್ಲಿಯೇ ಶಾಲಾ ಮಕ್ಕಳ ಬ್ಯಾಗ್ ತೂಕ ಹೇಳಿಕೆ ಮಾಡುವ ವಿಚಾರವಾಗಿ ಈ ಹಿಂದೆ ಹೇಳಲಾಗಿದೆ..ಆದರೆ ಅದನ್ನು ಕೂಡ ಯಾರು ಪಾಲನೆಗೆ ತರಲಿಲ್ಲ. ಪಾಲಿಸಲು ಇಲ್ಲ. ಅದನ್ನ ಅಲ್ಲಿಗೆ ಕೈ ಬಿಟ್ಟರು. ಕೇಂದ್ರ ಸರ್ಕಾರ ಕೂಡ 2020ರಲ್ಲಿ ಮಕ್ಕಳ ಶಾಲಾ ಬ್ಯಾಗ್ ತೂಕದ ವಿಚಾರವಾಗಿ ಮಾತನಾಡಿ ಇಂತಿಷ್ಟೇ ತೂಕ ಮಕ್ಕಳ ಶಾಲಾ ಬ್ಯಾಗ್ ಇರಬೇಕು ಎನ್ನುವ ನಿಯಮವನ್ನು ಹೇಳಿತ್ತು. 

ಅದನ್ನೇ ಪಾಲನೆ ಮಾಡುವಂತೆಯೂ ಆದೇಶ ಹೊರಡಿಸಿತ್ತು. ಅದು ಕೂಡ ಆಗುತ್ತಿಲ್ಲ ಎಂದು ತಿಳಿದು ಬಂದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಹಳ್ಳಿಗಳಲ್ಲಿ ಮತ್ತು ಸಿಟಿ ನಗರಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಶಾಲಾ ಮಕ್ಕಳ ಬ್ಯಾಗ್ ತೂಕ ಕಡಿಮೆ ಆಗದೆ ಇರುವುದಕ್ಕೆ, ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದು ಖಚಿತ. ಇದಕ್ಕೆ ತಕ್ಕ ಕ್ರಮವನ್ನು ಕೈಗೊಂಡು ಅವರ ಯೋಗ ಕ್ಷೇಮದ ಕುರಿತಾಗಿ ಶಾಲೆಯ ಮಕ್ಕಳ ಬ್ಯಾಗ್ ತೂಕವನ್ನು ಕಡಿಮೆ ಮಾಡುವಂತೆ ಹೈಕೋರ್ಟ್ನಿಂದ ಸರ್ಕಾರಕ್ಕೆ ಕೆಲವು ಸೂಕ್ತ ನಿದರ್ಶನಗಳನ್ನು ಕೈಗೊಳ್ಳಲು ಅರ್ಜಿ ಹಾಕಲಾಗಿದೆ.. ಆದಷ್ಟು ಬೇಗ ಈ ಶಾಲಾ ಬ್ಯಾಗ್ ತೂಕ ಇಳಿಕೆ ಕಆಗಲಿ ಅಂತಹ ನಿಯಮ ತನ್ನಿ ಎಂದು ಕಾಮೆಂಟ್ ಮಾಡಿ. ಮತ್ತು ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೇನೇ ನಿಮ್ಮ ಅನಿಸಿಕೆಯನ್ನು ಕೂಡ ಕಮೆಂಟ್ ಸೆಕ್ಷನಲ್ಲಿ ಹೇಳಿ, ಧನ್ಯವಾದ...